ರಾಯಲ್ ಎನ್ಫೀಲ್ಡ್ ಸೀಮಿತ ಕೊಡುಗೆಯ ದ್ವಿಚಕ್ರ ವಾಹನಗಳು ಮಾರುಕಟ್ಟೆಗೆ

ದ್ವಿಚಕ್ರ ಮೋಟಾರ್ ವಾಹನ ಸಂಸ್ಥೆ ರಾಯಲ್ ಎನ್ಫೀಲ್ಡ್ ಸೀಮಿತ ಕೊಡುಗೆಯ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು ಪ್ರಾರಂಭಿಕ ಬೆಲೆ ೨.೧೭ ಲಕ್ಷ ರೂ.
ರಾಯಲ್ ಎನ್ಫೀಲ್ಡ್ ಬೈಕ್ ತಯಾರಿಕಾ ಘಟಕ
ರಾಯಲ್ ಎನ್ಫೀಲ್ಡ್ ಬೈಕ್ ತಯಾರಿಕಾ ಘಟಕ
Updated on

ನವದೆಹಲಿ: ದ್ವಿಚಕ್ರ ಮೋಟಾರ್ ವಾಹನ ಸಂಸ್ಥೆ ರಾಯಲ್ ಎನ್ಫೀಲ್ಡ್ ಸೀಮಿತ ಕೊಡುಗೆಯ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು ಪ್ರಾರಂಭಿಕ ಬೆಲೆ ೨.೧೭ ಲಕ್ಷ ರೂ.

ವಿಶ್ವ ಯುದ್ಧದ ಸಮಯದಲ್ಲಿ 'ಡೆಸ್ಪ್ಯಾಚ್ ಚಾಲಕ'ರಿಂದ ಸ್ಫೂರ್ತಿಗೊಂಡಿರುವ ಈ ಮಾದರಿಗಳು ಎರಡು ಬಣ್ಣಗಳಲ್ಲಿ ಲಭ್ಯವಿವೆ. ಡೆಸರ್ಟ್ ಸ್ಟಾರ್ಮ್ ಡೆಸ್ಪ್ಯಾಚ್ ಮತ್ತು ಸ್ಕ್ವ್ಯಾಡರ್ನ್ ಬ್ಲೂ ಡೆಸ್ಪ್ಯಾಚ್ ಎಂಬ ಎರಡು ಬಗೆಯ ಮಾದರಿಗಳ ಕೇವಲ 200 ವಾಹನಗಳಷ್ಟೇ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿವೆ.

ಈ ಸೀಮಿತ ಕೊಡುಗೆಯ ಮಾದರಿಗಳನ್ನು ಮುಂಗಡವಾಗಿ ಕಾಯ್ದಿರಸಲು ಜುಲೈ ೧೫ ರಿಂದ ಅಂತರ್ಜಾಲದಲ್ಲಿ ಸಾದ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಈ ಸೀಮಿತ ಮಾದರಿಗಳು ಬುಲೆಟ್ ಕ್ಲಾಸಿಕ್ ೫೦೦ ಮಾದರಿಯ ವಿನ್ಯಾಸದ ಮೇಲೆ ಅಭಿವೃದ್ಧಿಪಡಿಸಿರುವ ದ್ವಿಚಕ್ರ ವಾಹನಗಳಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com