ಭಾರತೀಯ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಮಂಡಳಿ (ಸೆಬಿ) ಇನ್‌ಸೈಡರ್ ಟ್ರೇಡಿಂಗ್ ಬಗ್ಗೆ ಹೊಸ ನಿಯಮಗಳನ್ನು ಶೀಘ್ರವೇ ಜಾರಿಗೊಳಿಸಲಿದೆ. ಇದರಿಂದಾಗಿ ಸೂಕ್ಷ್ಮ ಷೇರುಗಳ ದರಗಳ ಬಗೆಗಿನ ಮಾಹಿತಿ ದುರುಪಯೋಗವಾಗುವುದನ್ನು ತಡೆಗಟ್ಟಲು ಸಾಧ್ಯವಾಗಲಿದೆ. ಈ ವರ್ಷದ ಏಪ್ರಿಲ್‌ಲ್ಲಿ ಇನ್‌ಸೈಡರ್ ಟ್ರೇಡಿಂಗ್ ಬಗ್ಗೆ ಹೊಸ ನಿಯಮ ರೂಪಿಸಲು ಸೆಬಿ 19 ಸದಸ್ಯರ ಸಮಿತಿ ರಚಿಸಿತ್ತು.