

ಇನ್ನು ಕೆನರಾ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟರೆ ಕೊಂಚ ಅನುಕೂಲ. ಏಕೆ ಗೊತ್ತೇ ಸರ್ಕಾರಿ ಸ್ವಾಮ್ಯದ ಈ ಬ್ಯಾಂಕು ನಿಗದಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.1 ಹೆಚ್ಚಳ ಮಾಡಿದೆ. ಆದರೆ, 180-269 ದಿನಗಳ ಒಳಗೆ ಮೆಚ್ಯುರಿಟಿ ಆಗುವ ಠೇವಣಿ ಮೇಲಿನ ಬಡ್ಡಿ ದರವನ್ನು ಸದ್ಯ ಇರುವ ಶೇ.8ರಿಂದ ಶೇ.7.5ಕ್ಕೆ ಇಳಿಸಿದೆ.
1-2 ವರ್ಷ ವರೆಗಿನ ಮತ್ತು 3-5 ವಷ ವರೆಗಿನ ನಿಗದಿತ ಠೇವಣಿಗಳ ಮೇಲಿನ ಬಡ್ಡಿದರ ಶೇ.0.55ರಷ್ಟು ಹೆಚ್ಚಿಸಿದೆ. 270 ದಿನದಿಂದ 1 ವರ್ಷದ ವರೆಗಿನ ಠೇವಣಿಗಳಿಗೆ ಈಗಿನದ್ದಕ್ಕಿಂತ ಶೇ.1ರಷ್ಟು ಹೆಚ್ಚು ಬಡ್ಡಿ ಸಿಗಲಿದೆ. 5-10 ವರ್ಷದೊಳಗಿನ ಠೇವಣಿಗೆ ಕೂಡ ಬಡ್ಡಿ ದರ ಹೆಚ್ಚಾಗಿದೆ. ಹಾಗಿದ್ದರೆ ಇನ್ನು ತಡ ಯಾಕೆ? ನಿಮ್ಮ ಮನೆ ಸಮೀಪದ ಕೆನರಾ ಬ್ಯಾಂಕ್‌ಗೆ ಹೋಗಿ ಠೇವಣಿ ಇಡಿ ಮತ್ತೆ.