ಜನನ ಕಾಲದಲ್ಲಿ ಎಲ್ಲಾ ಗ್ರಹರಿಂದ ನೋಡಲ್ಪಟ್ಟ ಪೂರ್ಣ ಚಂದ್ರ ಆಕಾಶದಲ್ಲಿ ಕಂಡು ಬಂದರೆ ಆತ ಅರಿಷ್ಟ ನಾಶ ಮಾಡುತ್ತಾನೆ. ಚಂದ್ರನು ಪರಮೋಚ್ಚದಲ್ಲಿದ್ದು, ಆತನಿಂದ ನೋಡಲ್ಪಟ್ಟರೆ ಕಫ, ಪಿತ್ತ ದೋಷವು ವಾಂತಿ ಮುಂತಾದ ದೋಷಗಳು ಇಲ್ಲವಾಗುತ್ತದೆ.
ಚಂದ್ರ ಕ್ಷೀಣವಾದರೂ, ಶುಭಗ್ರಹರ ವರ್ಗದಲ್ಲಿದ್ದು, ಶುಭ ಗ್ರಹಗಳಿಂದ ನೋಡಲ್ಪಟ್ಟರೆ ಬಾಲಾರಿಷ್ಟ ದೂರವಾಗುತ್ತದೆ. ಚಂದ್ರನಿಂದ ಸಪ್ತಮ, ಅಷ್ಟಮ ಮತ್ತು ಷಷ್ಟದಲ್ಲಿ ಪಾಪ ಗ್ರಹರಿಲ್ಲದೆ, ಶುಭ ಗ್ರಹರು ಮಾತ್ರ ಇದ್ದರೆ ಅರಿಷ್ಟ ನಾಶವಾಗುತ್ತದೆ.
ಲಗ್ನಾಧಿಪತಿಯ ದೃಷ್ಟಿ
ಚಂದ್ರನು ಶುಭ ಗ್ರಹರಿಂದ ಕೂಡಿ ಶುಭ ಗ್ರಹರ ದ್ರೇಕ್ಕಾಣದಲ್ಲಿದ್ದರೆ ಅರಿಷ್ಟ ನಾಶ ಆಗುತ್ತದೆ. ಪೂರ್ಣ ಚಂದ್ರನು ಶುಭ ಗ್ರಹನ ದ್ವಾದಶಾಂಶದಲ್ಲಿದ್ದರೆ ಅರಿಷ್ಟ ನಾಶ ಅಗುತ್ತದೆ. ಚಂದ್ರನು ಶುಭ ಗ್ರಹನ ರಾಶಿಯಲ್ಲಿ ಲಗ್ನಾಧಿಪತಿಯಿಂದ ನೋಡಲ್ಪಟ್ಟು ಅನ್ಯ ಗ್ರಹರಿಂದ ಅರಿಷ್ಟ ಭಂಗ ಆಗುತ್ತದೆ.
ಚಂದ್ರ ಪಾಪ ಗ್ರಹನ ರಾಶಿ ಅಥವಾ ಅವನ ವರ್ಗದಲ್ಲಿ ಇದ್ದು ರಾಶ್ಯಾಧಿಪನಿಂದ ನೋಡಲ್ಪಟ್ಟರೆ, ಜನ್ಮ ರಾಶ್ಯಾಧಿಪನು ಬಲಿಷ್ಠನಾಗಿ ಶುಭ ಗ್ರಹನಿಂದ ನೋಡಲ್ಪಟ್ಟರೆ, ಜನ್ಮ ರಾಶ್ಯಾಧಿಪನು ಲಗ್ನದಲ್ಲಿದ್ದು ಎಲ್ಲಾ ಗ್ರಹರಿಂದ ನೋಡಲ್ಪಟ್ಟರೆ ಜಾತಕನಿಗೆ ಅರಿಷ್ಟ ನಾಶವಾಗುತ್ತದೆ.
ಪೂರ್ಣಚಂದ್ರ ತನ್ನ ಉಚ್ಚ ಕ್ಷೇತ್ರ ಮಿತ್ರ ಕ್ಷೇತ್ರ ಸ್ವವರ್ಗ ಅಥವಾ ಶುಭಗ್ರಹ ವರ್ಗದಲ್ಲಿದ್ದು, ಶುಭ ಗ್ರಹರಿಂದ ನೋಡಲ್ಪಡಬೇಕು ಹಾಗೂ ತನ್ನ ಶತ್ರು ಗ್ರಹ ಅಥವಾ ಪಾಪ ಗ್ರಹನ ಯುತಿ ದೃಷ್ಟಿ ಇಲ್ಲದೆ ಇದ್ದರೆ ಚಂದ್ರ ಅರಿಷ್ಟ ನಾಶ ಮಾಡುತ್ತಾನೆ.
ಜನನ ಕಾಲದಲ್ಲಿ ಆಹ್ಲಾದಕರ ಮಂದ ಮಾರುತ ಮತ್ತು ಮನೋಹರವಾದ ಮೋಡಗಳು ಇದ್ದು, ಗ್ರಹರು ನ್ಛ್ಗಿಟಿ ಬಿಂಬವುಳ್ಳವರಾದರೆ, ಕ್ಷಣದಲ್ಲಿಯೇ ಜಲ ಪ್ರವಾಹ ಧೂಳಿಯನ್ನು ಶಮನ ಮಾಡುವಂತೆ ಶಿಶುವಿನ ಅರಿಷ್ಟ ಭಂಗ ಆಗುತ್ತದೆ.
ಮೇಷ, ವೃಷಭ ಮತ್ತು ಕರ್ಕಾಟಕ ಲಗ್ನ ಸ್ಥಿತ ರಾಹುವು ಸಕಲ ಪೀಡೆಗಳಿಂದ ಜಾತಕನನ್ನು ರಕ್ಷಿಸುತ್ತಾನೆ. ಎಲ್ಲಾ ಗ್ರಹರು ತಮ್ಮ ತಮ್ಮ ದ್ರೇಕ್ಕಾಣದಲ್ಲಿ ಇದ್ದರೆ ಸೂರ್ಯ ಅಂಧಕಾರವನ್ನು ನಾಶ ಮಾಡುವಂತೆ ಅರಿಷ್ಟ ಫಲ ನಾಶ ಆಗುತ್ತದೆ. ಜನನ ಕಾಲದಲ್ಲಿ ಅಧಿಕ ಗ್ರಹರು ಶುಭ ಫಲದಾಯಕರಾದರೆ ಸೂರ್ಯನ ತ್ರಿಕೋಣದಲ್ಲಿ ಚಂದ್ರನು ಇರುವುದರಿಂದ ಅರಿಷ್ಟ ಫಲ ದೂರ ಹೋಗುತ್ತದೆ. ಗುರು ಮತ್ತು ಶುಕ್ರರು ಕೇಂದ್ರದಲ್ಲಿ ಇದ್ದರೆ ರಾಶಿಗಳಿಂದ ಹಾಗೂ ಚಂದ್ರ್ರನಿಂದ ಉಂಟಾದ ಅರಿಷ್ಟ ನಾಶ ಆಗುತ್ತದೆ.
ಗುರು ಮತ್ತು ಚಂದ್ರ ಕರ್ಕಾಟಕ ರಾಶಿಯಲ್ಲಿ ಚತುರ್ಥ (ಮೇಷ ಲಗ್ನ) ದಶಮ (ತುಲಾ ಲಗ್ನ) ಅಥವಾ ಲಗ್ನ ಭಾವಗತರಾಗಿ (ಕರ್ಕಾಟಕ ಲಗ್ನ) ಇರಬೇಕು ಹಾಗೂ ತುಲಾ ರಾಶಿಯಲ್ಲಿ ಶನಿ ಮತ್ತು ಬುಧನು ಉಳಿದ ಗ್ರಹರು (ರವಿ, ಶುಕ್ರ ಮತ್ತು ಶನಿ) ಏಕಾದಶ ತೃತೀಯ ಮತ್ತು ಷಷ್ಠ ಭಾವದಲ್ಲಿ ಇರಬೇಕು. ಇದರಿಂದ ಅರಿಷ್ಟ ದೂರವಾಗುತ್ತದೆ. ಮಾಹಿತಿಗಾಗಿ ಸಂಪರ್ಕಿಸಿ ಮೊ. 9448490860
- ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್