ವೋಲ್ವೋದಿಂದ ರಸ್ತೆ ಸುರಕ್ಷತಾ ಕಾರ್ಯಕ್ರಮ
ಮಹಿಳೆ ಹಾಗೂ ವಿದ್ಯಾರ್ಥಿಗಳಿಗೆ ಸಾರಿಗೆ ನಿಯಮಗಳ ಬಗ್ಗೆ ಅರಿವು ಮೂಡಿಸಲು ರಸ್ತೆ ಸುರಕ್ಷತಾ ಕಾರ್ಯಕ್ರಮವನ್ನು ವೋಲ್ವೋ ಕಂಪನಿ ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ಕಳೆದೊಂದು ವರ್ಷದಲ್ಲಿ 5,502 ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ 755 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ರಸ್ತೆ ಸುರಕ್ಷತೆಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ವೋಲ್ವೋ ಕಂಪನಿಯು ಬೆಂಗಳೂರಿನ ಕೆ.ಆರ್.ಪುರಂ, ಹೊಸಕೋಟೆ ಹಾಗೂ ವೈಟ್ಫೀಲ್ಡ್ ಸುತ್ತಲಿನ 65 ಹಳ್ಳಿಗಳ ಶಾಲಾ ಮಕ್ಕಳು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಂಚಾರ ನಿಯಮಗಳು ಹಾಗೂ ಸುರಕ್ಷತೆಯ ಕುರಿತಂತೆ ಬ್ಯಾನರ್ ಹಾಗೂ ಕರಪತ್ರಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಇದಲ್ಲದೇ ಸ್ಥಳೀಯರಿಗೆ ತಜ್ಞರಿಂದ ಮಾಹಿತಿಯನ್ನು ನೀಡಲಾಗುತ್ತದೆ. ಪ್ರತಿಷ್ಠಿತ ವಾಹನ ತಯಾರಿಕ ಕಂಪನಿಯಾದ ವೋಲ್ವೋ ಹೋಪ್ ಫೌಂಡೇಶನ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಅಪಘಾತದಲ್ಲಿ ಬಾಧಿತರಾದವರ ಕುಟುಂಬಗಳಿಗೂ ಹೋಪ್ ಫೌಂಡೇಶನ್ ದೀರ್ಘಕಾಲಿನ ಬೆಂಬಲ ನೀಡುತ್ತದೆ.
ವಾರ್ಷಿಕ ವಹಿವಾಟು ರು. 500 ಕೋಟಿ: ಹ್ಯಾವೆಲ್ಸ್ ಯೋಜನೆ
ಪ್ರತಿಷ್ಠಿತ ವಿದ್ಯುತ್ ಉಪಕರಣಗಳ ಉತ್ಪಾದನಾ ಕಂಪನಿ ಹ್ಯಾವೆಲ್ಸ್ ಇಂಡಿಯಾ ತನ್ನ ವಾರ್ಷಿಕ ವಹಿವಾಟನ್ನು 500 ಕೋಟಿಗೆ ಏರಿಸಲು ಯೋಜನೆ ರೂಪಿಸಿದೆ. ಇದರ ಅಂಗವಾಗಿ ಹೆಚ್ಚುವರಿಯಾಗಿ 10 ಮಳಿಗೆ ಪ್ರಾರಂಭಿಸಲು ನಿರ್ಧರಿಸಿದೆ. ಈಗಾಗಲೇ ದೇಶಾದ್ಯಂತ 200 ಹಾಗೂ ರಾಜ್ಯದಲ್ಲಿ 25 ಮಳಿಗೆಗಳನ್ನು ಸಂಸ್ಥೆ ಹೊಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ 8 ಸಾವಿರ ಕೋಟಿ ವಹಿವಾಟು ಹೊಂದಿರುವ ಹ್ಯಾವೆಲ್ಸ್ ಮುಂದಿನ 2 ವರ್ಷದಲ್ಲಿ ಭಾರತದಲ್ಲಿಯೂ ತನ್ನ ಪ್ರಭುತ್ವ ಸಾಧಿಸಲು ಪಣ ತೊಟ್ಟಿದೆ ಎಂದು ಕಂಪನಿಯ ಭಾರತೀಯ ಘಟಕದ ಮುಖ್ಯಸ್ಥ ಸುನಿಲ್ ಸಿಕ್ಕಾ ತಿಳಿಸಿದ್ದಾರೆ. ರಿಯೋ ಸ್ವಿಚ್ಗಳ ಮೂಲಕ ಕಂಪನಿಯು ಗ್ರಾಮೀಣ ಜನತೆಯ ಆಶೋತ್ತರಗಳಿಗೆ ಸ್ಪಂದಿಸಲು ಮುಂದಾಗಿದೆ. ಕಳೆದ 2 ವರ್ಷಗಳಲ್ಲಿ ರಾಜ್ಯದ 38 ಪಟ್ಟಣಗಳಲ್ಲಿ ವಿತರಕರು ಹಾಗೂ ಮಾರಾಟಗಾರರನ್ನು ನೇಮಿಸಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದೊಳಗೆ ಇನ್ನು 33 ಪಟ್ಟಣಗಳಲ್ಲಿ ವಿತರಕರು ಹಾಗೂ ಮಾರಾಟಗಾರರನ್ನು ನೇಮಿಸಲು ನಿರ್ಧರಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ 50 ಸಾವಿರ ಗ್ರಾಹಕರನ್ನು ತಲುಪಿರುವ ಸಂಸ್ಥೆ, ಭವಿಷ್ಯದಲ್ಲಿ ಇನ್ನಷ್ಟು ವೃದ್ಧಿಸುವ ಆಲೋಚನೆ ಹೊಂದಿದೆ ಎಂದು ಸಿಕ್ಕಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಪ್ಪು, ಪೌಚ್ನಲ್ಲಿ ಹ್ಯಾಟ್ಸನ್ ಮೊಸರು
ಹ್ಯಾಟ್ಸನ್ ಅಗ್ರೋ ಪ್ರೊಡಕ್ಟ್ ಲಿಮಿಟೆಡ್ ಸಂಸ್ಥೆಯು ಕಪ್ ಮತ್ತು ಪೌಚ್ಗಳಲ್ಲಿ ಮೊಸರು ಒದಗಿಸಲು ಪ್ರಾರಂಭಿಸಿದೆ. ಗ್ರಾಹಕರ ಅಗತ್ಯ ಮನಗಂಡು ಕಪ್ ಹಾಗೂ ಪೌಚ್ಗಳಲ್ಲಿ ಮೊಸರನ್ನು ಮಾರುಕಟ್ಟೆಗೆ ತರಲಾಗಿದೆ. ದೇಶದ ಖಾಸಗಿ ವಲಯದ ದೊಡ್ಡ ಹೈನು ಉದ್ಯಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹ್ಯಾಟ್ಸನ್ ಕಂಪನಿಯು ದಕ್ಷಿಣ ಭಾರತದ ಮಾರುಕಟ್ಟೆಯತ್ತ ಹೆಚ್ಚಿನ ಒಲವು ತೋರಿದೆ. ಕಪ್ನಲ್ಲಿ 60, 125, 200 ಹಾಗೂ 400 ಗ್ರಾಂಗಳ ಮೊಸರು ಸಿಗುತ್ತದೆ. ಪೌಚ್ನಲ್ಲಿ 100, 200, 500 ಗ್ರಾಂ ಹಾಗೂ 1 ಕೆಜಿ ಮೊಸರು ದೊರೆಯುತ್ತದೆ. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಮಳಿಗೆಗಳಲ್ಲಿ ಹ್ಯಾಟ್ಸನ್ ಮೊಸರು ದೊರೆಯುತ್ತದೆ.
ದೇಶದಲ್ಲಿ 10 ಸಂಸ್ಕರಣಾ ಘಟಕ ಹೊಂದಿರುವ ಹ್ಯಾಟ್ಸನ್ 38 ದೇಶಗಳಿಗೆ ಹಾಲಿನ ಉತ್ಪನ್ನ ರಫ್ತು ಮಾಡುತ್ತಿದೆ. ಅರುಣ್ ಐಸ್ಕ್ರೀಂ, ಐಬಾಕೋ ಸ್ಟೋರ್, ಆರೋಕ್ಯ ಹಾಲು ಹ್ಯಾಟ್ಸನ್ ಸಂಸ್ಥೆಯ ಪ್ರತಿಷ್ಠಿತ ಉತ್ಪನ್ನಗಳಾಗಿವೆ.
ಅನಿವಾ ಪನೀರ್: ಸುದೀರ್ಘ ಕಾಲದವರೆಗೆ ಇರಬಹುದಾದ ಅನಿವಾ ಪನೀರ್ನ್ನು ಹ್ಯಾಟ್ಸನ್ ಅಗ್ರೋ ಪ್ರೊಡಕ್ಟ್ ಲಿಮಿಟೆಡ್ ಬಿಡುಗಡೆಮಾಡಿದೆ. ವಿಶೇಷ ವ್ಯಾಕ್ಯುಂ ಫೋಮಿಂಗ್ ಪ್ಯಾಕೆಜಿಂಗ್ ಪ್ರೊಸೆಸ್ನಿಂದ ಬಹುದಿನಗಳವರೆಗೆ ಪನೀರ್ ಸುರಕ್ಷಿತವಾಗರಿಲಿದೆ. ಪ್ರೋಟಿನ್ ಹಾಗೂ ಕ್ಯಾಲ್ಸಿಯಂಗಳನ್ನು ಸಮೃದ್ಧವಾಗಿ ಹೊಂದಿರುವ ಪನೀರ್, ಮೂಳೆ ಹಾಗೂ ಹಲ್ಲುಗಳ ಆರೋಗ್ಯಕ್ಕೆ ನೆರವಾಗಲಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಟಿಸಿಐ ಮೂಲಕ ಯಾವುದೇ ದೇಶಕ್ಕೆ ರಾಖಿ ಕಳುಹಿಸಿ
ಟಿಸಿಐ(ಎಕ್ಸ್ಪಿಎಸ್) ಸಂಸ್ಥೆಯು ಕೇವಲ 48 ಗಂಟೆಗಳಲ್ಲಿ ವಿಶ್ವದ ಯಾವುದೇ ಸ್ಥಳದಲ್ಲಿರುವ ಸಹೋದರ-ಸಹೋದರಿಯರಿಗೆ ರಾಖಿ ತಲುಪಿಸುವ ಯೋಜನೆಯನ್ನು ಸತತ 14ನೇ ವರ್ಷವು ಮುಂದುವರಿಸಿದೆ. ಉಚಿತ ದೂರವಾಣಿ ಸಂಖ್ಯೆ 1800200977ಗೆ ಕರೆ ಮಾಡಿ ಅಥವಾ ಅಂತರ್ಜಾಲ ತಾಣ (ಢಿಢಿಢಿ.ಛಟಿಟ್ಟಟ್ಠಝ್ಞ್ಝ.್ಛ್ಟಟ/ಢಿಢಿಢಿ.ಡ್ಛ್ಝ್ಢಿಠಡ.್ಛ್ಟಟ) ಕ್ಕೆ ಭೇಟಿ ನೀಡಿ ರಾಖಿಯನ್ನು ಖರೀದಿಸಿ ಕಳುಹಿಸಬಹುದಾಗಿದೆ. ಭಾರತದ 13 ಸಾವಿರ ಸ್ಥಳಗಳಿಗೆ 101 ಮೊತ್ತಕ್ಕೆ ರಾಖಿ ನೀಡಲಾಗುತ್ತದೆ. ಅಂತರಾಷ್ಟ್ರೀಯ ಸೇವೆಗಳಿಗೆ 1001 ದರ ನಿಗದಿಮಾಡಲಾಗಿದೆ.
'ರಾಖಿ ಎಕ್ಸ್ಪ್ರೆಸ್'
ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಡಿಎಚ್ಎಲ್ ಬ್ಲೂ ಡಾರ್ಟ್ ಕಂಪನಿಯು 'ರಾಖಿ ಎಕ್ಸ್ಪ್ರೆಸ್' ಸೇವೆ ಆರಂಭಿಸಿದೆ. 'ರಾಖಿ ಎಕ್ಸ್ಪ್ರೆಸ್'ನಲ್ಲಿ ಪ್ರಯಾಣಿಸಿ ಟೈಟಾನ್ ಗಡಿಯಾರ ಗೆಲ್ಲುವ ಅವಕಾಶವು ಗ್ರಾಹಕರಿಗಿದೆ. ರಾಖಿ ಎಕ್ಸ್ಪ್ರೆಸ್ ಸೇವೆಯು ಆ.31ರವರೆಗೆ ಲಭ್ಯವಿದೆ.
ರಕ್ಷಾ ಬಂಧನದ ಅಂಗವಾಗಿ ಸಹೋದರಿಯರು ರಾಖಿಯನ್ನು ಕಳುಹಿಸಲು ಬ್ಲೂ ಡಾರ್ಟ್ ಕೋರಿಯರ್ನ್ನು ಮಾಧ್ಯಮವಾಗಿ ಬಳಸಿಕೊಂಡು ವೈಯಕ್ತಿಕ ಲಕೋಟೆ ಮೂಲಕ ತಮ್ಮ ಸಂದೇಶ ಕಳುಹಿಸಬಹುದಾಗಿದೆ. ಭಾರತದಾದ್ಯಂತ 500 ಗ್ರಾಂನ ಲಕೋಟೆಗೆ 200 ದರ ನಿಗದಿಮಾಡಲಾಗಿದೆ. ಈ ಲಕೋಟೆಯ ಮೇಲೆ ಒಂದು ಘೋಷಣೆಯನ್ನು ಸಹೋದರಿಯರು ಬರೆಯಬೇಕು. ಅತ್ಯುತ್ತಮ 100 ಘೋಷಣೆಗಳಿಗೆ ಕಂಪನಿಯು ಟೈಟಾನ್ ಗಡಿಯಾರ ನೀಡುತ್ತದೆ. ವಿಶ್ವದ 220 ದೇಶಗಳಿಗೆ ಗ್ರಾಹಕರು ಈ ಸೇವೆ ಮೂವಕ ರಾಖಿ ಕಳುಹಿಸಬಹುದಾಗಿದೆ. ಇದಲ್ಲದೇ ಭಾರತದ 32,751ಕ್ಕೂ ಅಧಿಕ ಪ್ರದೇಶಗಳಿಗೆ ರಕ್ಷಾ ಬಂಧನದ ರಾಖಿಗಳನ್ನು ತಲುಪಿಸುತ್ತದೆ ಎಂದು ಪ್ರಕಟಣೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೇತನ್ ಕುಲಕರ್ಣಿ ಹೇಳಿದ್ದಾರೆ.
ಮಿಸ್-ಮಿಸ್ಟರ್ ಇಂಡಿಯಾ ಸ್ಪರ್ಧೆ
ಮೈಶಾಪ್ಬಜಾರ್ ಇ-ಕಾಮರ್ಸ್ ಅಂತರ್ಜಾಲ ತಾಣವು ಮಿಸ್ ಇಂಡಿಯಾ ಹಾಗೂ ಮಿ.ಇಂಡಿಯಾ ಸ್ಪರ್ಧೆಯನ್ನು ಆಯೋಜಿಸಿದೆ. ಈ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆ.31ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಹಿಂದಿ ಕಿರುತೆರೆಯ ಖ್ಯಾತ ಕಲಾವಿದ ಶಕ್ತಿ ಆನಂದ್ ಅವರು ಕಾರ್ಯಕ್ರಮದ ರಾಯಭಾರಿಯಾಗಿರುತ್ತಾರೆ. ವಿದ್ಯುತ್, ಹಸಿರು ಹಾಗೂ ನೀರು ಉಳಿಸಿ ಅಭಿಯಾನದ ಮೊದಲ ಕಾರ್ಯಕ್ರಮ ಇದಾಗಿದೆ. ದೇಶದ ಯಾವುದೆ ಮೂಲೆಯಲ್ಲಿರುವ 18-35 ವಯೋವಾನದವರು ಸ್ಪರ್ಧೆಯ ಸ್ಕ್ರೀನಿಂಗ್ನಲ್ಲಿ ಭಾಗವಹಿಸಬಹುದು. ಸ್ಪರ್ಧೆಯು ಒಟ್ಟು 6 ಹಂತಗಳನ್ನು ಹೊಂದಿದ್ದು, ಮೊದಲ 3 ಹಂತಗಳು ಪ್ರಸ್ತುತ ವಿದ್ಯಮಾನ, ಹಾಲಿವುಡ್ ಮತ್ತು ಭಾರತೀಯ ಚಲನಚಿತ್ರೋದ್ಯಮ ಹಾಗೂ ಬುದ್ಧಿಮಟ್ಟ ಮೌಲ್ಯಮಾಪನವು ಅಂತರ್ಜಾಲದ ಮೂಲಕವೇ ನಡೆಯಲಿದೆ. ಆ ಬಳಿಕ ನಡಿಗೆ, ಸೌಂದರ್ಯ ಹಾಗೂ ಸ್ವಂತ ವಿವರಗಳನ್ನೊಳಗೊಂಡ 2 ನಿಮಿಷಗಳ ವಿಡಿಯೋವನ್ನು ಸಲ್ಲಿಸಬೇಕು. ಇದನ್ನು ಆಧರಿಸಿ 50 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

