ಅಲೌಕಿಕಕ್ಕೆ ವಾನಪ್ರಸ್ಥ

ಅಲೌಕಿಕಕ್ಕೆ ವಾನಪ್ರಸ್ಥ
Updated on: 

ವೈದಿಕ ಸಂಸ್ಕೃತಿಯು ತುಂಬಾ ವೈಜ್ಞಾನಿಕವೂ ಹಾಗೂ ನಿಖರ ವಿಜ್ಞಾನವೂ ಆಗಿದೆ. ಇದು ಇಡೀ ಸೃಷ್ಟಿಕ್ರಿಯೆಯ ವಿಜ್ಞಾನಶಾಸ್ತ್ರ. ಅಣುರೂಪದೊಳಗೊಂದು ಅಣುರೂಪ ಇದೆಯೆಂಬುದನ್ನು ತುಂಬಾ ಸ್ಪಷ್ಟವಾಗಿ ತಿಳಿಸಿಕೊಡುವ ಶಾಸ್ತ್ರವಿದು. ಒಂದು ನಿರ್ದಿಷ್ಟ ಮಾರ್ಗ ಸೃಷ್ಟಿ ಮಾಡಿಕೊಟ್ಟು ಅದರಲ್ಲಿ ನಡೆಯುವ ಬಗೆಯನ್ನೂ ತಿಳಿಸಿಕೊಟ್ಟು ಸೃಷ್ಟಿಕ್ರಿಯೆಯ ರಹಸ್ಯಗಳನ್ನು ಅನಾವರಣಗೊಳಿಸಿ ರೋಗಮುಕ್ತ ದೇಹಕ್ಕೆ ಹೊಸದೊಂದು ಜ್ಞಾನ ಒದಗಿಸುವುದು ವೈದಿಕ ಸಂಸ್ಕೃತಿ.
ಯಶಸ್ಸು ಬಯಸುವವರು ಇಲ್ಲಿ ಬಹಳ ಜನ. ಆದರೆ ಯಶಸ್ಸು ಸಾಧಿಸುವವರು ತುಂಬಾ ಕಡಿಮೆ ಮಂದಿ. ಕಾರಣ ಬಹಳ ಸರಳ. ಯಶಸ್ವಿ ವ್ಯಕ್ತಿಗಳಲ್ಲಿ ಈ ಮೂರು ಅಂಶಗಳು ಕಡ್ಡಾಯವಾಗಿ ಇರುತ್ತವೆ. ಅಷ್ಟಾಂಗ ಯೋಗದ ಐದು ಯಮಗಳಿರುವ ಲಕ್ಷಣದ ಒಬ್ಬ ಗುರು, ತನ್ನ ಗುರಿಯ ಬಗೆಗೆ ಬೇರೆ ವಿಷಯಗಳಿಗಿಂತ ಹೆಚ್ಚಿನ ಆದ್ಯತೆ ಹಾಗೂ ನಿತ್ಯ ಸೇವೆ ಮತ್ತು ದಾನಗಳ ಜೊತೆಜೊತೆಗೆ ಮಾಡುವ ಸತತ ಅಭ್ಯಾಸಗಳು. ಇವೇ ಆ ಮೂರು ಅಂಶಗಳು.
ಈ ಮೂರೂ ಅಂಶಗಳು ಒಂದು ಚೌಕಟ್ಟಿನಲ್ಲಿ ಬಂಧಿಸಲ್ಪಟ್ಟಿರುತ್ತವೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸ. ಇವುಗಳಲ್ಲಿ ಪ್ರತಿ ಆಶ್ರಮವೂ ತನ್ನ ದಿಕ್ಕಿನಲ್ಲಿ ಒಂದಾದ ಮೇಲೊಂದಾಗಿ ತಾನಾಗಿ ಪ್ರವೇಶ ಪಡೆಯುತ್ತವೆ. ಒಂದು ಆಶ್ರಮದಿಂದ ಇನ್ನೊಂದಕ್ಕೆ ಪಯಣ ಸಹಜ ಹಾಗೂ ಅನಿವಾರ್ಯ. ಗುರುವೊಬ್ಬ ಯೋಗದ ಮುಖಾಂತರ ಕಲಿಸುವುದೂ ಇದನ್ನೇ. ಇದನ್ನು ಅರಿಯದವನು ಒಂದು ಅವಸ್ಥೆಯಿಂದ ಇನ್ನೊಂದಕ್ಕೆ ಒತ್ತಾಯಪೂರ್ವಕ ಎಂಬಂತೆ ವೇಗವಾಗಿ ಪ್ರವೇಶಿಸುತ್ತಾನೆ.
ನಾನು ವಾನಪ್ರಸ್ಥ ಆಶ್ರಮ ಹಾಗೂ ಯೋಗ ಗುರುವಿನ  ಬಗ್ಗೆ ಒಂದಷ್ಟು ಬೆಳಕು ಚೆಲ್ಲಲು ಇಷ್ಟಪಡುತ್ತೇನೆ. ಜನರು ಸನ್ಯಾಸದ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಈ ಭೂಗೊಳಕ್ಕೆಲ್ಲಿ ಸನ್ಯಾಸ? ಇದೊಂದು ಹಡಗಿನಂತೆ. ನೀರಿರೋ ಸಮುದ್ರದಲ್ಲಿ ತೇಲಿ ಚಲಿಸಿ ಸೇರಬೇಕಿರೋ ಸ್ಥಳ ತಲುಪುತ್ತದೆ. ನೀರಿಲ್ಲ ಅಂದರೆ ಮುಳುಗದೆಯೇ ನಿಶ್ಚಳವಾಗಿರುತ್ತದೆ. ಮುಳುಗುವ ಸಾಧ್ಯತೆ ಇಲ್ಲ ಎನ್ನಬಹುದು.
ವಾನಪ್ರಸ್ಥ ಕೂಡ ಹಾಗೆಯೇ. ಯೋಗದಲ್ಲಿ ನೀಡದ ಆದ್ಯತೆಗಳಿಗೆ ಇಲ್ಲಿ ಆದ್ಯತೆ ಕೊಡುತ್ತದೆ. ಈ ಅವಧಿಯಲ್ಲಿ ಬೋಧನೆಗಳು ಮತ್ತು ಜ್ಞಾನದ ಕೊಡು-ಕೊಳುವಿಕೆಗಳು ಹೆಚ್ಚು. ಸಮುದ್ರದ ನಡುವೆ ಇರುವ ಹಡಗು ತಲುಪಬೇಕಿರೋ ಇನ್ನೊಂದು ತುದಿಯತ್ತ ಚಲಿಸುವ ಪ್ರಕ್ರಿಯೆಯಂತೆ ಈ ವಾನಪ್ರಸ್ಥ. ಹಡಗಿನ ಬಗೆಗೆ ನಂಬಿಕೆ ಇರುವವರಿಗೆ ಮಾತ್ರ ಕೊನೆಯ ತನಕ ಪಯಣಿಸುವ ಅವಕಾಶ ಇರುತ್ತದೆ. ಬ್ರಹ್ಮಚರ್ಯ ಮತ್ತು ಗೃಹಸ್ಥಾಶ್ರಮದಲ್ಲಿ ಪಯಣಿಸಿದ ಅನುಭವ ಧೈರ್ಯವಿದ್ದರೂ ವಾನಪ್ರಸ್ಥ ನಿಮ್ಮನ್ನು ಹಿಂದೆ ಹೆಜ್ಜೆ ಇಡುವಂತೆ ಮಾಡುತ್ತದೆ. ನಿಮಗಾಗ ಅಲೌಕಿಕದ ಆಸಕ್ತಿಯೇ ಹೆಚ್ಚು. ರಾಕೆಟ್ಟೊಂದು ಮೇಲೆ ಹಾರಬೇಕೆಂದರೆ ತನ್ನ ಮೇಲಿರೋ ಭಾರ ಕಳೆದುಕೊಳ್ಳೋದು ಅವಶ್ಯಕ. ಹಾಗೆಯೇ ವಾನಪ್ರಸ್ಥದಲ್ಲಿರಲು, ಬ್ರಹ್ಮಚರ್ಯ ಹಾಗೂ ಗೃಹಸ್ಥಾಶ್ರಮಗಳ ಭಾರವನ್ನು ಇಳಿಸುವುದು ಅತ್ಯಗತ್ಯ.

= ಯೋಗಿ ಅಶ್ವಿನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com