ಹುಂಡೈ- ಐ20ಗೆ ಹೊಸ ರೂಪ

ಹುಂಡೈ- ಐ20ಗೆ ಹೊಸ ರೂಪ
Updated on: 

ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಮಾರುತಿ ಸ್ವಿಫ್ಟ್‌ಗೆ ಏಟು ನೀಡಿದ್ದ ಹುಂಡೈ- ಐ20 ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಕಾರಿನ ನೈಜ ರೂಪ ಹಾಗೂ ದರಗಳಿನ್ನೂ ಅಧಿಕೃತವಾಗಿ ಮಾರುಕಟ್ಟೆಗೆ ಬಂದಿಲ್ಲ. ಆದರೆ ಕಾರು ಬಿಡುಗಡೆ ಒಂದು ವಾರವಿರುವ ಮುಂಚೆ ವಿನ್ಯಾಸ ಹೇಗಿರುತ್ತದೆಂಬ ಬಗ್ಗೆ ಒಂದು ಚಿತ್ರವನ್ನು ಮಾತ್ರ ಹೊರಗೆ ಬಿಟ್ಟಿದೆ. ಹುಂಡೈನ ಖ್ಯಾತ ಫ್ಲ್ಯೂಡಿಕ್ 2.0 ವಿನ್ಯಾಸವನ್ನೇ ಇಲ್ಲಿ ಉಳಿಸಿಕೊಳ್ಳಲಾಗಿದ್ದು, ಬಾಹ್ಯ ಹಾಗೂ ಒಳ ವಿನ್ಯಾಸದಲ್ಲಿ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ.
ಹೆಡ್‌ಲ್ಯಾಂಪ್ ಹಾಗೂ ಗ್ರಿಲ್‌ಗಳ ವಿನ್ಯಾಸ ಬದಲಿಸಲಾಗಿದೆ. ಇದರಿಂದ ಗಾಡಿಗೆ ಐಷಾರಾಮಿ ಲುಕ್ ಬಂದಿದೆ. ಅದರೊಂದಿಗೆ ಫ್ಲ್ಯೂಡಿಕ್ ವಿನ್ಯಾಸಕ್ಕೆ ಮತ್ತಷ್ಟು ಗತ್ತು ಸೇರಿಕೊಂಡಂತಾಗಿದೆ. ಕಾರಿನ ಒಳ ವಿನ್ಯಾಸದಲ್ಲಿ ಬಣ್ಣ, ಇಂಟಿಗ್ರೇಟೆಡ್ ಮ್ಯೂಸಿಕ್ ಸಿಸ್ಟಮ್ ಹಾಗೂ ಸ್ಟಿಯರಿಂಗ್‌ನಲ್ಲಿ ಬದಲಾವಣೆ ಮಾಡಲಾಗಿದೆ. ಈಗಿರುವ ಎಂಜಿನ್ ಅನ್ನೇ ಮುಂದುವರಿಸಿಕೊಂಡು ಹೋಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಹೈಯರ್ ಎಂಡ್ ಕಾರಿಗೆ ಆಟೋ ಗೇರ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಮಾರುಕಟ್ಟೆಗೆ ಬರುತ್ತಿರುವ ಎಲ್ಲ ಕಾರುಗಳಿಗೆ ಆಟೋ ಗೇರ್ ಎನ್ನುವುದು ಕಡ್ಡಾಯ ಎಂಬ ರೀತಿಯಲ್ಲಿ ಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com