ಭಕ್ತಿ-ಜ್ಯೋತಿಷ್ಯ

ಆಧುನಿಕ ವಿಧಾನಗಳಿಂದ ಮುಪ್ಪು ಮುಂದೂಡಬಹುದೇ?

ಆಧುನಿಕ ವಿಧಾನಗಳಿಂದ ಮುಪ್ಪು ಮುಂದೂಡಬಹುದೇ?
Published On :

ವೇದ ಕಾಲದ ಋಷಿಮುನಿಗಳು ತಮ್ಮ ದೈಹಿಕ ಮತ್ತು ಆಧ್ಯಾತ್ಮಿಕ ಸಾಮರ್ಥ್ಯದಿಂದ ನಮ್ಮ ದೇಹದಲ್ಲಿರುವ ಪಂಚಮಹಾಭೂತಗಳನ್ನು  ನಿಯಂತ್ರಿಸಬಲ್ಲವರಾಗಿದ್ದರು. ಆದರೆ ಅವರೆಂದೂ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳಲಿಲ್ಲ. ಇವತ್ತಿನ ಆಧುನಿಕ ಕಾಲದ ವೈದ್ಯರು ಮತ್ತು ಪರ್ಯಾಯ ಚಿಕಿತ್ಸಾ ವಿಧಾನಗಳ ಪ್ರಮುಖ ಗುರಿ ಎಂದರೆ ದೇಹದ ಚಕ್ರವನ್ನು ತಡೆದು ನಿಲ್ಲಿಸುವುದು, ಅದು ಸಾಧ್ಯವಾಗದಿದ್ದರೆ ಕಡೇಪಕ್ಷ ಆ ಚಕ್ರದ ತಿರುಗುವಿಕೆಯನ್ನು ನಿಧಾನವಾಗಿಸುವುದು. ಎಲ್ಲರ ಪ್ರಮುಖ ಗಮನ ಎಂದರೆ ವಯಸ್ಸಾಗುವುದು ಮತ್ತು ಮಾನಸಿಕ ಸ್ಥಿಮಿತ ತಪ್ಪದಂತೆ ನೋಡಿಕೊಳ್ಳುವುದು. ಇವೆರಡರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಸಾರ್ವತ್ರಿಕವಾದ ನಿಲುವು.
ಹಾಗಾದರೆ ವಯಸ್ಸಾಗುವುದು ಎಂದರೇನು? ಇದು ಸಾಮಾನ್ಯ ಜನರಿಗೆ ಮಾತ್ರ ಅನ್ವಯವಾಗುವಂಥದ್ದು ಎನ್ನುವುದನ್ನು ಆರಂಭದಲ್ಲೇ ಸ್ಪಷ್ಟಪಡಿಸಬೇಕು. ವಯಸ್ಸಾಗುವುದು ಎಂದರೆ ನಮ್ಮ ಇಂದ್ರಿಯಗಳ ಸಾಮರ್ಥ್ಯ ಕುಂದುವುದು, ಮೆದುಳಿನ ಗಾತ್ರ ಕಡಿಮೆಯಾಗುವುದು, ಆಲೋಚನಾ ಶಕ್ತಿ ಕಡಿಮೆಯಾಗುವುದು, ಮೂಳೆಗಳು ತಾಕತ್ತು ಕಳೆದುಕೊಂಡು ಸುಲಭವಾಗಿ ಪುಡಿಯಾಗುವುದು, ಒಟ್ಟಾರೆಯಾಗಿ ಇಡೀ ಶರೀರ ದುರ್ಬಲವಾಗುವುದು. ನಾವು ಪ್ರಕೃತಿಗೆ ವಿರುದ್ಧವಾಗಿ ಹೋಗುತ್ತಿರುವುದರಿಂದ ವಯಸ್ಸಾಗುವ ಪ್ರಕ್ರಿಯೆ ಕೂಡ ವೇಗ ಪಡೆದುಕೊಳ್ಳುತ್ತಿದೆ. ಹಸಿರು ಕ್ರಾಂತಿ, ಕೈಗಾರಿಕಾ ಕ್ರಾಂತಿಯಂತಹ ಅನೇಕ ಕ್ರಾಂತಿಗಳು ಸಸ್ಯ ಸಂಪತ್ತನ್ನೂ ದುರ್ಬಲಗೊಳಿಸಿವೆ. ಹೀಗಾಗಿ ಹೊಸಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿಯುತ್ತಿದ್ದೇವೆ ಎಂದು ಹೇಳಿಕೊಂಡರೂ ಕೂಡ ವಾಸ್ತವದಲ್ಲಿ ಅದು ನಮ್ಮ ದೇಹವನ್ನು ನಾಶಗೊಳಿಸುವ ಪ್ರಕ್ರಿಯೆಯನ್ನು ತೀವ್ರಗೊಳಿಸಿದಂತೆ. ತಿನ್ನುವ ಆಹಾರದಲ್ಲಿ ಮೊದಲೇ ಸತ್ವವಿಲ್ಲ, ಅದರ ಜತೆಗೆ ಮುಪ್ಪು ಮುಂದೂಡಲು ಕಾಸ್ಮೆಟಿಕ್ ಟ್ರೀಟ್‌ಮೆಂಟ್, ಲೇಸರ್ ಟ್ರೀಟ್‌ಮೆಂಟ್‌ನಂತಹ ಚಿಕಿತ್ಸೆಗಳು ಬೇರೆ. ಇವುಗಳಲ್ಲೆಲ್ಲ ಬಳಕೆಯಾಗುವುದು ಅಪಾಯಕಾರಿ ರಾಸಾಯನಿಕಗಳು. ಹೀಗಾಗಿ ಇವುಗಳಿಂದ ಒಂದಷ್ಟು ಅನಾರೋಗ್ಯ ತಂದುಕೊಳ್ಳುವುದರ ಜತೆಗೆ, ಮುಪ್ಪನ್ನೂ ಬಹುಬೇಗ ಸ್ವಾಗತಿಸುತ್ತಿದ್ದೇವೆ.
ಇನ್ನೊಂದು ಬೆಳವಣಿಗೆ ನಿಜಕ್ಕೂ ದಿಗಿಲು ಹುಟ್ಟಿಸುತ್ತದೆ. ಕೆಲವು ಯೋಗ ಮತ್ತಿತರ ವೇದ ಕಾಲದ ತಂತ್ರಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು ಮಾತ್ರವಲ್ಲದೆ ಅವುಗಳನ್ನು ವಿವಿಧ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಅಪಾರ ಬೇಡಿಕೆಯೂ ಇರುವುದರಿಂದ ಭಾರಿ ಪ್ರಮಾಣದ ಹಣವೂ ಸಂಗ್ರಹವಾಗುತ್ತದೆ. ಮುಂದೊಂದು ದಿನ ಆತ ರಾಜಕೀಯದಂತಹ ಕ್ಷೇತ್ರಕ್ಕೆ ಧುಮುಕುತ್ತಾನೆ. ತಪ್ಪು ಉದ್ದೇಶಕ್ಕೆ ವೇದ ಕಾಲದ ತಂತ್ರಗಳ ಬಳಕೆ ಆಗುತ್ತದೆ. ಗುರುಮುಖೇನ ಕಲಿಯದಿದ್ದರೆ ಅವು ಪರಿಣಾಮಕಾರಿ ಆಗುವುದಿಲ್ಲ ಎನ್ನುವುದನ್ನು ನಾನು ಪದೇಪದೇ ಹೇಳುತ್ತಲೇ ಬಂದಿದ್ದೇನೆ. ಯೋಗ, ಸನಾತನ ಕ್ರಿಯೆ ಯಾವುದನ್ನೇ ಆದರೂ ಗುರುವಿನ ಮೂಲಕ ಕಲಿತು ಪ್ರಯೋಗಿಸಿದರಷ್ಟೇ ಅದಕ್ಕೆ ಮಹತ್ವ.
ಯೋಗಿ ಅಶ್ವಿನಿ ಅವರ ಧ್ಯಾನ್ ಆಶ್ರಮದ ಸಂಪರ್ಕ: 7406175228/ 9448335830.


-ಯೋಗಿ ಅಶ್ವಿನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.