ಸ್ವಿಡ್ಜರ್ಲ್ಯಾಂಡ್ನಲ್ಲಿ ಭೂಪನೊಬ್ಬ ವೇಗದ ಚಾಲನೆಗೆ ಬರೋಬ್ಬರಿ 5.74 ಕೋಟಿ ದಂಡ ಕಟ್ಟಿದ್ದಾನೆ. 288 ಕಿ.ಮೀ ವೇಗದಲ್ಲಿ ಕಾರು ಚಲಾಯಿಸುತ್ತಿದ್ದಕ್ಕೆ ಆತನ ವಾರ್ಷಿಕ ವೇತನವನ್ನು ಪರಿಗಣಿಸಿ ಹಣ ವಸೂಲಿ ಮಾಡಲಾಗಿದೆ. ವಿದೇಶಗಳಲ್ಲಿ ವಾರ್ಷಿಕ ವೇತನ ಹಾಗೂ ವೇಗವನ್ನು ಲೆಕ್ಕ ಮಾಡಿ ದಂಡ ವಿಧಿಸಲಾಗುತ್ತದೆ. ಆದರೆ ಭಾರತದಲ್ಲಿ ಹೆಚ್ಚು ಹಣವಿದ್ದರೆ ದಂಡವಿಲ್ಲದೆಯೇ ಹೊರಬರುವ ಸಾಧ್ಯತೆಯಿದೆ. ಇಲ್ಲವಾದರೂ ಅಧಿಕ ದಂಡವೆಂದರೆ ಕೇವಲ 500 ಮಾತ್ರ!