ಗಿಮಿಕ್ಕಿನ ಕಾರುಬಾರು!

ಗಿಮಿಕ್ಕಿನ ಕಾರುಬಾರು!
Updated on: 

ಹೀಗೆ ವಾಹನ ಮಾರುಕಟ್ಟೆಯಲ್ಲಿ ಸದ್ಯ ಇಂಥ ಗಿಮಿಕ್‌ಗಳದ್ದೇ 'ಕಾರು'ಬಾರು. ಕಾರು ಮಾರುಕಟ್ಟೆಗೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಫೋರ್ಡ್ ಇಕೋಸ್ಪೋರ್ಟ್ ಮತ್ತು ಬೆನ್ಝ್ ಎ1 ಬಿಟ್ಟರೆ ಬೇರಾವ ಹೊಸ ಕಾರು ಕೂಡ ಈ ವರ್ಷ ಬಿಡುಗಡೆ ಭಾಗ್ಯ ಕಂಡಿಲ್ಲ. ಇದಕ್ಕೆ ಕಾರಣ ಮಾರುಕಟ್ಟೆ ಪ್ರೋತ್ಸಾಹಕರವಾಗಿರದೇ ಇರುವುದು. ಇಂಥ ಸಂದರ್ಭದಲ್ಲಿ ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿ, ಗ್ರಾಹಕರಿಂದ ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯದಿದ್ದಲ್ಲಿ ಅದು ಕಂಪನಿಗೆ ಇನ್ನಷ್ಟು ಹೊಡೆತ ನೀಡುತ್ತದೆ. ಆದ್ದರಿಂದ ಯಾವ ಕಂಪನಿಗಳೂ ಹೊಸ ಕಾರನ್ನು ಪರಿಚಯಿಸುವ ಸಾಹಸಕ್ಕೆ ಕೈ ಹಾಕಿಲ್ಲ.
ಆದರೆ, ಕಾರು ಮಾರುಕಟ್ಟೆ ಚುರುಕಾಗಿಲ್ಲ ಎಂಬ ಕಾರಣಕ್ಕೆ ಸುಮ್ಮನಿರುವಂತೆಯೂ ಇಲ್ಲ. ಇದಕ್ಕೆ ಕಾರು ಕಂಪನಿಗಳು ಸ್ಪೆಷಲ್ ಎಡಿಷನ್, ಫೇಸ್‌ಲಿಫ್ಟ್, ಲಿಮಿಟೆಡ್ ಎಡಿಷನ್ ಮೂಲಕ ಪರಿಹಾರ ಕಂಡುಕೊಂಡಿವೆ. ಟಾಟಾ ಕಂಪನಿ ಇತ್ತೀಚೆಗೆ ಟಾಟಾ ನ್ಯಾನೋ, ಇಂಡಿಗೋ ಮುಂತಾದ ಕಾರುಗಳ ಫೇಸ್‌ಲಿಫ್ಟೆಡ್ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನಿಸಾನ್ ಕಂಪನಿ 'ಮೈಕ್ರಾ' ಕಾರನ್ನು ಫೇಸ್‌ಲಿಫ್ಟ್ ಮಾಡಿ ಬಿಡುಗಡೆ ಮಾಡಿದೆ. ಹಾಗೆಯೇ ವೆಸ್ಪಾ ಕಂಪನಿ ತನ್ನ ಸ್ಕೂಟರ್‌ಗಳನ್ನು ಕೂಡ ಕೊಂಚ ಬದಲಾವಣೆಗಳೊಂದಿಗೆ ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿದೆ.

ಏನಿದು ಫೇಸ್‌ಲಿಫ್ಟ್?
ಈಗಾಗಲೇ ಮಾರುಕಟ್ಟೆಯಲ್ಲಿರುವ ಕಾರಿನ ಒಳಾಂಗಣ ವಿನ್ಯಾಸದಲ್ಲಿ ಕೊಂಚ ಬದಲಾವಣೆ. ವಿಶೇಷವಾಗಿ ಹೊರಭಾಗದ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆ ಮಾಡಲಾಗುತ್ತದೆ. ಬಹುತೇಕ ಬದಲಾವಣೆಗಳು ಕಾರಿನ ಸೌಂದರ್ಯ ದೃಷ್ಟಿಯಿಂದ ಮಾಡಿದಂಥವು.
ಹೊರಭಾಗದಲ್ಲಿ ಆಕರ್ಷಕ ಸ್ಟಿಕ್ಕರ್‌ಗಳು, ಎದುರಿನ ಗ್ರಿಲ್ ವಿನ್ಯಾಸ ಬದಲು, ಅಲಾಯ್‌ವ್ಹೀಲ್ ವಿನ್ಯಾಸ ಹೀಗೆ ಇಂಥ ಬದಲಾವಣೆಗಳನ್ನು ಮಾಡಲಾಗುತ್ತದೆ.

ಸ್ಪೆಷಲ್ ಎಡಿಷನ್
ಇವು ಕೂಡ ಮಾರುಕಟ್ಟೆಯಲ್ಲಿರುವ ಕಾರುಗಳ ಮಾದರಿಗಳೇ. ಆದರೆ ಅವುಗಳಿಗೂ ಇದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇವುಗಳ ಹೊರ, ಒಳ ವಿನ್ಯಾಸ ಮತ್ತು ಬಣ್ಣಗಳಲ್ಲಿ ವ್ಯತ್ಯಾಸವಿರುತ್ತದೆ. ಮೇಲುನೋಟಕ್ಕೇ ನೀವು ವ್ಯತ್ಯಾಸ ಗುರುತಿಸಲು ಸಾಧ್ಯವಾಗುತ್ತದೆ.
ಇದರಂತೆಯೇ ಲಿಮಿಟೆಡ್ ಎಡಿಷನ್ ಕೂಡ. ಆದರೆ ಲಿಮಿಟೆಡ್ ಎಡಿಷನ್ ಅಂದರೆ ನಿಗದಿತ ಸಂಖ್ಯೆಯ ಕಾರುಗಳನ್ನು ಮಾತ್ರ ಸಂಸ್ಥೆ ತಯಾರಿಸುತ್ತದೆ. ಅದಕ್ಕಿಂತ ಹೆಚ್ಚಿನ ಕಾರುಗಳು ಬೇಕು ಅಂದರೂ ದೊರೆಯುವುದಿಲ್ಲ. ಹೊಸ ಕಾರುಗಳನ್ನು ಪರಿಚಯಿಸದೇ ಇದ್ದಾಗ ಗ್ರಾಹಕರನ್ನು ಸೆಳೆಯಲು, ಕೊಂಚ ಮಟ್ಟಿಗೆ ದರ ಹೆಚ್ಚಿಸಿಕೊಳ್ಳಲು ಮತ್ತು ಕಾರು ಮಾರುಕಟ್ಟೆಯನ್ನು ಚಟುವಟಿಕೆಯಿಂದಿಡಲು ಸಂಸ್ಥೆಗಳು ಇಂಥ ಗಿಮಿಕ್‌ಗಳನ್ನು ಮಾಡುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com