ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ 
ವಿದೇಶ

ಇನ್ನು ನಿಮ್ಮ ಆಟ ನಡೆಯಲ್ಲ, ಉಗ್ರವಾದ ನಿಲ್ಲಿಸಿ-ಬುದ್ಧಿ ಕಲಿಯಿರಿ: ಸುಳ್ಳು ಹೇಳಿದ ‘ಸರಣಿ ಭಯೋತ್ಪಾದಕ’ Pakಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು..!

ಭಯೋತ್ಪಾದನೆಯ ಪರಿಣಾಮಗಳಿಂದ ತಮಗೆ ರಕ್ಷಣೆ ಇದೆ ಎಂದು ಭಾವಿಸುವ ಉಗ್ರ ಪೋಷಕ ರಾಷ್ಟ್ರಗಳ ಆಟ ಇನ್ನು ಸಾಗದು", ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತವು ತನ್ನ ಆತ್ಮರಕ್ಷಣೆಯ ಹಕ್ಕನ್ನು ಖಂಡಿತವಾಗಿಯೂ ಮತ್ತು ಬಲವಾಗಿ ಚಲಾಯಿಸಲಿದೆ.

ನ್ಯೂಯಾರ್ಕ್: ಉಗ್ರವಾದವನ್ನು ಜಾಗತಿಕವಾಗಿ ಸಾಮಾನ್ಯೀಕರಿಸಲು ಯತ್ನಿಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸರಣಿ ಭಯೋತ್ಪಾದನೆ ನಡೆಸುವ ದೇಶದ ಇಂತಹ ಯಾವುದೇ ವಾದಗಳು ಇನ್ನು ಮುಂದೆ ನಡೆಯುವುದಿಲ್ಲ" ಎಂದು ಅವರು ಜಾಗತಿಕ ನಾಯಕರ ಸಮ್ಮುಖದಲ್ಲೇ ಗುಡುಗಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) 81ನೇ ಅಧಿವೇಶನವನ್ನುದ್ದೇಶಿಸಿ ಶನಿವಾರ ಮಾತನಾಡಿದ ಜೈಶಂಕರ್ ಅವರು, ನೆರೆರಾಷ್ಟ್ರದ ಮುಖವಾಡವನ್ನು ಜಗತ್ತಿನ ಎದುರು ಕಳಚಿಟ್ಟರು.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ ಬೆನ್ನಲ್ಲೇ, ಭಾರತವು ತನ್ನ 'ರೈಟ್ ಆಫ್ ರಿಪ್ಲೈ' (ಪ್ರತ್ಯುತ್ತರ ನೀಡುವ ಹಕ್ಕು) ಚಲಾಯಿಸಿ ತಕ್ಕ ಶಾಸ್ತಿ ಮಾಡಿದೆ.

ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಹೆಸರನ್ನು ನೇರವಾಗಿ ಪ್ರಸ್ತಾಪಿಸದೆಯೇ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ ಜೈಶಂಕರ್, "ಸ್ನೇಹ ಮತ್ತು ಸೌಹಾರ್ದತೆ ಎಂದಿಗೂ ಭಯೋತ್ಪಾದನೆಯೊಂದಿಗೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.

ಗಡಿಯಾಚೆಗಿನ ಉಗ್ರವಾದವನ್ನು ದೇಶದ ನೀತಿಯನ್ನಾಗಿ ಮಾಡಿಕೊಂಡಿರುವ ಸರ್ಕಾರಗಳು ಜಾಗತಿಕ ವ್ಯವಸ್ಥೆಗೆ ಧಕ್ಕೆ ತರುತ್ತಿವೆ. ಅಂತಹ ದೇಶಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಣೆಗಾರರನ್ನಾಗಿ ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

"ಭಯೋತ್ಪಾದನೆಯ ಪರಿಣಾಮಗಳಿಂದ ತಮಗೆ ರಕ್ಷಣೆ ಇದೆ ಎಂದು ಭಾವಿಸುವ ಉಗ್ರ ಪೋಷಕ ರಾಷ್ಟ್ರಗಳ ಆಟ ಇನ್ನು ಸಾಗದು", ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತವು ತನ್ನ ಆತ್ಮರಕ್ಷಣೆಯ ಹಕ್ಕನ್ನು (Right to Self-Defence) ಖಂಡಿತವಾಗಿಯೂ ಮತ್ತು ಬಲವಾಗಿ ಚಲಾಯಿಸಲಿದೆ ಎಂದು ಎಚ್ಚರಿಸಿದರು.

ಉಗ್ರವಾದವನ್ನು ಹರಡುವ ದೇಶವೇ ಮೊದಲು ತನ್ನ ಹಾದಿಯನ್ನು ತಿದ್ದಿಕೊಳ್ಳಬೇಕು ಎಂದು ಅವರು ನೇರ ಸಂದೇಶ ರವಾನಿಸಿದರು.

ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯ ಹಾಗೂ ಭಾರತವು ನೀರನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿತ್ತು.

ಇದೇ ವೇಳೆ 2025ರಲ್ಲಿ ಭಾರತದೊಂದಿಗಿನ ಸಂಘರ್ಷದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ “ಸಕಾಲಿಕ ಮಧ್ಯಸ್ಥಿಕೆ”ಯನ್ನು ಶ್ಲಾಘಿಸಿದ್ದರು.

ಸುಮಾರು 23 ನಿಮಿಷಗಳ ಭಾಷಣದಲ್ಲಿ ಷರೀಫ್ ಕಾಶ್ಮೀರ ವಿಚಾರವನ್ನೂ ಪ್ರಸ್ತಾಪಿಸಿದ್ದರು. 2025ರಲ್ಲಿ ಉಂಟಾದಂತಹ ಸಂಘರ್ಷದ ಅಂಚಿಗೆ ದಕ್ಷಿಣ ಏಷ್ಯಾ ಮತ್ತೆ ತಲುಪದಂತೆ ಮಾಡಲು ಕಾಶ್ಮೀರ ಸಮಸ್ಯೆಗೆ ನ್ಯಾಯಸಮ್ಮತ ಹಾಗೂ ನ್ಯಾಯಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿದ ಜೈಶಂಕರ್, ಭಯೋತ್ಪಾದನೆಯನ್ನು ಬೆಳೆಸುತ್ತಾ ಭಾರತದ ಸೌಹಾರ್ದತೆಯನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. ಉಗ್ರವಾದ ಮುಂದುವರಿದರೆ ಅದರ ಆಧಾರದ ಮೇಲೆ ಮಾಡಿಕೊಂಡಿರುವ ಒಪ್ಪಂದಗಳು ಮತ್ತು ತಿಳುವಳಿಕೆಗಳು (ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ಸೇರಿದಂತೆ) ಸಹಜವಾಗಿಯೇ ಪ್ರಶ್ನೆಗೆ ಒಳಗಾಗುತ್ತವೆ ಎಂದು ಎಚ್ಚರಿಸಿದ್ದಾರೆ.

ನಿರಂತರವಾಗಿ ಭಯೋತ್ಪಾದನೆ ನಡೆಸುವವರು’ ಭಯೋತ್ಪಾದನೆಯನ್ನು ಸಾಮಾನ್ಯಗೊಳಿಸಲು ಹಾಗೂ ಅದರ ಪರಿಣಾಮಗಳಿಂದ ವಿನಾಯಿತಿ ಪಡೆಯಲು ಮಾಡುವ ಯಾವುದೇ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ.

ನಿನ್ನೆ ನಿರಂತರವಾಗಿ ಭಯೋತ್ಪಾದನೆ ನಡೆಸುತ್ತಿರುವ ವ್ಯಕ್ತಿಯೊಬ್ಬರು ಈ ಸಭೆಯ ಮುಂದೆ ವಾಸ್ತವಾಂಶಗಳನ್ನು ತಿರುಚಿ ಮಂಡಿಸಿದರು. ಭಯೋತ್ಪಾದನೆಯನ್ನು ಸಾಮಾನ್ಯಗೊಳಿಸಲು ಮತ್ತು ಅದರ ಪರಿಣಾಮಗಳಿಂದ ವಿನಾಯಿತಿ ಪಡೆಯಲು ವಾದಗಳನ್ನು ಮಂಡಿಸಲಾಯಿತು. ಅದು ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಭಯೋತ್ಪಾದನೆಯ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಹಕ್ಕನ್ನು ನಾವು ಬಳಸಿಕೊಳ್ಳುತ್ತೇವೆ. ಸ್ನೇಹ ಮತ್ತು ಸೌಹಾರ್ದತೆ ಭಯೋತ್ಪಾದನೆಯೊಂದಿಗೆ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯ ಮೇಲೆ ಆಧಾರಿತವಾಗಿರುವ ಯಾವುದೇ ತಿಳುವಳಿಕೆಗಳನ್ನು ಸಹಜವಾಗಿಯೇ ಮರುಪರಿಶೀಲಿಸಲಾಗುತ್ತದೆ. ಭಯೋತ್ಪಾದನೆಯ ಅಪರಾಧಿಯೇ ತನ್ನ ನಡೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

ಜಾಗತಿಕ ಶಾಂತಿಗೆ ನಿರಂತರ ಬೆದರಿಕೆಯಾಗಿ ಭಯೋತ್ಪಾದನೆ ಕಾಡುತ್ತಿದೆ. ಇದು ಗಡಿಯಾಚೆಗಿನ ಉದ್ದೇಶದೊಂದಿಗೆ ರಾಷ್ಟ್ರ ಪ್ರಾಯೋಜಿತವಾಗಿದ್ದರೆ, ಜಾಗತಿಕ ವ್ಯವಸ್ಥೆಗೆ ನೇರ ಸವಾಲಾಗುತ್ತದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವ ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಭಯೋತ್ಪಾದನೆ ವಿರುದ್ಧದ ಶೂನ್ಯ ಸಹಿಷ್ಣುತೆಯ ನಿಲುವಿನಲ್ಲಿ ಯಾವುದೇ ಸಡಿಲಿಕೆ ಇರಬಾರದು. ವಿಶೇಷವಾಗಿ ಅದರ ಹಣಕಾಸಿನ ಮೂಲಗಳನ್ನು ಬಹಿರಂಗಪಡಿಸಿ, ಅವುಗಳನ್ನು ತಡೆಯಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ್ತಷ್ಟು ಜಾಗತಿಕ ಬೆಂಬಲ; ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸ್ಥಾನ ಕುರಿತು ಭಾರತದ ಬೆನ್ನಿಗೆ ನಿಂತ ಪೋರ್ಚುಗಲ್, ಮಾರಿಷಸ್!

ಇಸ್ರೇಲ್ ಮೇಲಿನ ಅಕ್ಟೋಬರ್ 7ರ ದಾಳಿ 16 ಬಾರಿ ಸಂಭವಿಸಿದ 9/11ರ ದಾಳಿಗೆ ಸಮಾನ- ನೆತನ್ಯಾಹು

'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ’: SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!

ಗೋವಾದಲ್ಲಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಅವಘಡ; ನಟ ವಿಶಾಲ್ ಗೆ ಗಾಯ! Video

ತಂತ್ರಜ್ಞಾನ, ಆವಿಷ್ಕಾರದಿಂದ ಹೊಸ ವೇಗ, ಭಾರತದ ಆರ್ಥಿಕ ಬೆಳವಣಿಗೆ ಶೇ.10 ಮೀರಬಹುದು: ನಿರ್ಮಲಾ ಸೀತಾರಾಮನ್