

ಹಳೆಯ ಕಿರಾಣಿ ಅಂಗಡಿಗಳ ಜಾಗಕ್ಕೆ ಹೊಸ ರೀತಿಯ ಮಳಿಗೆಗಳು ಬರುವುದು ಈಗ ಸಾಮಾನ್ಯವೇ ಆಗಿಬಿಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ಬಿಗ್ ಬಜಾರ್, ಫುಡ್ ಬಜಾರ್ನಂಥ ಮಳಿಗೆಗಳು ತಮ್ಮದೇ ಆದ ಛಾಪು ಮೂಡಿಸಿವೆ. ಒಂದೇ ಮಳಿಗೆಯಲ್ಲಿ ಎಲ್ಲ ರೀತಿಯ ವಸ್ತುಗಳನ್ನು ಅವು ಮಾರಾಟ ಮಾಡುತ್ತವೆ. ಹೀಗಾಗಿ, ಗ್ರಾಹಕರಿಗೆ ಒಂದೇ ಮಳಿಗೆಯಲ್ಲಿ ಎಲ್ಲ ರೀತಿಯ ವಸ್ತುಗಳು ದೊರೆಯುತ್ತವೆ.
ಆದರೆ ಈ ಇಂಥ ಮಳಿಗೆಗಳು ತಮ್ಮ ವಹಿವಾಟಿನಲ್ಲಿ ಕೊಂಚ ಭಿನ್ನತೆ ಅನುಸರಿಸಲು ಆರಂಭಿಸಿವೆ. ನಮ್ಮ ನಿಮ್ಮಂಥ ಗ್ರಾಹಕರಿಗೆ ಅಗತ್ಯವಾದ ಬೇಳೆ ಕಾಳುಗಳು ಮತ್ತು ಇತರ ವಸ್ತುಗಳನ್ನು ತಮ್ಮದೇ ಆದ ಬ್ರಾಂಡ್ಗಳಲ್ಲಿ ಬಿಡುಗಡೆ ಮಾಡಲು ಅವು ಮುಂದಾಗಿವೆ (ಈಗಾಗಲೇ ಹಲವು ಆಹಾರ ಮಳಿಗೆಗಳು ಇಂಥ ಕ್ರಮ ಅನುಸರಿಸುತ್ತಿವೆ).
ದೇಶದ ಹೈಪರ್ ಮಾರ್ಕೆಟ್ಗಳಲ್ಲಿ ಒಂದಾಗಿರುವ ಫ್ಯೂಚರ್ಗ್ರೂಪ್ ಇಂಥ ಒಂದು ನಿರ್ಧಾರಕ್ಕೆ ಬಂದಿದೆ. ಇನ್ನು ಸುಮಾರು ಆರರಿಂದ ಎಂಟು ತಿಂಗಳಲ್ಲಿ ಕಂಪನಿ ತನ್ನದೇ ಆದ ಬ್ರಾಂಡ್ಗಳಲ್ಲಿ ವಿವಿಧ ರೀತಿಯ ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
ಶುರುವಾಗಿದೆ
ಪ್ರಾದೇಶಿಕವಾಗಿ ಈಗಾಗಲೇ ಫ್ಯೂಚರ್ ಗ್ರೂಪ್ ಇಂಥ ಒಂದು ಕೆಲಸಕ್ಕೆ ಕೈ ಹಾಕಿದೆ. ಕೇರಳದಲ್ಲಿ ಈಗಾಗಲೇ ಕೆಂಪು ಅಕ್ಕಿ (ಕುಸುಬಲಕ್ಕಿ)ಯನ್ನು 'ರೆಡ್ ಮಟ್ಟ' ಎಂಬ ಬ್ರಾಂಡ್ ಹೆಸರಿನಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಬೇಳೆ ಕಾಳುಗಳನ್ನು 'ಏಕ್ತಾ' ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುತ್ತಿದೆ.
ಈ ಮೂಲಕ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಾದೇಶಿಕವಾಗಿ ತನ್ನನ್ನು ವಿಸ್ತರಿಸಿಕೊಂಡು ಜನರಿಗೆ ಹೆಚ್ಚು ಸನಿಹವಾಗಲು ಮುಂದಾಗುತ್ತದೆ. ಮತ್ತೊಂದು ಪ್ರಮುಖವಾದ ಅಂಶವೇನೆಂದರೆ ಸಮುದಾಯ ಆಧಾರಿತ ಆಹಾರ ಪದ್ಧತಿಗಳನ್ನು ಅದು ಕೇಂದ್ರೀಕರಿಸಲು ಮುಂದಾಗಿದೆ.
ಹೆಚ್ಚಲಿದೆ ಖಾಸಗಿ ಬ್ರಾಂಡ್
ಮಾರುಕಟ್ಟೆ ಸಂಶೋಧನಾ ಸಂಸ್ಥೆ ಎ.ಸಿ.ನಿಲ್ಸನ್ ನಡೆಸಿದ ಸಂಶೋಧನೆ ಪ್ರಕಾರ 2015ರ ವೇಳೆಗೆ ದೇಶದಲ್ಲಿ ಖಾಸಗಿ ಬ್ರಾಂಡ್ ವಹಿವಾಟು 3,108 ಕೋಟಿಗೆ ಹೆಚ್ಚಲಿದೆ. 2012ರಲ್ಲಿ ಖಾಸಗಿ ಬ್ರಾಂಡ್ ವಹಿವಾಟು ಶೇ.12ರಷ್ಟು ವೃದ್ಧಿಸಿದೆ.
ಇದರಲ್ಲಿ ಬೆಳಗಿನ ತಿಂಡಿಯ ವಸ್ತುಗಳು, ಪ್ಯಾಕ್ ಮಾಡಿದ ಆಹಾರ, ಕೆಚಪ್ ಮತ್ತು ಸಾಸ್ಗಳು ಸೇರಿ ಶೇ.75ರಷ್ಟು ಖಾಸಗಿ ಬ್ರಾಂಡ್ನ ವಸ್ತುಗಳು ಎಂದು ಪರಿಗಣಿತವಾಗುತ್ತವೆ. ಇದರ ಜತೆಗೆ ಗ್ರಾಹಕರಿಗೆ ಅಗತ್ಯವಾಗಿರುವ ವಸ್ತುಗಳೂ ಕೂಡ ಅಷ್ಟೇ ವೇಗವಾಗಿ ಮಾರಾಟವಾಗಿ ಹೋಗುತ್ತವೆ.
ಟಾಟಾ ಹಿಂದೆ ಬಿದ್ದಿಲ್ಲ
ಆಹಾರ ವಸ್ತುಗಳ ವಿಚಾರದಲ್ಲಿ ಫ್ಯೂಚರ್ ಗ್ರೂಪ್ ತನ್ನದೇ ಆದ ಬ್ರಾಂಡ್ಗಳನ್ನು ಹೊರತರಲು ಸಿದ್ಧತೆ ನಡೆಸಿದ್ದರೆ ಟಾಟಾ ಸಮೂಹದ ಇನ್ಫಿನಿಟಿ ರಿಟೇಲ್ ಕೂಡ ಮತ್ತೊಂದು ರೀತಿಯ ಸಾಹಸಕ್ಕೆ ಮುಂದಾಗಿದೆ. ಇಲೆಕ್ಟ್ರಾನಿಕ್ ಉಪಕರಣ ಮತ್ತು ಮೊಬೈಲ್ ಫೋನ್ ಮತ್ತಿತರ ವಸ್ತುಗಳ ಮಳಿಗೆ 'ಕ್ರೋಮಾ' ಅನ್ನು ಹೊಂದಿರುವ ಈ ಸಂಸ್ಥೆ ತನ್ನದೇ ಆದ ಬ್ರಾಂಡ್ಗಳನ್ನು ಹೊಂದಲು ಮುಂದಾಗಿದೆ.
ಪ್ರಸಕ್ತ ವರ್ಷ ಮೊಬೈಲ್ ಫೋನ್, ಟ್ಯಾಬ್ಲೆಟ್ಗಳನ್ನು ತನ್ನದೇ ಆದ ಬ್ರಾಂಡ್ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪ್ರಸಕ್ತ ಹಣಕಾಸಿನ ವರ್ಷದಲ್ಲಿ ಖಾಸಗಿ ಬ್ರಾಂಡ್ಗಳ ವಸ್ತುಗಳ ಮಾರಾಟದಿಂದ 200 ಕೋಟಿ ನಿರೀಕ್ಷೆ ಮಾಡುತ್ತಿದೆ ಇನ್ಫಿನಿಟಿ ರಿಟೇಲ್.
ಅದನೇ ಇರಲಿ. ಒಂದೇ ಬ್ರಾಂಡ್ನ ಮಳಿಗೆಯಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ವಸ್ತುಗಳು ಈಗಾಗಲೇ ಸಿಗುತ್ತಿವೆ. ಮುಂದಿನ ದಿನಗಳಲ್ಲಿ ಅದರಲ್ಲಿ ಮತ್ತಷ್ಟು ವೆರೈಟಿಗಳು ಸಿಗುತ್ತವೆ ಎನ್ನುವುದು ಇನ್ನೂ ಖಾತರಿಯಾದಂತಾಯಿತು.
ಖಾಸಗಿ ಲೇಬಲ್ ಎಂದರೇನು?
ಸ್ವತಂತ್ರ ಉತ್ಪಾದಕರಿಂದ ಉತ್ಪಾದಿಸಲ್ಪಟ್ಟ ವಸ್ತು (ಟಿ.ವಿ.. ಫ್ರಿಡ್ಜ್, ವಾಷಿಂಗ್ ಮೆಷೀನ್ ಇತ್ಯಾದಿ)ಗಳನ್ನು ಹೈಪರ್ ಮಾರುಕಟ್ಟೆಯ ಸಂಸ್ಥೆಗಳು ಖರೀದಿಸುತ್ತವೆ. ನಂತರ ಅವುಗಳು ತಮ್ಮ ಸಂಸ್ಥೆಯ ಹೆಸರು ಮತ್ತು ಲಾಂಛನದಲ್ಲಿ ಮಾರುತ್ತವೆ. ಅಂದ ಹಾಗೆ ಇಂಥ ಉತ್ಪನ್ನ ಸಿಗುವುದು ಕೇವಲ ಈ ಕಂಪನಿಗಳ ಮಳಿಗೆಗಳಲ್ಲಿ ಮಾತ್ರ.
ದೇಶದಲ್ಲಿರುವ ಖಾಸಗಿ ಲೇಬಲ್ ಉದ್ದಿಮೆ