ಚಂದ್ರನ ಕಲೆಗಳನ್ನು ಅನುಸರಿಸಿ ತಿಂಗಳುಗಳು ರೂಪುಗೊಂಡರೆ, ಸೂರ್ಯನ ಚಲನೆಯನ್ನು ಅನುಸರಿಸಿ ಸಂವತ್ಸರವಾಗುತ್ತದೆ. ಭಾಸ್ಕರಾಚಾರ್ಯರು ತಮ್ಮ ಸಿದ್ಧಾಂತ ಶಿರೋಮಣಿಯಲ್ಲಿ ಚಂದ್ರ ಮತ್ತು ಸೂರ್ಯನ ಚಲನೆಯ ಸಂಬಂಧ ವಿವರಿಸಿದ್ದು, ಹೆಚ್ಚು ಸಮರ್ಪಕವಾಗಿದೆ. ಇದನ್ನು ಅನುಸರಿಸಿ ಅಧಿಕ ಮಾಸ ಮತ್ತು ಕ್ಷಯಮಾಸಗಳನ್ನು ಬಳಸಿ ಚಾಂದ್ರಮಾನ ಮತ್ತು ಸೌರಮಾನದ ನಡುವೆ ಸಂಬಂಧ ಕಲ್ಪಿಸುವ ಪದ್ಧತಿ ಭಾರತೀಯ ಪಂಚಾಂಗದಲ್ಲಿ ಬೆಳೆದುಬಂದಿದೆ.