ಸ್ಮಾರ್ಟ್ ಕಾರ್

ಸ್ಮಾರ್ಟ್ ಕಾರ್
Updated on: 

ನಿಮ್ಮ ಕಾರುಗಳು ಕೂಡ ಇನ್ನಷ್ಟು ಸ್ಮಾರ್ಟ್ ಆಗಲಿವೆ!
ಮೊಬೈಲ್ ಮೂಲಕವೇ ಕಾರನ್ನು ಆನ್ ಮಾಡುವ, ಎಸಿ ಚಾಲು ಮಾಡುವ ಅಥವಾ ಲಾಕ್ ಮಾಡುವ ಸ್ಮಾರ್ಟ್ ದಿನಗಳು ಸದ್ಯದಲ್ಲೇ ನನಸಾಗುವ ಲಕ್ಷಣಗಳಿವೆ. ಗೂಗಲ್ ಹಾಗೂ ಆ್ಯಪಲ್ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರು ಉತ್ಪಾದಕ ಸಂಸ್ಥೆಗಳ ಜತೆ ಸಂಶೋಧನೆ ನಡೆಸುತ್ತಿವೆ. ಕಳೆದ ವಾರ ಲಾಸ್ವೆಗಾಸ್ನಲ್ಲಿ ನಡೆದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋನಲ್ಲಿ ಈ ಸಂಬಂಧ ಗೂಗಲ್ ಸಂಸ್ಥೆಯು ಕೆಲ ಝಲಕ್ಗಳನ್ನು ಪ್ರದರ್ಶಿಸಿದೆ.
ಪ್ರತಿಷ್ಠಿತ 4 ಕಾರು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಸ್ಮಾರ್ಟ್ಫೋನ್ಗಳನ್ನು ಕಾರುಗಳಲ್ಲಿ ಇಂಟಿಗ್ರೇಟ್ ಮಾಡುವ ಕಾರ್ಯ ಪ್ರಾರಂಭವಾಗಿದೆ. ಈ ಸಂಬಂಧ ಈಗಾಗಲೇ ಅಮೆರಿಕದಲ್ಲಿ 310 ಪೇಟೆಂಟ್ಗಳನ್ನು ಗೂಗಲ್, ಆ್ಯಪಲ್ ಹಾಗೂ ಮೊಟರೋಲಾ ಕಂಪನಿಗಳು ಹೊಂದಿವೆ.
ಆ್ಯಂಡ್ರಾಯ್ಡ್ ಪ್ಲಾಟ್ಫಾರ್ಮ್ನ್ನು ಆಡಿ, ಜನರಲ್ ಮೋಟಾರ್ಸ್, ಹೋಂಡಾ, ಹುಂಡೈ ಕಾರು ಉತ್ಪಾದಕ ಸಂಸ್ಥೆಗಳು ಅಳವಡಿಸಿಕೊಳ್ಳುತ್ತಿವೆ. ಇನ್ನು ಚಿಪ್ ತಯಾರಕ ಸಂಸ್ಥೆಯಾದ ಎನ್ವಿಐಡಿಐ ಕೂಡ ಆ್ಯಂಡ್ರಾಯ್ಡ್ ಇಂಟಿಗ್ರೇಟ್ ಎಲೆಕ್ಟ್ರಾನಿಕ್ ಸಾಮಗ್ರಿ ತಯಾರಿಸುತ್ತಿದೆ.
ವರ್ಷಾಂತ್ಯದಲ್ಲಿ ಮಾರುಕಟ್ಟೆಗೆ ಬರುವ ಈ ನಾಲ್ಕು ಕಂಪನಿಗಳ ಕಾರುಗಳಲ್ಲಿ ಈ ವ್ಯವಸ್ಥೆ ಲಭ್ಯವಾಗಲಿದೆ. ಕಾರಿನ ಡ್ಯಾಶ್ಬೋರ್ಡ್ನ್ನೇ ಮತ್ತೊಂದು ಸ್ಮಾರ್ಟ್ಫೋನಾಗಿಸಿಕೊಳ್ಳಬಹುದು. ಪ್ರಸ್ತುತ ಬ್ಲ್ಯೂಟೂತ್ ಮೂಲಕ ಮೊಬೈಲ್ನ್ನು ಕರೆ ಸ್ವೀಕರಿಸಲು ಹಾಗೂ ಮ್ಯೂಸಿಕ್ ಪ್ಲೇ ಮಾಡಲು ಸಾಧ್ಯವಿತ್ತು. ಗೂಗಲ್ನ ಈ ಹೊಸ ಸಂಶೋಧನೆಯಿಂದ ಡ್ಯಾಶ್ಬೋರ್ಡ್ನ ಸ್ಕ್ರೀನ್ನಲ್ಲಿಯೇ ಸಂದೇಶ ಓದಬಹುದು, ಕರೆ ಮಾಡಬಹುದು. ಇದಲ್ಲದೇ ಮೊಬೈಲ್ನ ಎಲ್ಲ ವಿಚಾರಗಳನ್ನು ಇಲ್ಲಿಯೇ ನೋಡಬಹುದಾಗಿದೆ.
ಇತರೆ ಆಪರೇಟಿಂಗ್ ಸಿಸ್ಟಮ್ಗಳ ಅಪ್ಲಿಕೇಷನ್ ಹೋಮ್ ಮೂಲಕ ಕಾರಿನ ಸುರಕ್ಷೆ ಹಾಗೂ ಬಾಳಿಕೆ ಕುರಿತಂತೆ ಬರುವ ನಾನಾ ಅಪ್ಲಿಕೇಷನ್ಗಳನ್ನು ಅಭಿವೃದ್ಧಿಪಡಿಸಿಕೊಂಡು ಮೊಬೈಲ್ ಮೂಲಕವೇ ಕಾರನ್ನು ನಿಯಂತ್ರಿಸುವ ಕಾಲ ಬರಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com