ನರೇಂದ್ರ ಮೋದಿ- ಡೊನಾಲ್ಡ್ ಟ್ರಂಪ್ online desk
ವಿದೇಶ

ಕೊನೆಗೂ ಭಾರತವೇ ಬೇಕಾಯ್ತು: Iran ಸಮಸ್ಯೆಗೆ IMEEC ಒಂದೇ ಪರಿಹಾರ- Donald Trump

ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್‌ನಾದ್ಯಂತ ಸಂಪರ್ಕ, ವ್ಯಾಪಾರ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವುದು ಈ ಕಾರಿಡಾರ್‌ನ ಗುರಿಯಾಗಿದೆ.

ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್' (IMEEC) ಗೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂಧನ ಮೂಲಸೌಕರ್ಯವನ್ನು ಇರಾನ್‌ನ ನಿಯಂತ್ರಣಾ ಕೇಂದ್ರಗಳಿಂದ (ಚೆಕ್‌ಪಾಯಿಂಟ್‌ಗಳಿಂದ) ದೂರ ಸ್ಥಳಾಂತರಿಸಲು ಇದು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಸಂದರ್ಭದಲ್ಲಿ 'ಗಲ್ಫ್ ಸಹಕಾರ ಮಂಡಳಿ'ಯೊಂದಿಗಿನ ಬಹುಪಕ್ಷೀಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅಮೆರಿಕದ ನಾಯಕ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

"ನೆರೆಯ ದೇಶಗಳ ವ್ಯಾಪಾರಿ ನೌಕೆಗಳ ಮೇಲೆ ಇರಾನ್ ನಡೆಸಿದ ಭಯೋತ್ಪಾದಕ ದಾಳಿಗಳು, ಮಧ್ಯಪ್ರಾಚ್ಯದ ಇಂಧನ ಮೂಲಸೌಕರ್ಯವನ್ನು ಇರಾನ್‌ನ ನಿಯಂತ್ರಣಾ ಕೇಂದ್ರಗಳಿಂದ ದೂರ ಸ್ಥಳಾಂತರಿಸುವ ಅಗತ್ಯವನ್ನು ಎತ್ತಿ ತೋರಿಸಿವೆ," ಎಂದು ಟ್ರಂಪ್ ಹೇಳಿದರು.

"ಅದಕ್ಕಾಗಿಯೇ ನನ್ನ ಆಡಳಿತ 'ಭಾರತ-ಮಧ್ಯಪ್ರಾಚ್ಯ ಆರ್ಥಿಕ ಕಾರಿಡಾರ್' ಹಾಗೂ ತೈಲ ರವಾನೆಗಾಗಿ ಪೈಪ್‌ಲೈನ್ ಅಥವಾ ಇತರ ಯಾವುದೇ ವಿಧಾನಗಳ ಮೂಲಕ ಕೈಗೊಳ್ಳುವ ಯೋಜನೆಗಳನ್ನು ಬಲವಾಗಿ ಬೆಂಬಲಿಸುತ್ತದೆ. ಈ ಪ್ರದೇಶವನ್ನು ದಶಕಗಳಿಂದ ಕಾಡುತ್ತಿರುವ ಸವಾಲುಗಳನ್ನು ಜಂಟಿಯಾಗಿ ಮೆಟ್ಟಿ ನಿಲ್ಲುವ ಹಂತದಲ್ಲಿದ್ದೇವೆ," ಎಂದು ಅವರು ಹೇಳಿದ್ದಾರೆ.

'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್'

'ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್' ಎಂಬುದು ಬಹುರಾಷ್ಟ್ರೀಯ ಮತ್ತು ಬಹು-ಮಾದರಿಯ ಸಂಪರ್ಕ ಹಾಗೂ ಮೂಲಸೌಕರ್ಯ ಉಪಕ್ರಮವಾಗಿದ್ದು, ಇದನ್ನು ಸೆಪ್ಟೆಂಬರ್ 2023 ರಲ್ಲಿ ನವದೆಹಲಿಯಲ್ಲಿ ನಡೆದ G20 ಶೃಂಗಸಭೆಯ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಿಸಲಾಗಿತ್ತು.

ಪ್ರಸ್ತಾವಿತ ಯೋಜನೆ ಎರಡು ಪ್ರತ್ಯೇಕ ಕಾರಿಡಾರ್‌ಗಳನ್ನು ಒಳಗೊಂಡಿರುತ್ತದೆ - ಪೂರ್ವ ಕಾರಿಡಾರ್ ಮತ್ತು ಉತ್ತರ ಕಾರಿಡಾರ್. ಮೊದಲನೆಯದು ಭಾರತವನ್ನು ಅರೇಬಿಯನ್ ಗಲ್ಫ್‌ಗೆ ಸಂಪರ್ಕಿಸಿದರೆ, ಎರಡನೆಯದು ಅರೇಬಿಯನ್ ಗಲ್ಫ್ ನ್ನು ಯುರೋಪ್‌ಗೆ ಸಂಪರ್ಕಿಸುತ್ತದೆ.

ಈ ವ್ಯವಸ್ಥೆಯು ರೈಲು ಮಾರ್ಗವೊಂದನ್ನು ಒಳಗೊಂಡಿರುತ್ತದೆ; ಇದು ಅಸ್ತಿತ್ವದಲ್ಲಿರುವ ಸಮುದ್ರ ಮತ್ತು ರಸ್ತೆ ಸಾರಿಗೆ ಮಾರ್ಗಗಳಿಗೆ ಪೂರಕವಾಗಿ, ವೆಚ್ಚ-ಪರಿಣಾಮಕಾರಿ ಗಡಿಯಾಚೆಗಿನ 'ಹಡಗು-ರೈಲು' ಸಾರಿಗೆ ಜಾಲವಾಗಿ ಕಾರ್ಯನಿರ್ವಹಿಸುತ್ತದೆ. ಸದಸ್ಯ ರಾಷ್ಟ್ರಗಳು ಇಂಧನ ಮತ್ತು ಡಿಜಿಟಲ್ ಸಂಪರ್ಕಕ್ಕಾಗಿ ಕೇಬಲ್ ನ್ನು ಹಾಗೂ ಸ್ವಚ್ಛ ಹೈಡ್ರೋಜನ್ ರಫ್ತಿಗಾಗಿ ಪೈಪ್‌ಲೈನ್ ಅನ್ನು ಅಳವಡಿಸಲು ಬಯಸುತ್ತವೆ.

ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್‌ನಾದ್ಯಂತ ಸಂಪರ್ಕ, ವ್ಯಾಪಾರ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವುದು ಈ ಕಾರಿಡಾರ್‌ನ ಗುರಿಯಾಗಿದೆ.

ಇರಾನ್‌ನ ಸರ್ವನಾಶದ ಕುರಿತು ಟ್ರಂಪ್ ಎಚ್ಚರಿಕೆ

ಇದಲ್ಲದೆ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ತಾವು ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಪುನರುಚ್ಚರಿಸುತ್ತಾ, ಅಮೆರಿಕದ ಅಧ್ಯಕ್ಷರು ಇರಾನ್‌ಗೆ ಮತ್ತೊಮ್ಮೆ ಸರ್ವನಾಶದ ಎಚ್ಚರಿಕೆಯನ್ನು ನೀಡಿದ್ದಾರೆ.

"ನಾವು ಇರಾನ್ ಅನ್ನು ಆರ್ಥಿಕವಾಗಿ ಪ್ರತ್ಯೇಕಿಸಿದ್ದೇವೆ ಮತ್ತು ಅವರು ಶೀಘ್ರದಲ್ಲೇ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ... ಒಂದು ಸಮಯ ಬರುತ್ತದೆ, ಆಗ ತೀರಾ ತಡವಾಗಿರುತ್ತದೆ ಮತ್ತು ಒಂದು ರಾಷ್ಟ್ರವಾಗಿ ಅವರು ಉಳಿದುಕೊಳ್ಳಲು ಬಿಡಲು ನಮಗೆ ಅವಕಾಶವಿರುವುದಿಲ್ಲ. ನಾನು ಅದನ್ನು ನೋಡಲು ಬಯಸುತ್ತೇನೆ ಮತ್ತು ಈ ಮೇಜಿನ ಸುತ್ತಲಿರುವ ಜನರು ಕೂಡ ಅದನ್ನು ನೋಡಲು ಬಯಸುತ್ತಾರೆ ಎಂದು ನಾನು ನಿಮಗೆ ಹೇಳಬಲ್ಲೆ," ಎಂದು ಅವರು ಹೇಳಿದರು.

ಆದರೆ ಅದೇ ಸಮಯದಲ್ಲಿ, ಕಳೆದ ವರ್ಷ ಅಮೆರಿಕ ನಡೆಸಿದ 'ಆಪರೇಷನ್ ಮಿಡ್‌ನೈಟ್ ಹ್ಯಾಮರ್' (Operation Midnight Hammer) ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಾಶಪಡಿಸಿದ್ದು, ಅದು ಈಗ ಅವಶೇಷಗಳ ರಾಶಿಯಡಿ ಹೂತುಹೋಗಿದೆ ಎಂದು ಟ್ರಂಪ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚುನಾವಣಾ ಆಯೋಗದಲ್ಲಿ ಆಂತರಿಕ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

ಮೀರಾಬಾಯಿ ಚಾನುಗೆ ಬೆಳ್ಳಿ ಪದಕ: 98ರ ಬಳಿಕ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಮೊದಲ ಪದಕ!

ಭೀಕರ ಅಪಘಾತ; ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಹರಿದ ಪಿಕಪ್ ಕ್ರೇನ್, Video

ಜಪಾನ್ ವಿರುದ್ಧ ಗೋಲ್ಡನ್ ಡಕ್; Unwanted Record ಸೃಷ್ಟಿಸಿದ ಅಭಿಷೇಕ್ ಶರ್ಮಾ: ಈ ದಾಖಲೆ ಮುರಿಯುವುದು ಯಾರಿಗೂ ಅಸಾಧ್ಯ!

ರಾಷ್ಟ್ರಗೀತೆಯಂತೆ ‘ವಂದೇ ಮಾತರಂ’ ಕಡ್ಡಾಯವಲ್ಲ, ಹಾಡುವುದು ಆಯ್ಕೆಗೆ ಬಿಟ್ಟದ್ದು: ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಉತ್ತರ