ಬಿಐಎಎಲ್‌ನಲ್ಲಿ ರೇವಾ ಚಾರ್ಜಿಂಗ್ ಪಾಯಿಂಟ್

ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹೀಂದ್ರಾ ರೇವಾ ವಿದ್ಯುತ್ ಕಾರುಗಳ ..
ಬಿಐಎಎಲ್‌ನಲ್ಲಿ ರೇವಾ ಚಾರ್ಜಿಂಗ್ ಪಾಯಿಂಟ್
Updated on: 

ದೇವನಹಳ್ಳಿಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹೀಂದ್ರಾ ರೇವಾ ವಿದ್ಯುತ್ ಕಾರುಗಳ ಚಾರ್ಜಿಂಗ್ ಪಾಯಿಂಟ್ ಆರಂಭವಾಗಿದೆ. ದೇಶದಲ್ಲೇ ಇಂಥ ವ್ಯವಸ್ಥೆ ಮೊದಲ ಬಾರಿಗೆ ಆರಂಭವಾಗುತ್ತಿರುವುದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ. ಮಹೀಂದ್ರಾ ಇ2ಓ ಗ್ರಾಹಕರಿಗೆ ವಿಶೇಷವಾಗಿ ಈ ವ್ಯವಸ್ಥೆ ಒದಗಿಸಲಾಗುತ್ತಿದೆ. ಉಚಿತವಾಗಿ ಈ ಸೇವೆಯ ಜತೆಗೆ ಪಾರ್ಕಿಂಗ್ ಶುಲ್ಕದಲ್ಲೂ ಶೇ.20ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ದೇಶದ ಉಳಿದ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ವಿದ್ಯುತ್‌ನಿಂದ ಸಂಚರಿಸುವ ಕಾರುಗಳು ಹೆಚ್ಚಾಗಿವೆ. ಜತೆಗೆ ಮಹೀಂದ್ರಾ ರೇವಾ ಸಂಸ್ಥೆ ಬೆಂಗಳೂರಿನ ಹಲವು ಸ್ಥಳಗಳಲ್ಲಿ ಕಾರುಗಳಿಗಾಗಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಆರಂಭಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com