ದೇಶದ ಕಾರು ಮಾರುಕಟ್ಟೆ ಕುಸಿತ ಹಾಗೂ ಗ್ರಾಹಕರ ನಿರುತ್ಸಾಹದ ಹೊರತಾಗಿಯೂ ದಿಲ್ಲಿಯಲ್ಲಿ ಮುಂದಿನ ವರ್ಷ ನಡೆಯಲಿರುವ ಆಟೋ ಎಕ್ಸ್‌ಪೋದ ಕಾರುಗಳನ್ನು ಪ್ರದರ್ಶಿಸುವ ಜಾಗಗಳೆಲ್ಲ ಈಗಾಗಲೇ ಮಾರಾಟವಾಗಿವೆಯಂತೆ!
2014ರ ಫೆ.5ರಿಂದ ದಿಲ್ಲಿಯಲ್ಲಿ ಆಟೋ ಎಕ್ಸ್‌ಪೋ ನಡೆಯಲಿದೆ. ದೇಶ-ವಿದೇಶಗಳ ವಾಹನ ಪ್ರಿಯರಿಗೆ ಮತ್ತು ಹೊಸ ಕಾರುಗಳನ್ನು ಕೊಳ್ಳಲು ಬಯಸುವ ಗ್ರಾಹಕರಿಗೆ ಇದು ಅತ್ಯಂತ ಆಕರ್ಷಕ ಮೇಳ. ಭವಿಷ್ಯದಲ್ಲಿ ಮಾರುಕಟ್ಟೆಗೆ ಆಗಮಿಸಲಿರುವ ಕಾರುಗಳು ಇಲ್ಲಿ ಪ್ರದರ್ಶನಗೊಳ್ಳುತ್ತವೆ.
ಹ್ಯೂಸಂಗ್, ಇಸುಜು ಸೇರಿದಂತೆ ಒಟ್ಟು 40 ವಾಹನ ಕಂಪನಿಗಳು ಎಕ್ಸ್‌ಪೋದಲ್ಲಿ ಭಾಗವಹಿಸಲು ಜಾಗ ನಿಗದಿಪಡಿಸಿಕೊಂಡಿವೆ. ಇಸುಜು ಕಂಪನಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಉತ್ಸುಕವಾಗಿದ್ದು, ಎಕ್ಸ್‌ಪೋ ಮೂಲಕ ಗ್ರಾಹಕರ ಗಮನ ಸೆಳೆಯಲು ನಿರ್ಧರಿಸಿದೆ.
ಸಾಮಾನ್ಯವಾಗಿ ಆಟೋ ಎಕ್ಸ್‌ಪೋ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿತ್ತು. ಈ ಬಾರಿ ದೆಹಲಿ ಹೊರಭಾಗದಲ್ಲಿರುವ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿದೆ. 2012ರಲ್ಲಿ ನಡೆದ ಆಟೋ ಎಕ್ಸ್‌ಪೋಗೆ 20 ಲಕ್ಷ ಜನ ಭೇಟಿ ನೀಡಿದ್ದರು.