

ಜ್ಞಾನ ಪಡೆಯಲು ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಅಂಗಗಳಲ್ಲಿ ಸಾಧನೆ ಮಾಡಬೇಕು...
ಸತ್ವ, ರಜಸ್ ಮತ್ತು ತಮಸ್ ಈ ಮೂರು ಗುಣಗಳಿಂದ ಕೂಡಿರುವ ಪ್ರಪಂಚವನ್ನೆ 'ಪ್ರಕೃತಿ' ಎಂದು ಕರೆಯುವುದು. ಪುರುಷನು, ಪ್ರಕೃತಿಯ ಸಂಗಮದಿಂದ ಬಿಡುಗಡೆಯಾಗುವುದೇ ಮುಕ್ತಿ. ಆ ವಿದ್ಯೆಯ ನಿವಾರಣೆಗೆ ಚಾಂಚಲ್ಯ ದೂರವು, ವಿವೇಕ ಪೂರ್ಣವೂ ಆದ ಧ್ಯಾನವೇ ಮಾರ್ಗ. ಜ್ಞಾನ ಪಡೆಯಲು ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಅಂಗಗಳಲ್ಲಿ ಸಾಧನೆ ಮಾಡಬೇಕು. ಈ ಅಷ್ಟಾಂಗ ಯೋಗದಿಂದ ಮನಸ್ಸಿನ ಮಾಲಿನ್ಯ ನಾಶವಾಗಿ ಜ್ಞಾನ ದೀಪ್ತಿಯಿಂದ ವಿವೇಕ ಜ್ಞಾನ ಲಭಿಸುತ್ತದೆ.
ಯಮ
ಅಹಿಂಸೆ, ಸತ್ತ್ವ, ಆಸ್ತೇಯ (ಪರರ ಸ್ವತ್ತನ್ನು ಅಪಹರಿಸುವುದು) ಬ್ರಹ್ಮಚರ್ಯ (ಪಾವಿತ್ರ) ಅಪರಿಗ್ರಹ (ಇತರರಿಂದ ವಸ್ತುವನ್ನು ಸಂಗ್ರಹಿಸಬೇಕೆಂಬ ಆಸೆಯಿಂದ ದೂರವಿರುವುದು) ಈ ಮೌಲ್ಯಗಳೇ ಯಮವೆಂಬ ಯೋಗಾಂಗ.
ನಿಯಮ
ಶೌಚ (ಬಾಹ್ಯ ಮತ್ತು ಅಂತರಿಕ ಪರಿಶುದ್ಧತೆ) ಸಂತೋಷ (ಲಬಿಸಿದ್ದರಲ್ಲಿ ತೃಪ್ತಿ) ತಪಸ್ಸು (ಆದರ್ಶವನ್ನು ಸಾಧಿಸುವುದಕ್ಕೆ ನಿಷ್ಠೆ) ಸ್ವಾಧ್ಯಾಯ (ವಿಕಾಸಕ್ಕಾಗಿ ಕೈಗೊಳ್ಳುವ ಸ್ವಂತ ಅಧ್ಯಯನ) ಮತ್ತು ಭಗವಂತನ ಉಪಾಸನೆ ಇವು ನಿಯಮವೆಂಬ ಯೋಗಾಂಗ.
ಆಸನ
ದೇಹವನ್ನು ಆರೋಗ್ಯವಾಗಿಡಲು ಯೋಗಿಕ ವ್ಯಾಯಾಮ ಅವಶ್ಯ. ಪತಂಜಲಿಯವರು ಧ್ಯಾನಕ್ಕೆ ಸ್ಥಿರವಾಗಿ ಕುಳಿತುಕೊಳ್ಳಲು ಸಹಾಯಕವಾಗುವುದೇ ಆಸನವೆಂಬ ಯೋಗಾಂಗವೆಂದು ಹೇಳಿದ್ದಾರೆ. ಯೋಗ ಯಜ್ಞವಲ್ಕ, ಹಠಯೋಗ, ಪ್ರದೀಪಿಕ, ಮೊದಲಾದ ಗ್ರಂಥಗಳಲ್ಲಿ ಆಸನದ ವಿವರ ದೊರಕುತ್ತದೆ. ಶರೀರವನ್ನು ಆರೋಗ್ಯವಾಗಿಡಲು ಆಸನದ ವಿವರ ದೊರಕುತ್ತದೆ. ಶರೀರವನ್ನು ಆರೋಗ್ಯವಾಗಿಡಲು ಆಸನದ ವಿವರ ದೊರಕುತ್ತದೆ. ಶರೀರವನ್ನು ಆರೋಗ್ಯವಾಗಿಡಲು ಪದ್ಮಾಸನ, ಹಲಾಸನ, ಶೀರ್ಷಾಸನ, ಸಿಂಹಾಸನ ಸರ್ವಾಂಗಾಸನ ಇತ್ಯಾದಿ ಕೆಲವೇ ಆಸನಗಳ ಅಭ್ಯಾಸದಿಂದ ಆಹಾರ ಚೆನ್ನಾಗಿ ಜೀರ್ಣವಾಗಿ, ಬದುಕು ಹಿತವಾಗುತ್ತದೆ. ಪ್ರಾಣಕ್ಕೆ ಉಸಿರು ಪ್ರಧಾನ ಸಹಾಯಕ.
ಪ್ರಾಣಾಯಾಮಪ್ರಾಣಾಯಾಮವೆಂದರೆ ಉಸಿರಿನ ನಿಗ್ರಹ. ಪ್ರಾಣಾಯಾಮದಲ್ಲಿ ಹಲವು ವಿಧಾನಗಳಿವೆ. ಅವುಗಳನ್ನು ಯೋಗ್ಯ ಗುರುಗಳ ಮಾರ್ಗದರ್ಶನದಲ್ಲೇ ಕಲಿಯಬೇಕು. ಪುಸ್ತಕಗಳನ್ನು ಓದಿ ಪ್ರಾಣಾಯಾಮದ ಅಭ್ಯಾಸ ಮಾಡಬಾರದು. ವಿಷಯ ಗ್ರಹಣಕ್ಕೆ ಮಾತ್ರ ಪುಸ್ತಕಗಳನ್ನು ಓದಿಕೊಳ್ಳಬಹುದು.
ಪ್ರತ್ಯಾಹಾರ
ಮನಸ್ಸಿನ ಮೇಲಿನ ನಿಗ್ರಹವೇ ಪ್ರತ್ಯಾಹಾರವೆಂಬ ಯೋಗಾಂಗ. ಪ್ರತ್ಯಾಹಾರ ಅಭ್ಯಾಸದಿಂದ ಬರತಕ್ಕ ಮನಃಪರಿಪಾಕ. ಇದರಿಂದ ಇಂದ್ರಿಯಗಳ ಮೇಲೆ ಪ್ರಭುತ್ವ ಇರುತ್ತದೆ.
ಧಾರಣ
ನಮಗಿಷ್ಟವಾದ ದೇವರ ರೂಪದ ಬಗ್ಗೆ ಸ್ಪಷ್ಟವಾದ ಕಲ್ಪನೆಯನ್ನು ಮನಸ್ಸಿಗೆ ತಂದುಕೊಳ್ಳುವುದು ಧಾರಣ ಎನ್ನಿಸುವುದು.
ಧ್ಯಾನ
ಮನಸ್ಸಿನಲ್ಲಿರುವ ಆಸಕ್ತಿಯ ಬಗ್ಗೆ ನಿರಂತರ ಚಿಂತನೆಯೇ ಧ್ಯಾನ. ಈ ಇಷ್ಟದೇವತೆ ನಮ್ಮ ಮೇಲೆ ಮಾಡುವ ಉಪಕಾರದ ಸ್ಮರಣೆ ಮತ್ತು ನಾವು ಅರ್ಪಿಸುವ ಕೃತಜ್ಞತೆ, ಬದುಕಿನ ಅರ್ಪಣೆ ಆ ಶಕ್ತಿಯಿಂದ ಮತ್ತೆ ಮತ್ತೆ ಅನುಗ್ರಹದ ಪ್ರಾರ್ಥನೆ. ಈ ಎಲ್ಲವೂ ಧ್ಯಾನದಲ್ಲಿ ಸಾಧ್ಯವಿದೆ.
ಸಮಾಧಿ
ಜನನ ಹಾಗೂ ಮರಣ ಒಂದು ರಹಸ್ಯ. ಜೀವನ ಖಂಡಿತವಾಗಿಯೂ ಒಂದು ರಹಸ್ಯವೇ. ಜೀವನದ ರಹಸ್ಯದಲ್ಲಿ ಮತ್ತು ಈ ಸೃಷ್ಟಿಯಲ್ಲಿ ಪೂರ್ಣವಾಗಿ ಮಗ್ನವಾಗಿ ಬಿಡುವುದೇ ಸಮಾಧಿ. ಅಧ್ಯಾತ್ಮದ ಚೈತನ್ಯವನ್ನು ಅರಿಯುವ ತಂತ್ರಜ್ಞಾನ. ಇಡೀ ಜಗತ್ತು ಮನಸ್ಸನ್ನು ಪ್ರಭಾವಗೊಳಿಸುವುದಕ್ಕೆ ಸ್ಥಳ, ಆಹಾರ, ಸಹವಾಸ, ಅತಿ ಮುಖ್ಯ. ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಬೇಕು. ಮನಸ್ಸಿನ ಏಕಾಗ್ರತೆಯೇ ಜ್ಞಾನಭಂಡಾರದ ಸಾಧನೆ.
= ಎಂ.ಎಸ್. ಚಂದ್ರಶೇಖರ ಅಯ್ಯರ್