ವಿಮಲ್ನ ಅನ್ಫಾರ್ಮಲ್ ಬಟ್ಟೆ ಮಾರುಕಟ್ಟೆಗೆ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮಾದರಿ ಉಡುಪುಗಳ ಬ್ರಾಂಡ್ ವಿಮಲ್ ತನ್ನ ಹೊಸ ಅನ್ಫಾರ್ಮಲ್ ಫ್ಯಾಷನ್ ಶ್ರೇಣಿಯ ಬಟ್ಟೆಗಳನ್ನು ಬಿಡುಗಡೆ ಮಾಡಿದೆ. ಈ ಬಟ್ಟೆಗಳ ಬಿಡುಗಡೆ ಸಲುವಾಗಿ ಭಾನುವಾರ 'ನೋ ಟೈ ಡೇ' ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಟೈ ಬರ್ನಿಂಗ್ ಪಾರ್ಟಿಗಳನ್ನೂ ಆಯೋಜಿಸಲಾಗಿತ್ತು. ಅಲ್ಲದೆ, ಹೊಸ ಶ್ರೇಣಿಯ ಬಟ್ಟೆಗಳ ಬಿಡುಗಡೆ ಸಲುವಾಗಿ ಹೊಸ ಅಭಿಯಾನ 'ಟೈಂ ಟು ಬಿ ಅನ್ಫಾರ್ಮಲ್' ಅನಾವರಣಗೊಳಿಸಲಾಯಿತು. ಸಾಂಪ್ರದಾಯಿಕ ಫಾರ್ಮಲ್ ವೇರ್ಗೆ ಬದಲಾಗಿ ಅದರಂತೆ ಆಕರ್ಶಕವಾಗಿ ಕಾಣುವ ಫ್ಯಾಷನ್ ಜಾಕೆಟಿಂಗ್, ಫ್ಯಾಷನ್ ಕಾಟನ್, ಫ್ಯಾಷನ್ ಅಂಡ್ ಫೀಲ್, ಫ್ಯಾಷನ್ ಸೆರಮೋನಿಯಲ್ಸ್ ಫ್ಯಾಷನ್ ಶ್ರೇಣಿಗಳನ್ನು ಬಿಡುಗಡೆ ಮಾಡಲಾಯಿತು. ಹೊಸ ಫ್ಯಾಷನ್ ಶ್ರೇಣಿ ಮತ್ತು ಅಭಿಯಾನ ಕುರಿತಂತೆ ಮಾತನಾಡಿದ ರಿಲಯನ್ಸ್ ಟೆಕ್ಸ್ಟೈಲ್ ವಿಭಾಗದ ಅಧ್ಯಕ್ಷ ಆನಂದ್ ಫರೇಕ್, ಫಾರ್ಮಲ್ ಉಡುಪುಗಳ ಅಗತ್ಯತೆ ಹೆಚ್ಚುತ್ತಿರುವ ಸಂದರ್ಭಕ್ಕೆ ಅನುಗುಣವಾಗಿ ಉಡುಪುಗಳನ್ನು ತಯಾರಿಸುವ ಮೂಲಕ 'ಎಲ್ಲರಿಗೂ ಫ್ಯಾಷನ್' ಎಂಬ ವಿಮಲ್ ಉದ್ಘೋಷಕ್ಕೆ ನಾಂದಿ ಹಾಡಲಾಗಿದೆ. ಇದು ಗ್ರಾಹಕರನ್ನು ಸಂತುಷ್ಟಗೊಳಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ಮನೆ ಸ್ವಚ್ಛಕ್ಕೆ ಬಾಷ್ ಉಪಕರಣ
ತಂತ್ರಜ್ಞಾನ ಮತ್ತು ಸೇವಾ ಕಂಪನಿ ಬಾಷ್ ಪವರ್ ಟೂಲ್ಸ್ ಕಾರು ಮತ್ತು ಮನೆಗಳನ್ನು ಸ್ವಚ್ಛಗೊಳಿಸುವ ವಿನೂತನ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 'ಡು ಇಟ್ ಯುವರ್ಸೆಲ್ಫ್' (ನಿಮ್ಮ ಮನೆ ಕೆಲಸ ಸ್ವತಃ ಮಾಡಿಕೊಳ್ಳಿ) ಎಂಬ ಘೋಷಣೆಯಡಿ ಸಂಸ್ಥೆ ಈ ಸಾಧನವನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಕೆಲಸಗಾರರ ಕೊರತೆ ನಡುವೆಯೂ ಮನೆ ಮತ್ತು ಕಾರುಗಳನ್ನು ಸ್ವಚ್ಛಗೊಳಿಸಲು ಇದರಿಂದ ಅನುಕೂಲವಾಗಲಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಎರಡು ಮಾದರಿಯ ಉಪಕರಣಗಳನ್ನು ಬಾಷ್ ಪವರ್ ಟೂಲ್ಸ್ ಕಂಪನಿ ಪರಿಚಯಿಸಿದ್ದು, ಇದನ್ನು ಕೊಂಡೊಯ್ಯಲು ಚಕ್ರಗಳನ್ನು ಅಳವಡಿಸಲಾಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಾಷ್ ಪವರ್ ಟೂಲ್ಸ್ ಕಂಪನಿ ಉಪಾಧ್ಯಕ್ಷ ವಿಜಯ್ ಪಾಂಡೆ, ಡು ಇಟ್ ಯುವರ್ಸೆಲ್ಫ್ ವಿಭಾಗದ ಉಪಕರಣಗಳ ಮಾರುಕಟ್ಟೆ ವಾರ್ಷಿಕ ಶೇ. 20ರ ಬೆಳವಣಿಗೆ ಕಾಣುತ್ತಿದೆ. ಕೆಲಸದ ಒತ್ತಡದಲ್ಲಿರುವ ನಾಗರಿಕರಿಗೆ ಈ ಉಪಕರಣಗಳು ಸಹಕಾರಿಯಾಗುತ್ತದೆ ಎಂದರು. ಬಾಲಿವುಡ್ ತಾರೆ ಪ್ರಾಚಿ ದೇಸಾಯಿ ನೂತನ ಸಾಧನಗಳನ್ನು ಬಿಡುಗಡೆ ಮಾಡಿದರು. ಬಾಷ್ ಲಾನ್ ಅಂಡ್ ಗಾರ್ಡನ್ ಟೂಲ್ಸ್ ಏಷ್ಯಾ ಉಪಖಂಡದ ಉತ್ಪನ್ನ ನಿರ್ವಹಣೆ ವಿಭಾಗದ ಮುಖ್ಯಸ್ಥ ನಿರಂಜನ್ ಎನ್. ನಾಯಕ್ ಪಾಲ್ಗೊಂಡಿದ್ದರು.
ಸ್ಮಾರ್ಟ್ ಫೋನ್ ಕೊಳ್ಳುವಿಕೆ ಹೆಚ್ಚಳ
ಸ್ಮಾರ್ಟ್ ಫೋನ್ ಬೆಂಗಳೂರಿನಲ್ಲಿ ವ್ಯಾಪಕವಾಗಿ ಖರೀದಿಯಾಗುತ್ತಿರುವ ಗ್ಯಾಜೆಟ್. ಇ- ಬೇ ಇಂಡಿಯಾ ದೇಶದಲ್ಲೇ ಅತ್ಯಂತ ಮುಂಚೂಣಿಯಲ್ಲಿರುವ ಆನ್ಲೈನ್ ಮಾರುಕಟ್ಟೆ ಸ್ಥಳ (ಇ- ಕಾಮರ್ಸ್ ಮಾರ್ಕೆಟ್ ಪ್ಲೇಸ್) ಬಿಡುಗಡೆ ಮಾಡಿರುವ 'ಬ್ಯಾಲೆಟ್ ಆಫ್ ಗ್ಯಾಜೆಟ್ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿರುವ ಅಂಶ. 2013ರ ಏ.1ರಿಂದ ಜೂನ್ 30ರವರೆಗೆ ನಡೆದ ಈ ಸಮೀಕ್ಷೆಯಲ್ಲಿ ಸ್ಮಾರ್ಟ್ ಫೋನ್ ಅತ್ಯಂತ ವ್ಯಾಪಕವಾಗಿ ಖರೀದಿಯಾಗುತ್ತಿರುವ ಗ್ಯಾಜೆಟ್ ಎಂದು ಗೊತ್ತಾಗಿದೆ. ಸ್ಮಾರ್ಟ್ ಫೋನ್ ಜತೆಗೆ ಮೊಬೈಲ್ ಫೋನ್, ಲ್ಯಾಪ್ಟಾಪ್, ಟ್ಯಾಬ್ಲೆಟ್, ಡಿಜಿಟಲ್ ಕ್ಯಾಮರಾ, ಟೆಲಿವಿಷನ್ಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿತ್ತು. ಈ ಕುರಿತಂತೆ ಮಾತನಾಡಿದ ಇ- ಬೇ ಇಂಡಿಯಾದ ಮುಖ್ಯ ಕಾರ್ಯತಂತ್ರಾಕಾರಿ ರುತುಲ್ ಘೋಷ್, ಬೆಂಗಳೂರಿನ ಗ್ರಾಹಕರು ನಡೆಸುತ್ತಿರುವ ಶೇ.52ರಷ್ಟು ವಹಿವಾಟು ಎಲೆಕ್ಟ್ರಾನಿಕ್ ಸಾಮಗ್ರಿಗಳದ್ದಾಗಿದೆ. ಅದರಲ್ಲೂ ಇತ್ತೀಚೆಗೆ ಸ್ಮಾರ್ಟ್ ಫೋನ್ಗಳ ಕೊಳ್ಳುವಿಕೆ ಗಣನೀಯವಾಗಿ ಹೆಚ್ಚಾಗಿದ್ದು, ಶೇ. 47ರಷ್ಟಿದೆ ಎಂದರು. ಸಮೀಕ್ಷೆ ಪ್ರಕಾರ ಮೆಟಟ್ರೋ ಸಿಟಿ ಮಾತ್ರವಲ್ಲದೆ ಇತರೆ ನಗರಗಳಲ್ಲೂ ಸ್ಮಾರ್ಟ್ಫೋನ್ ಖರೀದಿ ಹೆಚ್ಚಾಗಿದೆ.
ಬೋಯಿಂಗ್ 787 ವಿಮಾನಯಾನ ವಿಸ್ತರಣೆ
ಖತಾರ್ ಏರ್ವೇಸ್ ಭಾರತದಲ್ಲಿ ತನ್ನ ಬೋಯಿಂಗ್ 787 ವಿಮಾನಯಾನ ವಿಸ್ತರಿಸಲು ಮುಂದಾಗಿದ್ದು, ಸೆಪ್ಟೆಂಬರ್ 1ರಿಂದ ಬೆಂಗಳೂರು-ದೆಹಲಿ ಮಧ್ಯೆ ತನ್ನ ವಿಮಾನ ಹಾರಿಸಲಿದೆ. ಈ ಕುರಿತಂತೆ ಮಾತನಾಡಿದ ಖತಾರ್ ಏರ್ವೇಸ್ನ ದೇಶೀಯ ವ್ಯವಸ್ಥಾಪಕ ಹೆನ್ರೀ ಮೋಸೆಸ್, ಜನರ ಉತ್ತಮ ಪ್ರಯಾಣಕ್ಕಾಗಿ ಖತಾರ್ ಏರ್ವೇಸ್ ತನ್ನ ಸೇವೆ ವಿಸ್ತರಿಸುತ್ತಿದೆ. ಪ್ರಯಾಣಿಕರಿಗೆ ಈ ಸೇವೆ ಉತ್ತಮ ಅನುಭವ ನೀಡಲಿದೆ ಎಂದು ಹೇಳಿದರು. ಖತಾರ್ ಏರ್ವೇಸ್ನ 787 ವಿಮಾನ ಬ್ಯುಸಿನೆಸ್ ಕ್ಲಾಸ್ ಮತ್ತು ಎಕಾನಮಿ ಕ್ಲಾಸ್ ಕ್ಯಾಬಿನ್ಗಳನ್ನು ಹೊಂದಿದ್ದು, ಒಟ್ಟು 254 ಪ್ರಯಾಣಿಕರು ತೆರಳಬಹುದು. ಈ ಪೈಕಿ ಬ್ಯುಸಿನೆಸ್ ಕ್ಲಾಸ್ನ 22 ಮತ್ತು ಎಕಾನಮಿ ಕ್ಲಾಸ್ನ 232 ಸೀಟುಗಳಿವೆ.
ಆ್ಯನಿಮೇಷನ್ ಕುರಿತ ವಿಚಾರ ಸಂಕಿರಣ ಯಶಸ್ವಿ
ಆ್ಯನಿಮೇಷನ್ ಮತ್ತು ಮಲ್ಟಿಮೀಡಿಯಾ ತರಬೇತಿಯ ವಿಶ್ವ ಮಟ್ಟದ ಅರೇನಾ ಆ್ಯನಿಮೇಷನ್ ಲಂಡನ್ನ ಮಿಡ್ಲ್ಸೆಕ್ಸ್ ಯೂನಿವರ್ಸಿಟಿ ಸಹಯೋಗದೊಂದಿಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಆ್ಯನಿಮೇಷನ್ ಕುರಿತಂತೆ ವಿಚಾರ ಸಂಕಿರಣ ಆಯೋಜಿಸಿತ್ತು. ಒಂದು ಸಾವಿರ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಮಿಡ್ಲ್ಸೆಕ್ಸ್ ವಿವಿ ಭಾರತ ವಿಭಾಗದ ಮುಖ್ಯಸ್ಥ ಪ್ರೀತಮ್ ಸೈಕಿಯಾ, ಗ್ರೀನ್ ಗೋಲ್ಡ್ ಆ್ಯನಿಮೇಷನ್ನ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಥಾಮಸ್ ವಾಲ್ಕ್ಜಾ, ಆಪ್ಟೆಕ್ ಲಿಮಿಟೆಡ್ನ ವ್ಯವಹಾರ ಮುಖ್ಯಸ್ಥ ಇಯಾಸೋ ಥಂಪಿ ಮ್ಯಾಥ್ಯೂ, ಅರೇನಾ ಆ್ಯನಿಮೇಷನ್ ಮತ್ತು ಮಾಹಿತಿ ತಂತ್ರಜ್ಞಾನ ತರಬೇತಿಯ ವಿಭಾಗೀಯ ಮುಖ್ಯಸ್ಥ ಹಿಮಾಂಶು ಯಾಗ್ನಿಕ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಛೋಟಾಭೀಮ್ ಅಂಡ್ ದಿ ಥ್ರೋನ್ ಆಫ್ ಬಾಲಿ ಆ್ಯನಿಮೇಷನ್ ಚಿತ್ರದಲ್ಲಿ ಬಳಸಲಾದ ತಾಂತ್ರಿಕತೆಯ ಕುರಿತ ಚರ್ಚೆ ವಿಚಾರ ಸಂಕಿರಣದ ಪ್ರಮುಖ ಅಂಶವಾಗಿತ್ತು.
ಜಾನ್ಸನ್ನಿಂದ ಐಫ್ಲೋರ್ ಟೈಲ್ಸ್
ಸೆರಾಮಿಕ್ ಟೈಲ್ಸ್ಗಳಿಗೆ ಪ್ರಸಿದ್ಧಿಯಾಗಿರುವ ಜಾನ್ಸನ್ ಟೈಲ್ಸ್ ವಿನೂತನ ಐಫ್ಲೋರ್ ಶ್ರೇಣಿಯ ಟೈಲ್ಸ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಐಫ್ಲೋರ್ ಶ್ರೇಣಿಯ ಟೈಲ್ಸ್ಗಳು ವುಡ್, ಮ್ಯಾಟ್ರಿಕ್ಸ್ ಮತ್ತು ಸಿಮೆಂಟ್ ವಿನ್ಯಾಸವನ್ನು ಹೊಂದಿವೆ. ಈ ನೆಲಹಾಸುಗಳು ಹೊಳಪು(ಗ್ಲಾಸಿ) ಮಬ್ಬು(ಮ್ಯಾಟ್) ಫಿನಿಷ್ನಿಂಗ್ನಲ್ಲಿ ಲಭ್ಯ. ಅತ್ಯಾಧುನಿಕ ಮನೆಗಳು ಬಯಸುವ ನೆಲಹಾಸುಗಳು ಇವಾಗಿವೆ. ಪೆರಾಲ್ ಮತ್ತು ಸಿಮೆಂಟ್ ಮಾದರಿಯ ನೆಲಹಾಸಗಳು ಮನೆಗಳಿಗೆ ನೀಟಾಗಿ ಹೊಂದಿಕೊಳ್ಳುತ್ತವೆ. ಇನ್ನು ಮ್ಯಾಟ್ರಿಕ್ಸ್ ಮತ್ತು ವುಡ್ ಮಾದರಿಯ ನೆಲಹಾಸುಗಳು ಸಾಂಪ್ರದಾಯಿಕ ಮೆರಗು ನೀಡುತ್ತವೆ. ಈ ನೆಲಹಾಸುಗಳು ಕಂದು, ಒಣಕಂದು, ಬೂದು, ಕೆಂಪು ವರ್ಣಗಳಲ್ಲಿ ಲಭ್ಯ. ಐಫ್ಲೋರ್ ಶ್ರೇಣಿಯ ನೆಲಹಾಸುಗಳನ್ನು ಮನೆ ಹಾಗೂ ಮಳಿಗೆಗಳಿಗೆ ಬಳಸಬಹುದು. ನೂತನ ಐಫ್ಲೋರ್ ಶ್ರೇಣಿಯ ಟೈಲ್ಸ್ಗಳು ಜಾನ್ಸನ್ ಸ್ಟೋರ್ಗಳಲ್ಲಿ ಲಭ್ಯ. ಪ್ರತಿ ಚ.ಅಡಿಗೆ 55 ಬೆಲೆ ಇದೆ.
ಎಸ್ಎಂಇ ಉದ್ಯಮಿಗಳಿಗೆ ಕಾರ್ಪ್ ಸೌಲಭ್ಯ
ಕಾರ್ಪೊರೇಷನ್ ಬ್ಯಾಂಕ್ ಉತ್ತರ ವಲಯ ವಿಭಾಗದ ಪೀಣ್ಯ ಶಾಖೆ ವತಿಯಿಂದ ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ನಲ್ಲಿ ಎಸ್ಎಂಇ ಪ್ರದರ್ಶನ ಏರ್ಪಡಿಸಲಾಗಿತ್ತು. ಎಸ್ಎಂಇ ಉದ್ಯಮಿಗಳಿಗೆ ಬ್ಯಾಂಕ್ ನೀಡುತ್ತಿರುವ ಸೌಲಭ್ಯಗಳನ್ನು ವಿವರಿಸಲಾಯಿತು. ಕಾರ್ಪೋರೇಷನ್ ಬ್ಯಾಂಕ್ ಮಂಗಳೂರು ಕೇಂದ್ರ ಕಚೇರಿಯ ರಿಟೇಲ್ ಮತ್ತು ಎಸ್ಎಂಇ ವಿಭಾಗದ ಪ್ರಧಾನ ವ್ಯವಸ್ಥಾಪಕ ವಿ.ಎಸ್. ಕಾರ್ತಿಕೇಯನ್ ಮತ್ತು ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಅಧ್ಯಕ್ಷೆ ಲತಾ ಗಿರೀಶ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಎಂಇ ಕ್ಷೇತ್ರದಲ್ಲಿರುವ ತೊಡಕುಗಳು, ಬ್ಯಾಂಕ್ನಿಂದ ಸಿಗುವ ಸೌಲಭ್ಯಗಳನ್ನು ಇದೇ ಸಂದರ್ಭದಲ್ಲಿ ಉದ್ಯಮಿಗಳಿಗೆ ವಿವರಿಸಲಾಯಿತು. ಬ್ಯಾಂಕ್ನ ಉತ್ತರ ವಲಯ ಉಪ ಪ್ರಧಾನ ವ್ಯವಸ್ಥಾಪಕ ಜಿ. ನಾಗರಾಜನ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಎನ್.ಜೆ. ಜಯಾನಂದ್, ಬ್ಯಾಂಕ್ ಅಧಿಕಾರಿಗಳಾದ ಸಿ.ಎಸ್. ವೆಂಕಟರಾಮು ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

