ಟಯರ್‌ನಲ್ಲೂ 4ಜಿ!

Updated on: 

ಮೊಬೈಲ್‌ನಲ್ಲಿ 4ಜಿ ಇನ್ನೂ ಈಗಷ್ಟೇ ಕಾಲಿಡುತ್ತಿದೆ. ಆದಲೇ ಕಾರಿನ ಟಯರ್‌ನಲ್ಲೂ 4ಜಿ ಬಂದಿದೆಯಂತೆ!
ಯುರೋಪ್‌ನಲ್ಲಿ ವರ್ಷದ ಟಯರ್ ಉತ್ಪಾದಕ ಎಂಬ ಬಿರುದು ಪಡೆಯುತ್ತಿದ್ದಂತೆ ಅಪೋಲೊ ಭರ್ಜರಿ ಉಮೇದಿನಿಂದ 4ಜಿ ಟಯರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಎಸ್ಪಾಯರ್ 4ಜಿ, ಅನಾಕ್ 4ಜಿ ಮತ್ತು ಅಮೇಜರ್ 4ಜಿ ಹೆಸರಿನಲ್ಲಿ ಟಯರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತಾಂತ್ರಿಕವಾಗಿ ಈ ಟಯರ್‌ಗಳು ಅತ್ಯುತ್ಕ್ರಷ್ಟವಾಗಿವೆ ಎಂದು ಸಂಸ್ಥೆ ಹೇಳಿದೆ. ಮುಂದಿನ 2 ವರ್ಷದಲ್ಲಿ ಕಾರುಗಳ 12 ಮಾದರಿಯ ಟಯರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.
ಈ 4ಜಿ ಟಯರ್‌ಗಳು ಮಳೆಗಾಲ ಮತ್ತು ಬೇಸಿಗೆಯ ಪರಿಸ್ಥಿತಿಯ ರಸ್ತೆಗಳಲ್ಲಿ ವಾಹನದ ಉತ್ತಮ ನಿಯಂತ್ರಣಕ್ಕೆ ಸಹಕಾರಿಯಾಗಬಲ್ಲ ತಂತ್ರಜ್ಞಾನ ಹೊಂದಿವೆ. 16-17 ಗಾತ್ರದಲ್ಲಿ ಡಬ್ಲ್ಯು ಮತ್ತು ವೈ ರೇಟಿಂಗ್‌ಗಳನ್ನು ಹೊಂದಿರುವ ಟಯರ್‌ಗಳನ್ನು ಕೂಡ ಬಿಡುಗಡೆ ಮಾಡಿದೆ. 4ಜಿ ತಂತ್ರಜ್ಞಾನದ ಟಯರ್‌ಗಳು ಸಮರ್ಥ ಬ್ರೇಕಿಂಗ್ ಮತ್ತು ಚಲಿಸುವ ಸಂದರ್ಭದಲ್ಲಿ ಉಂಟಾಗುವ ಶಬ್ದವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಅಪೊಲೊ ಕಂಪನಿಯ ಟಯರ್‌ಗಳ ಮಾರಾಟ ಶೇ.13.5ರಿಂದ ಶೇ.16ಕ್ಕೆ ಏರಿಕೆಯಾಗಿದ್ದು ಕಂಪನಿಗೆ ಹುಮ್ಮಸ್ಸು ನೀಡಿದಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com