

ಮಹಿಳಾ ಗ್ರಾಹಕರಿಗಾಗಿ ವಿಷ್ಟೆಲ್ 'ಎಆರ್ಎ ಥಿಂಗ್ 2' ಟ್ಯಾಬ್ಲೆಟ್ ಬಿಡುಗಡೆ ಮಾಡಿದೆ. ಫ್ಯಾಷನ್ ದ್ಯೋತಕವಾಗಿರುವ ನಸುಗೆಂಪು ಬಣ್ಣದಲ್ಲಿದ್ದು, ಸೀಮಿತ ಸಂಖ್ಯೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ಯಾಬ್ಲೆಟ್ನಲ್ಲಿ 120 ಟಿ.ವಿ ಚಾನೆಲ್ಗಳನ್ನೂ ಪಡೆಯಬಹುದು. ಏಳು ಇಂಚು ಗಾತ್ರದ, ಬಹುಸ್ಪರ್ಶದ ಪರದೆ ಮತ್ತು ಅಂಡ್ರಾಯ್ಡ್ 4.0 (ಐಸ್ಕ್ರೀಮ್ ಸ್ಯಾಂಡ್ವಿಚ್) ಹೃದಯ ಮತ್ತು 1 ಜಿಬಿ ರ್ಯಾಮ್, 1.5 ಗಿಗಾಹರ್ಟ್ಸ್ ಪ್ರೊಸೆಸರ್ ಹೊಂದಿದೆ. 4 ಜಿಬಿ ಆಂತರಿಕ ಮೆಮೊರಿಯನ್ನು ಗರಿಷ್ಠ 32 ಜಿಬಿವರೆಗೂ ವಿಸ್ತರಿಸಬಹುದು. ಕನ್ನಡ ಸೇರಿದಂತೆ 14 ಭಾಷೆಗಳನ್ನು ಬಳಸಬಹುದು. ವಿಶೇಷ ರಿಯಾಯಿತಿ ಬೆಲೆಯಲ್ಲಿ 5,499 ರು.ಗಳಿಗೆ ಲಭ್ಯ. ಮಾಹಿತಿಗೆ: 9833916643.