ಅಬ್ಬಬ್ಬಾ, 9 ಗೇರ್!

ಅಬ್ಬಬ್ಬಾ, 9 ಗೇರ್!
Updated on: 

4 ಸ್ಪೀಡ್ ಗೇರ್‌ಬಾಕ್ಸ್‌ನಿಂದ 5 ಸ್ಪೀಡ್ ಗೇರ್‌ಬಾಕ್ಸ್‌ಗೆ ಬಂದಾಯ್ತು. ಈಗ ಬೈಕ್‌ಗಳೂ 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುತ್ತವೆ. ಕೆಲವು ಕಾರುಗಳಲ್ಲಿ 6 ಸ್ಪೀಡ್ ಗೇರ್‌ಬಾಕ್ಸ್‌ಗಳೂ ಇವೆ.
ವಾಹನ ಆಸಕ್ತರೆಲ್ಲ ಅಚ್ಚರಿಪಡುವಂತೆ ಲ್ಯಾಂಡ್‌ರೋವರ್ ಸಂಸ್ಥೆ 9ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ವಾಹನ ತಯಾರಿಸಿದೆ. ಇದನ್ನು ಸದ್ಯದಲ್ಲೇ ಜಿನಿವಾದಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋನಲ್ಲಿ ಪ್ರದರ್ಶಿಸಲಿದೆ.
9 ಸ್ಪೀಡ್ ಆಟೋ ಗೇರ್‌ಬಾಕ್ಸ್‌ನಿಂದಾಗಿ ಕಾರು ವೇಗವಾಗಿ ಹೋಗುವಾಗ ಹೆಚ್ಚು ಶಬ್ದ ಮಾಡುವುದಿಲ್ಲ ಮತ್ತು ಹೆಚ್ಚು ಇಂಧನ ಬಳಸುವುದಿಲ್ಲ. ವಾಹನದ ಮಾಲಿನ್ಯ ಮಟ್ಟ ಕಡಿಮೆಯಾಗುವುದರ ಜತೆಗೆ, ಇಂಧನ ಕ್ಷಮತೆಯೂ ಹೆಚ್ಚುತ್ತದೆ. ಲ್ಯಾಂಡ್‌ರೋವರ್,  ಗೇರ್‌ಬಾಕ್ಸ್ ತಯಾರಿಕಾ ಸಂಸ್ಥೆ ಝೆಡ್‌ಎಫ್ ಜತೆಸೇರಿ ಈ ಗೇರ್‌ಬಾಕ್ಸ್ ತಯಾರಿಸಿವೆ.
ಜತೆಗೆ, 1-2 ಗೇರ್‌ಗಳಲ್ಲಿ ಹೆಚ್ಚು ಶಕ್ತಿ ಸಿಗುವಂತೆ ಮಾಡಲಾಗಿದೆ. ಇದರಿಂದಾಗಿ ಗುಡ್ಡ-ಬೆಟ್ಟಗಳ ರಸ್ತೆಯಲ್ಲಿ (ಆಫ್‌ರೋಡಿಂಗ್) ಸರಾಗವಾಗಿ ಚಲಿಸುವಂತೆ ಮಾಡಲಾಗಿದೆ. ಅತ್ಯಂತ ವೇಗವಾಗಿ ಗೇರ್‌ಗಳು ಬದಲಾಗುವ ವ್ಯವಸ್ಥೆ ಇದರಲ್ಲಿದೆ. ತುಂಬ ವೇಗವಾಗಿ ಹೋಗುತ್ತಿರುವ ಸಂದರ್ಭದಲ್ಲಿ ತ್ವರಿತವಾಗಿ ವೇಗ ಕಡಿಮೆ ಮಾಡಬೇಕಾಗಿ ಬಂದಾಗ ಬಳಸಲೆಂದೇ 'ಸ್ಕಿಪ್‌ಶಿಫ್ಟ್‌' (ಅಂದರೆ 9ರಿಂದ ನೇರವಾಗಿ 7-6ನೇ ಗೇರ್‌ಗಳಿಗೆ ಬರುವ) ಎಂಬ ಸೌಲಭ್ಯವನ್ನೂ ನೀಡಲಾಗಿದೆ. ಈಗಿರುವ 6 ಸ್ಪೀಡ್ ಗೇರ್‌ಬಾಕ್ಸ್‌ಗಿಂತ ಹಗುರವಾಗಿರುವುದು ಇದರ ಇನ್ನೊಂದು ಹೆಗ್ಗಳಿಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com