Audi A6

Audi A6
Updated on: 

ಲಕ್ಷುರಿಗೆ ಲಕ್ಷುರಿ. ವೇಗಕ್ಕೆ ವೇಗ. ಇದು ಆಡಿ ಎ6ನ ವೈಶಿಷ್ಟ್ಯ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಐಷಾರಾಮಿ ಸೌಲಭ್ಯಗಳು ಇದರಲ್ಲಿವೆ. ಲಕ್ಷುರಿ, ವೇಗ, ಶಕ್ತಿ, ಐಷಾರಾಮಿ ವ್ಯವಸ್ಥೆ ಇವುಗಳನ್ನೆಲ್ಲ ತಂತ್ರಜ್ಞಾನದ ಸಹಾಯದೊಂದಿಗೆ ಸೇರಿಸಿ ಆಡಿ ಸಂಸ್ಥೆ ಎ6 ಕಾರನ್ನು ತಯಾರಿಸಿದೆ.
ಆಡಿ ಎ6 ಒಳಗೆ ಕುಳಿತರೆ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತಂತೆ ಭಾಸವಾಗುತ್ತದೆ. ಟಚ್ ಸ್ಕ್ರೀನ್ ಇನ್‌ಫಾರ್ಮೇಶನ್ ಸಿಸ್ಟಂ, ಕಪ್ಪು, ಬಿಜ್ ಮತ್ತು ವುಡ್ ಫಿನಿಶಿಂಗ್ ಹೊಂದಿರುವ ಆಂತರಿಕ ವಿನ್ಯಾಸ ಮನಸೂರೆಗೊಳ್ಳುವುದರಲ್ಲಿ ಅನುಮಾನವಿಲ್ಲ.
ಕಂಫರ್ಟ್, ಆಟೋ, ಡೈನಾಮಿಕ್, ಎಫಿಷಿಯೆನ್ಸಿ, ಇಂಡಿವಿಜುವಲ್ ಎಂಬ ಚಾಲನಾ ಆಯ್ಕೆಗಳಿವೆ. ನೀವು ಆಯ್ಕೆ ಮಾಡಿದ್ದಕ್ಕೆ ಅನುಗುಣವಾಗಿ ಕಾರು ವರ್ತಿಸುತ್ತದೆ. ಡೈನಾಮಿಕ್ ಆಯ್ಕೆ ಮಾಡಿದರೆ ಕಾರು ವೇಗಕ್ಕೆ ಹೆಚ್ಚು ಒತ್ತುನೀಡುತ್ತದೆ. ಶಾಕ್‌ಅಬ್ಸಾರ್ಬರ್‌ಗಳು ಮತ್ತು ಸ್ಟೇರಿಂಗ್ ಸ್ವಲ್ಪ ಹಾರ್ಡ್ ಆಗುತ್ತದೆ. ಹಾಗೆಯೇ ನೆಲದಿಂದ ಕಾರಿನ ಅಂತ ಕೊಂಚ ಹೆಚ್ಚುತ್ತದೆ. ಕಂಫರ್ಟ್ ಆಯ್ಕೆ ಮಾಡಿದರೆ ಕಾರು ನೆಲಕ್ಕೆ ಇನ್ನಷ್ಟು ಹತ್ತಿರವಾಗುತ್ತದೆ. ಶಾಕ್‌ಅಬ್ಸಾರ್ಬ್‌ರ್‌ಗಳು ಮೆತ್ತಗಾಗುತ್ತವೆ. ಇದರ ಜತೆಗೆ ಕ್ಲೈಮೆಟ್ ಕಂಟ್ರೋಲ್ ವ್ಯವಸ್ಥೆ ಕಾರಿನ ಒಳಗೆ ನಿಮಗೆ ಬೇಕಾದ ವಾತಾವರಣ ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ. ಟಚ್‌ಸ್ಕ್ರೀನ್ ಇನ್‌ಫಾರ್ಮೇಷನ್ ಸಿಸ್ಟಂ ಬೇಡ ಎಂದರೆ ಕೊಂಚ ಒತ್ತಿದರೆ ಸಾಕು, ಅದು ಡ್ಯಾಶ್‌ಬೋರ್ಡ್ ಒಳಗೆ ಸೇರಿಕೊಳ್ಳುತ್ತದೆ.
ಮೊಬೈಲ್ ಮೂಲಕ ಕರೆ ಮಾಡಬೇಕು, ಹಾಡು ಬದಲಿಸಬೇಕು, ಎಫ್‌ಎಂ ಬದಲು ಪೆನ್‌ಡ್ರೈವ್‌ನಲ್ಲಿರುವ ಹಾಡು ಕೇಳಬೇಕು- ಹೀಗೆ ನೀವೇನೇ ಬಯಸಿದರೂ ಅದನ್ನು ಈ ಕಾರು ಕೇವಲ ನಿಮ್ಮ ಒಂದು ಧ್ವನಿ ಆದೇಶದ ಮೂಲಕ ಮಾಡಬಲ್ಲದು. ನೀವು ಯಾವುದೇ ಬಟನ್ ಮುಟ್ಟುವ ಅಗತ್ಯವೂ ಇಲ್ಲ.
ಸಂಗೀತದ ಆನಂದ ಸವಿಯಲು ಬೋಸ್ ಸ್ಪೀಕರ್‌ಗಳನ್ನು ನೀಡಲಾಗಿದೆ. ಅತ್ಯಂತ ಸ್ಪಷ್ಟವಾದ ಶಬ್ದ ಮತ್ತು ಅದ್ಭುತ ಸಂಗೀತದ ಆನಂದ ನೀಡಲು ಬೋಸ್ ಸ್ಪೀಕರ್‌ಗಳು ಖ್ಯಾತಿ ಗಳಿಸಿರುವುದು ತಿಳಿದಿರುವ ಸಂಗತಿ. ಕಾರಿನಲ್ಲಿ ಇದು ಸಂಗೀತದ ಆನಂದವನ್ನು ಇನ್ನಷ್ಟು ಉತ್ಕೃಷ್ಟಗೊಳಿಸಲಿದೆ.
ಎಲೆಕ್ಟ್ರಾನಿಕ್ ಕ್ರಾಸ್ ಎಕ್ಸೆಲ್ ಲಾಕ್ ವ್ಯವಸ್ಥೆ ಅತ್ಯಂತ ಸುರಕ್ಷಿತ ಬ್ರೇಕಿಂಗ್‌ಗೆ ಸಹಾಯಮಾಡುತ್ತದೆ. ಆಡಿ ಕ್ವಾಟ್ರೋ ತಂತ್ರಜ್ಞಾನ ಅಂದರೆ 4 ವ್ಹೀಲ್ ಡ್ರೈವ್ ಆಯ್ಕೆ ಇದೆ. ಪೆಟ್ರೋಲ್ (ಟಿಎಫ್‌ಎಸ್‌ಐ) ಮತ್ತು ಡೀಸೆಲ್ (ಟಿಡಿಐ) ಎಂಜಿನ್ ಆಯ್ಕೆ ಲಭ್ಯವಿದೆ. ಡೀಸೆಲ್‌ನಲ್ಲಿ 2.0 ಲೀ. ಎಂಜಿನ್ ಹಾಗೂ 3 ಲೀ. ಎಂಜಿನ್‌ಗಳಲ್ಲಿ ಲಭ್ಯವಿದ್ದು, 3 ಲೀ. ಎಂಜಿನ್‌ನ ಕಾರು ಕೇವಲ 6.12 ಸೆಕೆಂಡ್‌ಗಳಲ್ಲಿ 0-100 ಕಿ.ಮಾ. ವೇಗ ತಲುಪಬಲ್ಲದು. 2 ಲೀ. ಪೆಟ್ರೋಲ್ ಎಂಜಿನ್‌ನ ಕಾರು 8.3 ಸೆಕೆಂಡ್‌ಗಳಲ್ಲಿ 0-100 ವೇಗ ತಲುಪಬಲ್ಲದು.
ಈ ಕಾರಿನ ಶೇ.20ರಷ್ಟು ಬಾಡಿ ಅಲ್ಯುಮಿನಿಯಂನಿಂದ ಮಾಡಲ್ಪಟ್ಟಿದ್ದು, ವಾಹನದ ಭಾರ ತಗ್ಗಿಸುವ ಮೂಲಕ ಹೆಚ್ಚಿನ ಇಂಧನ ಕ್ಷಮತೆಗೆ ಸಹಕಾರಿಯಾಗಿದೆ. ಸ್ಟೇರಿಂಗ್, ಸ್ವಿವೆಲ್ ಬೇರಿಂಗ್, ವ್ಹೀಲ್ ಕ್ಯಾರಿಯರ್‌ಗಳು ಅಲ್ಯುಮಿನಿಯಂನಿಂದ ಮಾಡಲ್ಪಟ್ಟಿದ್ದು, ಭಾರ ಕಡಿತ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಬಾಗಿಲುಗಳು, ಬಾನೆಟ್‌ಗಳನ್ನೂ ಗಟ್ಟಿಮುಟ್ಟಾದ ಹಗುರ ಲೋಹದ ಮೂಲಕ ತಯಾರಿಸಲಾಗಿದೆ.
ಒಳಗಡೆ ಕುಳಿತು ನೀವು 200 ಕಿ.ಮೀ. ವೇಗದಲ್ಲಿ ಚಲಾಯಿಸಿದರೂ ಒಳಗಡೆ ಕುಳಿತವರಿಗೆ ಅದು ಅನುಭವಕ್ಕೆ ಬರುವುದಿಲ್ಲ. ಅಷ್ಟೇ ಸುಲಭವಾಗಿ ಕಾರನ್ನು ನಿಯಂತ್ರಣಕ್ಕೆ ತರುವ ಬ್ರೇಕಿಂಗ್ ವ್ಯವಸ್ಥೆಯೂ ಇದೆ. ಹಾಗೆಯೇ ಏರ್‌ಬ್ಯಾಗ್‌ಗಳಿವೆ. ನೀವು ಸಾಕಷ್ಟು ವೇಗವಾಗಿಯೇ ಕಾರನ್ನು ತಿರುಗಿಸಿದರೂ ಯಾವುದೇ ಕಾರಣಕ್ಕೆ ಮಗುಚಿಕೊಳ್ಳದು. ಈ ಕಾರುಗಳಲ್ಲಿ ಹೋಗುವ ಆನಂದ ವರ್ಣನೆಗೆ ನಿಲುಕದ್ದು.
ಈ ಕಾರು ಐಬಿಸ್ ವೈಟ್, ಹವಾನ್ನಾ ಬ್ಲ್ಯಾಕ್, ಐಸ್ ಸಿಲ್ವರ್, ಡಕೋಟಾ ಗ್ರೇ, ಮೂನ್‌ಶೈನ್ ಬ್ಲ್ಯೂ, ಗಾರ್ನೆಟ್ ರೆಡ್ ಬಣ್ಣಗಳಲ್ಲಿ ಲಭ್ಯವಿದೆ.

- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com