ಇಲ್ಲಿ ಹೆಡ್‌ಲೈಟ್‌ಗಳ ಬದಲಿಗೆ ಎರಡು ಹೆಡ್‌ಲ್ಯಾಂಪ್ ಗಳನ್ನು ಬಳಸಲಾಗಿದ್ದು, ಭವಿಷ್ಯದ ಕಾರುಗಳು ಸ್ವಯಂ ನಿಯಂತ್ರಿತ ಕಾರುಗಳಾಗಲಿವೆ. ಇವುಗಳಿಗೆ ಮುನ್ನುಡಿ ಬರೆಯುವಂತಿದೆ ಬಿಎಂಡಬ್ಲ್ಯು ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್ ಕಾರಿನ ಸ್ಟಿಯರಿಂಗ್ ವ್ಯವಸ್ಥೆ. ಸ್ಟಿಯರಿಂಗ್ ವೀಲ್ ಮತ್ತು ಪೆಡಲ್ ವ್ಯವಸ್ಥೆ ಇಲ್ಲಿದೆ. ನಾವು ಕಾರು ಚಲಾಯಿಸದೇ ಇದ್ದಾಗ ಈ ಸ್ಟಿಯರಿಂಗ್ ವೀಲ್‌ನ್ನು ಡ್ಯಾಶ್ ಬೋರ್ಡ್‌ನಲ್ಲಿಟ್ಟರೆ, ಕಾರು ತನ್ನಿಂದತಾನೇ ಚಲಿಸುತ್ತದೆ. ಸಾಹಸ ಇಷ್ಟ ಪಡುವವರಿಗೆ ಬೂಸ್ಟ್ ಮೋಡ್ ಎಂಬ ಹೆಸರಿನ ಸ್ಫೋರ್ಟ್ಸ್ ಡ್ರೈವ್ ಮೋಡ್ ಕೂಡಾ ಇಲ್ಲಿದೆ.