

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಾರಿಗೆ ಇಲಾಖೆಗೆ ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕೆಎಸ್ ಆರ್ ಟಿಸಿಗೆ 2450 ಹೊಸ ಬಸ್ ಖರೀದಿಗೆ ನಿರ್ಧಾರ ಕೈಗೊಂಡಿದ್ದಾರೆ.
ವಿಧಾನಸೌಧದಲ್ಲಿ ಇಂದು 2020-21ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಸಾರಿಗೆಯ ಪ್ರಮುಖ ಯೋಜನೆಗಳ ಕುರಿತು ಮಾತನಾಡಿದರು. '2019-20ನೇ ಸಾಲಿಗೆ 7100 ಕೋಟಿರೂಗಳ ರಾಜಸ್ವ ಸಂಗ್ರಹಣೆ ಗುರಿ ಹೊಂದಲಾಗಿದೆ. 2020-21ನೇ ಸಾಲಿನಿಂದ ಆಸನ ಸಾಮಾರ್ಥ್ಯ 12ಕ್ಕಿಂತ ಹೆಚ್ಚು ಹಾಗೂ 20 ಆಸನಗಳನ್ನು ಮೀರಿದ ಪ್ರಯಾಣಿಕರನ್ನು ಕೊಂಡೊಯ್ಯುವ ಒಪ್ಪಂದ ವಾಹನಗಳಿಗೆ ಮೋಟಾರು ವಾಹನ ತೆರಿಗೆಯಲ್ಲಿ ತ್ರೈಮಾಸಿಕ ಪ್ರತಿ ಆಸನಕ್ಕೆ 900 ರೂಗಳು ನಿಗಧಿ ಮಾಡಲಾಗುತ್ತದೆ ಎಂದು ಹೇಳಿದರು.
ಅಂತೆಯೇ 1998 ನೇ ಮೋಟಾರು ವಾಹನ ಕಾಯ್ದೆ ಕಲಂ ೮೮(೯) ರ ಅಡಿಯಲ್ಲಿ ರಹದಾರಿ ಪಡೆದು ಆಚರಣೆ ಮಾಡುವ ಹೊಸ ಮಾದರಿಯ ಸ್ಲೀಪರ್ ಕೋಚ್ ವಾಹನಗಳ ನೊಂದಣಿ ಸಮಯದಲ್ಲಿ ತ್ರೈಮಾಸಿಕ ತೆರಿಗೆ ಪ್ರತೀ ಸ್ಲೀಪರ್ಗೆ 4000 ರೂ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಒಟ್ಟಾರೆ 2020-21ನೇ ಸಾಲಿಗೆ 7115 ಕೋಟಿ ರೂಗಳ ಸಂಗ್ರಹಣೆ ಗುರಿ ಹೊಂದಲಾಗಿದ್ದು, 2019-20ನೇ ಸಾಲಿನಲ್ಲಿ 20950 ಕೋಟಿ ರಾಜಸ್ವ ಸಂಗ್ರಹಣೆ ಗುರಿ ಹೊಂದಲಾಗಿದೆ. ಫೆಬ್ರವರಿ ಅಂತ್ಯದವರೆಗೆ 19701 ಕೋಟಿ ರೂ ಸಂಗ್ರಹ ವಾಗಿದೆ ಎಂದು ಹೇಳಿದರು.
ಇನ್ನು ಕೆಎಸ್ ಆರ್ ಟಿಸಿಗೆ 2450 ಹೊಸ ಬಸ್ ಖರೀದಿಗೆ ನಿರ್ಧಾರ ಕೈಗೊಂಡಿದ್ದು, ಇದಲ್ಲದೆ ಬಿಎಂಟಿಸಿಗೆ ಪ್ರತಿ ವರ್ಷ 100 ಕೋಟಿ ರೂ ಸಹಾಯಧನ ನೀಡಲು ಬಿಎಸ್ ವೈ ಮುಂದಾಗಿದ್ದು, ಒಟ್ಟು ಏಳು ವರ್ಷದವರೆಗೆ ಬಿಎಂಟಿಸಿಗೆ ಕೋಟಿ ರೂ ಸಹಾಯಧನ ನೀಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಬಿಎಂಟಿಸಿಗಾಗಿ 600 ಕೋಟಿ ರೂಗಳಲ್ಲಿ 1,500 ಡೀಸೆಲ್ ಬಸ್ ಗಳ ಖರೀದಿ ಮತ್ತು 500 ಸಾಮಾನ್ಯ ಎಲೆಕ್ಟ್ರಿಕ್ ಬಸ್ ಗಳ ಖರೀದಿ ಮಾಡುವುದಾಗಿ ಹೇಳಿದ್ದಾರೆ.
ದ್ವಿಚಕ್ರ ವಾಹನ ಸಾಲ ಸೌಲಭ್ಯ
ಇ–ಕಾಮರ್ಸ್ ಉದ್ಯೋಗಕ್ಕೆ ಸೇರುವವರಿಗೆ ದೇವರಾಜ್ ಅರಸ್ ನಿಗಮದ ಮೂಲಕ ದ್ವಿ ಚಕ್ರ ವಾಹನ ಕೊಳ್ಳಲು ಸಾಲ ಸೌಲಭ್ಯ ಒದಗಿಸಲಾಗುತ್ತದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಕರ್ನಾಟಕ ಬಜೆಟ್ 2020: ಉತ್ತರ ಕರ್ನಾಟಕಕ್ಕೆ ಬಂಪರ್, ಮಹದಾಯಿ ಯೋಜನೆಗೆ 500 ಕೋಟಿ ರೂ
ಕರ್ನಾಟಕ ಬಜೆಟ್ 2020: ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ, ಇಂಧನ ಇನ್ನೂ ದುಬಾರಿ
ಕರ್ನಾಟಕ ಬಜೆಟ್ 2020-21: ಕೇಂದ್ರದಿಂದ ಸಿಗಬೇಕಿದ್ದ ಅನುದಾನದಲ್ಲಿ 8000 ಕೋಟಿ ರೂ ಕಡಿಮೆ-ಸಿಎಂ ಯಡಿಯೂರಪ್ಪ
ಬಿಜೆಪಿ-2 ಸರ್ಕಾರದ ಚೊಚ್ಚಲ ಬಜೆಟ್: 2020-21ನೇ ಸಾಲಿನ ಆಯವ್ಯಯ ಮಂಡಿಸುತ್ತಿರುವ ಸಿಎಂ ಯಡಿಯೂರಪ್ಪ
ರಾಜ್ಯ ಬಜೆಟ್ 2020-21; ವಿಧಾನಸೌಧಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ
ಆಯವ್ಯಯ ಮಂಡನೆಗೂ ಮುನ್ನ ಸಿಎಂ ಟೆಂಪಲ್ ರನ್: ದೇವಾಲಯದಲ್ಲಿ ಬಜೆಟ್ ಪ್ರತಿಗೆ ಪೂಜೆ
ಬಜೆಟ್ ಮಂಡನೆ ಮುನ್ನ ಸಿಎಂ ಯಡಿಯೂರಪ್ಪ ಅವರ ಅಂತಿಮ ತಯಾರಿ ಹೇಗಿತ್ತು?: ಅವರ ತಂಡ ಮಾಡಿದ ಕೆಲಸವೇನು?
ರಾಜ್ಯ ಬಜೆಟ್ 2020-2021: ಆರ್ಥಿಕ ಸಂಕಷ್ಟದ ನಡುವೆಯೂ ಕೃಷಿ, ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯಕ್ಕೆ ಆದ್ಯತೆ
ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭ: 7ನೇ ಬಾರಿ ಆಯವ್ಯಯ ಮಂಡಿಸಲಿರುವ ಬಿಎಸ್'ವೈ, ಹೊಸ ಯೋಜನೆಗಳೇನು?