ಆಮಿ ವಿರ್ಕ್ 
ವಿದೇಶ

ಖ್ಯಾತ ಪಂಜಾಬಿ ಗಾಯಕನ ಮೇಲೆ ಗುಂಡಿನ ದಾಳಿ; ಜಸ್ಟ್ ಮಿಸ್, ಪ್ರಾಣಾಪಾಯದಿಂದ ಪಾರು!

ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಘಟನೆಯ ಹಿಂದಿನ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಬಾಟ್ಸ್‌ಫೋರ್ಡ್‌: ಕೆನಡಾದ ಅಬಾಟ್ಸ್‌ಫೋರ್ಡ್‌ನಲ್ಲಿ ಖ್ಯಾತ ಪಂಜಾಬಿ ಗಾಯಕ ಆಮಿ ವಿರ್ಕ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಗಾಯಕ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸೆಪ್ಟೆಂಬರ್ 5 ರಂದು ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ರೋಜರ್ಸ್ ಫೋರಂನಲ್ಲಿ ಆಮಿ ವಿರ್ಕ್ ಅವರ ಸಂಗೀತ ಕಚೇರಿ ಮುಗಿಸಿ ಹೊರಟ ಸ್ವಲ್ಪ ಸಮಯದ ನಂತರ ಈ ದಾಳಿ ನಡೆದಿದೆ.

ಕೆನಡಾದ ಮಾಧ್ಯಮ ಸಂಸ್ಥೆಗಳಾದ ವ್ಯಾಂಕೋವರ್ ಸನ್ ಮತ್ತು ಅಬಾಟ್ಸ್‌ಫೋರ್ಡ್ ನ್ಯೂಸ್ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಗುಂಡಿನ ಚಕಮಕಿಯನ್ನು ವರದಿ ಮಾಡಿವೆ.

"ಸೆಪ್ಟೆಂಬರ್ 5, 2026 ರಂದು ರಾತ್ರಿ 11:00 ಗಂಟೆಯ ನಂತರ, ಮೆಕಲಮ್ ರಸ್ತೆಯ 2500 ಬ್ಲಾಕ್‌ನಲ್ಲಿ ವಾಹನವೊಂದು ಪ್ರಯಾಣಿಸುತ್ತಿದ್ದಾಗ ಮತ್ತೊಂದು ವಾಹನದಲ್ಲಿದ್ದವರು ಅದರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ದೊರೆತ ತಕ್ಷಣ ಅಬಾಟ್ಸ್‌ಫೋರ್ಡ್ ಪೊಲೀಸ್ ಗಸ್ತು ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಡಿನ ದಾಳಿ ನಡೆದಿರುವುದನ್ನು ದೃಢಪಡಿಸಿದ್ದಾರೆ.

ಗುಂಡಿನ ದಾಳಿಯ ಸುದ್ದಿ ಹೊರಬಿದ್ದ ಬಳಿಕ, ಈ ಘಟನೆ ಆಮಿ ವಿರ್ಕ್ ಅವರ ಕಾರನ್ನೇ ಗುರಿಯಾಗಿಸಿಕೊಂಡು ನಡೆದಿತ್ತೇ ಎಂಬ ಪ್ರಶ್ನೆ ಮೂಡಿದೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಘಟನೆಯ ಹಿಂದಿನ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪ್ರಾಥಮಿಕ ತನಿಖೆಯ ಪ್ರಕಾರ, ಇದು ನಿರ್ದಿಷ್ಟ ವಾಹನ ಅಥವಾ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ನಡೆದ ಪೂರ್ವಯೋಜಿತ ಘಟನೆ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಪೊಲೀಸರು ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

37 ವರ್ಷ ನಿಷೇಧದ ಬಳಿಕ ಮತ್ತೆ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ; ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

KGF ಕಾಲೇಜಿನಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ: ತರಗತಿಯಲ್ಲಿ ಯುವಕನ ಥಳಿತಕ್ಕೆ ಪ್ರಜ್ಞೆತಪ್ಪಿ ಬಿದ್ದ ವಿದ್ಯಾರ್ಥಿನಿ, Video

ಮಾಯಾವತಿ 3ನೇ ಬಾರಿ ಯೂ-ಟರ್ನ್: ಸೋದರಳಿಯ ಆಕಾಶ್ ಆನಂದ್ ಗೆ ಮತ್ತೆ ಅವಕಾಶ; ಆದ್ರೆ ಮಾವನಿಗೆ ಷರತ್ತು ಅನ್ವಯ!

ಡಿಕೆಶಿ ಸರ್ಕಾರಕ್ಕೆ ನಾಳೆ 100 ದಿನದ ಸಂಭ್ರಮ: ಬಡವರಿಗೆ ಬಂಪರ್ ಗಿಫ್ಟ್! 15 ಲಕ್ಷ ಉಚಿತ ಸೈಟ್ ಹಂಚಿಕೆಗೆ ಸಂಪುಟ ಅಸ್ತು!

ತೀರಾ ಹತ್ತಿರ ಬಂದು ಪೋಟೋ ತೆಗೆಯಲು ಮುಂದಾದ ಪಾಪರಾಜಿ: ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ ಮಾಡಿದ್ದೇನು? ಈ Video ನೋಡಿ...