

ಕುಂಡಲಿಯ ಲಗ್ನ, ಚಂದ್ರ ಮತ್ತು ಶುಕ್ರನ ರಾಶಿಯಿಂದ ಕುಜ ದ್ವಿತೀಯ, ಚತುರ್ಥ, ಸಪ್ತಮ, ಅಷ್ಟಮ, ದ್ವಾದಶದಲ್ಲಿ ಇದ್ದಾಗ ಕುಜ ದೋಷವಾಗುತ್ತದೆ. ಸ್ನೇಹಿತರಲ್ಲಿ, ಕುಟುಂಬದಲ್ಲಿ, ಬಂಧುಬಳಗದಲ್ಲಿ ಮತ್ತು ಅತೀ ಮುಖ್ಯವಾಗಿ ದಂಪತಿಯಲ್ಲಿ ಕುಜನ ಷಷ್ಟಾಷ್ಟಕ, ಸಮ ಸಪ್ತಕ ನಕ್ಷತ್ರಗಳಿದ್ದಾಗ ಮತ್ತು ಏಕ ನಕ್ಷತ್ರಗಳಲ್ಲಿದ್ದಾಗ ವಿಪರೀತ ದೋಷಗಳಾಗಿರುತ್ತದೆ.
ಉದಾಹರಣೆಗೆ ದಂಪತಿಯ ಜಾತಕದಲ್ಲಿ ಕುಜ ಕ್ರಮವಾಗಿ ವಿಶಾಖ ಮತ್ತು ಮೃಗಶಿರ ನಕ್ಷತ್ರಗಳಲ್ಲಿದ್ದಾಗ ಷಷ್ಟಾಷ್ಟಕ ದೋಷವಾಗುತ್ತವೆ. ಈ ಮಹಾದೋಷದಿಂದಾಗಿ ಕಲಹ ವಿಪರೀತವಾಗಿ ಹಾನಿ ಉಂಟು ಮಾಡುತ್ತದೆ.
22 ರಿಂದ 28 ಕೂಟ ಬಂದರೂ, ಕುಜ ಈ ರೀತಿ ಷಷ್ಟಾಷ್ಟಕ, ಸಮಸಪ್ತಕ, ಏಕ ನಕ್ಷತ್ರಗಳಲ್ಲಿದ್ದಾಗ, ಮಹಾದೋಷ ಉಂಟಾಗುತ್ತದೆ. ಕುಜನು ತ್ರಿಕೋಣ ರಾಶಿಯಲ್ಲಿದ್ದಾಗ ಉತ್ತಮ ಬಾಂಧವ್ಯ ಏರ್ಪಡುತ್ತವೆ ಮತ್ತು ಇತರ ಜಾಗದಲ್ಲೂ ಸಮಾಧಾನಕರ. ಕುಜನು ಅಗ್ನಿ, ಪೃಥ್ವಿರಾಶಿಗಳಲ್ಲಿ ಮಹಾ ದೋಷಕಾರಕ. ವಾಯುರಾಶಿಗಳಲ್ಲಿ ಕುಜನಿದ್ದಾಗ ಸಾಧಾರಣ ದೋಷ ಇರುತ್ತವೆ. ಜಲರಾಶಿಗಳಲ್ಲಿ ಕುಜನಿದ್ದಾಗ ದೋಷದ ಪ್ರಮಾಣ ಕಡಿಮೆ ಇರುತ್ತದೆ.
ಕುಜ ದೋಷಕ್ಕೆ ಪರಿಹಾರಗಳು: ಮಂಗಳವಾರ ಬೆಳಗ್ಗೆ 6 ರಿಂದ 7 ರೊಳಗೆ ಷಷ್ಠಿ ದಿನದಂದು ಮತ್ತು ಕೃತ್ತಿಕ ನಕ್ಷತ್ರದಂದು ದೇವಸ್ಥಾನಗಳಲ್ಲಿ ಸುಬ್ರಹ್ಮಣ್ಯ ಶಾಂತಿ ಮಾಡಿಸುವುದು. ಮಂಗಳವಾರದಂದು ಸುಬ್ರಹ್ಮಣ್ಯ ಸ್ವಾಮಿಗೆ ವಿಭೂತಿ ಅಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ಮಾಡಿಸುವುದು. ಮಂಗಳವಾರಗಳಂದು ನವಗ್ರಹ ದೇವಸ್ಥಾನಗಳಲ್ಲಿ ಕುಜಗ್ರಹಕ್ಕೆ ತೊಗರಿಬೇಳೆ, ಬೆಲ್ಲ, ಕಣಿಗಳೇ ಹೂವು ಅಲಂಕಾರ, ಕೆಂಪು ವಸ್ತ್ರ ಇವುಗಳನ್ನು ದಾನ ಕೊಡಬೇಕು.
ಹುತ್ತಕ್ಕೆ ಅರಿಶಿನ, ಕುಂಕುಮ, ಪ್ರದಕ್ಷಿಣೆ ಮಾಡುವುದು ಮೊದಲಾದವುಗಳಿಂದ ಕುಜದೋಷ ಪರಿಹಾರವಾಗುತ್ತದೆ. ಮಂಗಳವಾರಗಳಂದು ಬೆಳಗ್ಗೆ 6 ರಿಂದ 7 ರೊಳಗೆ ಕುಜ ಹೋರೆಯೊಳಗೆ ದಕ್ಷಿಣಾಭಿಮುಖವಾಗಿ ನಿಂತುಕೊಂಡು ಈ ಕೆಳಗೆ ಕೊಟ್ಟಿರುವ ಮೂಲಕ ಕುಜಮಂತ್ರವನ್ನು ಹೇಳುವುದು.
॥ಧರಣೀ ಗರ್ಭ ಸಂಭೂತಂ,
ವಿದ್ಯುತ್ಕಾಂತಿ ಸಮಪ್ರಭಂ
ಕುಮಾರಂ ಶಕ್ತಿ ಹಸ್ತಂಚ,
ಮಂಗಳಂ ಪ್ರಣಮಾಮ್ಯಹಂ॥
ಮಾಹಿತಿಗೆ ಸಂಪರ್ಕಿಸಿ ಮೊ. 9902523817.
- ಎಂ.ಎನ್. ರಾಜಕೇಸರಿ