ಆಟೋ ರಿಕ್ಷಾವನ್ನು ಸ್ಕಾರ್ಪಿಯೋ ಮಾದರಿಗೆ ಬದಲಿಸಿದ ವ್ಯಕ್ತಿಗೆ ಮಹಿಂದ್ರಾ ಹೊಸ ವಾಹನ ಗಿಫ್ಟ್!

ಅದೃಷ್ಟ ಹೀಗೂ ಖುಲಾಯಿಸುತ್ತದೆ ಎಂಬುದಕ್ಕೆ ಕೇರಳ ಮೂಲದ ವ್ಯಕ್ತಿಯ ಜೀವನದಲ್ಲಿ ನಡೆದಿರುವ ಈ ಘಟನೆಯೇ ಅತ್ಯುತ್ತಮ ಉದಾಹರಣೆ.
ಆಟೋ ರಿಕ್ಷಾವನ್ನು ಸ್ಕಾರ್ಪಿಯೋ ಮಾದರಿಗೆ ಬದಲಿಸಿದ ವ್ಯಕ್ತಿಗೆ ವಾಹನ ಗಿಫ್ಟ್!
ಆಟೋ ರಿಕ್ಷಾವನ್ನು ಸ್ಕಾರ್ಪಿಯೋ ಮಾದರಿಗೆ ಬದಲಿಸಿದ ವ್ಯಕ್ತಿಗೆ ವಾಹನ ಗಿಫ್ಟ್!
Updated on
ಅದೃಷ್ಟ ಹೀಗೂ ಖುಲಾಯಿಸುತ್ತದೆ ಎಂಬುದಕ್ಕೆ ಕೇರಳ ಮೂಲದ ವ್ಯಕ್ತಿಯ ಜೀವನದಲ್ಲಿ ನಡೆದಿರುವ ಈ ಘಟನೆಯೇ ಅತ್ಯುತ್ತಮ ಉದಾಹರಣೆ. 
ಸುನಿಲ್ ಎಂಬ ವ್ಯಕ್ತಿ ತನ್ನ ಆಟೋ ರಿಕ್ಷದ ಹಿಂಭಾಗವನ್ನು ಮಹಿಂದ್ರಾ ಸ್ಕಾರ್ಪಿಯೋ ವಾಹನದಂತೆಯೇ ಕಾಣಿವಂತೆ ಬದಲಾವಣೆ ಮಾಡಿದ್ದಾರೆ. ಈ ಚಿತ್ರ ಟ್ವಿಟರ್ ನಲ್ಲಿ ವೈರಲ್ ಆಗಿದೆ. ಮಹಿಂದ್ರಾ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾದ ಆನಂದ್ ಮಹಿಂದ್ರಾ ಅವರಿಗೂ ತಲುಪಿದೆ. ಇದರಿಂದ ಸಂತೋಷಗೊಂಡ ಮಹಿಂದ್ರಾ ಸಂಸ್ಥೆಯ ಅಧ್ಯಕ್ಷ ಆನಂದ್ ಮಹಿಂದ್ರಾ, ಸ್ಕಾರ್ಪಿಯೋ ವಾಹನದಂತೆ ಆಲ್ಟರ್ ಆದ ಆಟೋವನ್ನು ಸಂಸ್ಥೆಗೆ ಸೇರಿದ ಮ್ಯೂಸಿಯಂ ನಲ್ಲಿಟ್ಟು ಆಟೋ ಮಾಲಿಕನಿಗೆ ಅದರ ಬದಲಾಗಿ ಹೊಸ ಸುಪ್ರೋ ಮಿನಿ ವ್ಯಾನ್ ನ್ನು ವಾಹನವನ್ನೂ ನೀಡಿದ್ದಾರೆ. 
ಟ್ವಿಟರ್ ನಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆಯೇ ಆ ಆಟೋಚಾಲಕನನ್ನು ಹುಡುಕುವಂತೆ ಸಂಸ್ಥೆಯ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. ಮಹಿಂದ್ರಾ ಸಂಸ್ಥೆಯ ಸಿಬ್ಬಂದಿಗಳು ಬರೊಬ್ಬರಿ ಒಂದು ತಿಂಗಳ ನಂತರ ಆಟೋ ರಿಕ್ಷಾವನ್ನು ಸ್ಕಾರ್ಪಿಯೋ ಮಾದರಿಯಲ್ಲಿ ಆಲ್ಟರ್ ಮಾಡಿಸಿದ್ದ ಕೇರಳ ಮೂಲದ ಸುನಿಲ್ ಅವರನ್ನು ಪತ್ತೆ ಮಾಡಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com