

ದಕ್ಷಿಣ ಭಾರತದಲ್ಲಿ ಭಾಷೆಯ ಕಾರಣದಿಂದ ಟಾಟಾ ಸ್ಕೈಗೆ ಹಿನ್ನಡೆಯಾಗುತ್ತಿದೆ ಎಂಬ ಕೊರಗಿತ್ತು. ಆದರೆ ಈಗ 'ಟಾಟಾ ಸ್ಕೈ' ಸೇವೆ ಹೊಂದುತ್ತಿರುವ ಗ್ರಾಹಕರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ ಎಂದು ಖುಷಿಯಿಂದ ಹೇಳಿಕೊಂಡರು ಟಾಟಾ ಸ್ಕೈನ ಮುಖ್ಯ ವಾಣಿಜ್ಯ ಅಧಿಕಾರಿ ವಿಕ್ರಂ ಮೆಹ್ತಾ.
11 ಕನ್ನಡ, 22 ತಮಿಳು, 15 ತೆಲುಗು, 19 ಮಲೆಯಾಳಂ ಚಾನೆಲ್ಗಳನ್ನು ನಮ್ಮ ಗ್ರಾಹಕರಿಗೆ ನೀಡುತ್ತಿದ್ದೇವೆ. ಸರ್ಕಾರದ ಕಡ್ಡಾಯ ಡಿಜಿಟೈಜೇಶನ್ ನೀತಿ ಸಂಸ್ಥೆಗೆ ವರವಾಗಿ ಪರಿಣಮಿಸಿದೆ. ತಿಂಗಳಿಗೆ ಸರಾಸರಿ ಒಂದು ಲಕ್ಷ ಗ್ರಾಹಕರು ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ. ಏಪ್ರಿಲ್ 2013ರ ಅಂಕಿ-ಅಂಶಗಳ ಪ್ರಕಾರ, ಸದ್ಯ 'ಟಾಟಾ ಸ್ಕೈ' ಚಂದಾದಾರರ ಸಂಖ್ಯೆ 11.5 ದಶಲಕ್ಷ ದಾಟಿದೆ.
ಬಳಕೆದಾರರಿಗೆ ತೃಪ್ತಿ ನೀಡುವ ಸಲುವಾಗಿ ಪ್ರದೇಶವಾರು ಚಾನೆಲ್, ಡಿಐವೈ ವಿಡಿಯೋ, ಆಕ್ಟಿವ್ ಚಾನಲ್ ಸೇರ್ಪಡೆ ಮಾಡಲಾಗುತ್ತಿದೆ. ಅವುಗಳಲ್ಲಿ ಶಾಸ್ತ್ರೀಯ ನೃತ್ಯ, ಸಂಪ್ರದಾಯಿಕ ಆಹಾರ, ನೈಸರ್ಗಿಕ ಔಷಧಿ ಇತ್ಯಾದಿಗಳನ್ನು ಜನರಿಗೆ ಒದಗಿಸಲು ನೂತನ ಯೋಜನೆ ಕೈಗೊಳ್ಳಲಾಗಿದೆ ಎನ್ನುತ್ತಾರೆ ಅವರು.
ಮೆಹ್ತಾ ಹೇಳಿದ್ದು-
'ಟಿವಿ ಮೂಲಕ ಶಿಕ್ಷಣ'ಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದೆ. ಆಕ್ಟಿವ್ ಇಂಗ್ಲಿಷ್, ಆಕ್ಚಿವ್ ಫನ್ ಲರ್ನ್, ಆಕ್ಟಿವ್ ವೇದಿಕ್ ಮ್ಯಾತ್ಸ್ ಪೂರಕವಾಗಿವೆ. ಆಕ್ಟಿವ್ ಕುಕ್ಕಿಂಗ್ ಮತ್ತು ಡಿಐವೈ ಇತ್ಯಾದಿಗಳು ಗ್ರಾಹಕರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲೇ ಕೆಲಸ ನಿರ್ವಹಿಸುತ್ತಿವೆ. ಆಕ್ಟಿವ್ ಇಂಗ್ಲಿಷ್, ದಿ ಬ್ರಿಟಿಶ್ ಕೌನ್ಸಿಲ್ನೊಂದಿಗೆ ಒಪ್ಪಂದೊಂದಿಗೆ ಕೆಲಸ ನಿರ್ವಹಿಸಿದರೆ, ಆಕ್ಟಿವ್ ವೇದಿಕ್ ಮ್ಯಾತ್ಸ್, ವೇದಿಕ್ ಫೋರಮ್ ಆಫ್ ಇಂಡಿಯಾದ ಸಹಕಾರ ಹೊಂದಿದೆ. ಹೀಗೆ ಆಯಾ ಚಾನೆಲ್ಗಳು ನಿರ್ದಿಷ್ಟ ಸಂಸ್ಥೆಗಳ ಸಹಕಾರದಲ್ಲೇ ಬಿತ್ತರವಾಗುತ್ತಿವೆ.
ಮಹಿಳಾ ಪ್ರಾಧಾನ್ಯತೆಯ ಚಾನೆಲ್ಗಳೂ ಲಭ್ಯ. 'ಆಕ್ಟಿವ್ ಕುಕ್ಕಿಂಗ್' ಮಹಿಳೆಯರಿಗೆಂದೇ ವಿಶೇಷವಾಗಿ ಶುರು ಮಾಡಲಾಗಿದೆ. ಪ್ರತಿ ದಿನ 29 ಹೊಸ ತಿನಿಸು ಮಾಡುವುದನ್ನು ಕಲಿಯಬಹುದು. 'ಡು ಇಟ್ ಯುವರ್ ಸೆಲ್ಫ್' (ಡಿಐವೈ) ಮಹಿಳೆಯರಿಗೆ ಹೆಚ್ಚಿನ ಸಹಕಾರಿ ಆಗುತ್ತಿದೆ. ಚಂದಾದಾರರೇ ಆಯ್ಕೆ ಮಾಡಿರುವ 600 ಟ್ಯುಟೋರಿಯಲ್ ವಿಡಿಯೋಗಳು ಇದರಲ್ಲಿವೆ. ಯೋಗ, ಜುಂಬಾ, ನ್ಯಾಪ್ಕಿನ್ ಮಡಚುವ ಬಗೆ, ಅನಾರೋಗ್ಯಕ್ಕೆ ಚಿಕಿತ್ಸೆಯ ಮಾಹಿತಿ, ಸಮಸ್ಯೆಗಳಿಗೆ ಪರಿಹಾರ ಇತ್ಯಾದಿಗಳ ವಿಡಿಯೋ ತುಣುಕುಗಳು ಲಭ್ಯ.
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಗ್ರಾಹಕರು ನಮ್ಮ ವಿನೂತನ ಸೇವೆಗಳನ್ನು ಬಳಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ದಕ್ಷಿಣದ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದುವ ನಮ್ಮ ಪ್ರಯತ್ನ ಮುಂದುವರಿಯಲಿದೆ.
- ವಿಕ್ರಂ ಮೆಹ್ತಾ
- ಮಂಜುನಾಥ್ ಎಲ್.ಕೆ.