ಸೆಂಟ್ರಲ್ ಬ್ಯಾಂಕ್‌ಗೆ ರು. 1,015 ಕೋಟಿ ಲಾಭ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2012-13ನೇ ಸಾಲಿನ ಆರ್ಥಿಕ ವರ್ಷದಲ್ಲಿ ರು. 1,015 ಕೋಟಿ ನಿವ್ವಳ ಆದಾಯ ಗಳಿಸುವ ಜತೆಗೆ ಶೇ. 90.43 ಪ್ರಗತಿ ಕಂಡಿದೆ.
Updated on: 

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 2012-13ನೇ ಸಾಲಿನ ಆರ್ಥಿಕ ವರ್ಷದಲ್ಲಿ ರು. 1,015 ಕೋಟಿ ನಿವ್ವಳ ಆದಾಯ ಗಳಿಸುವ ಜತೆಗೆ ಶೇ. 90.43 ಪ್ರಗತಿ ಕಂಡಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಪ್ರಾದೇಶಿಕ ಕಚೇರಿಯ ಹಿರಿಯ ಪ್ರಾದೇಶಿಕ ವ್ಯವಸ್ಥಾಪಕ ಎನ್.ಕೆ.ಬಾಲಕೃಷ್ಣನ್ ಶುಕ್ರವಾರ ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಬ್ಯಾಂಕ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೋಹನ್ ವಿ.ಟಂಕಸಾಲೆ  ಮುಂಬೈನಲ್ಲಿರುವ ಪ್ರಧಾನ ಕಚೇರಿಯಲ್ಲಿ 2012-13ನೇ ಸಾಲಿನ ಕುರಿತು ನಡೆಸಿದ ಸುದ್ದಿಗೋಷ್ಠಿಯ ನೇರಪ್ರಸಾರವನ್ನು ಪ್ರಾದೇಶಿಕ ಕಚೇರಿಯಲ್ಲಿ ಬಿತ್ತರಿಸಿದ ಬಳಿಕ, ಬಾಲಕೃಷ್ಣನ್  ತಿಳಿಸಿದರು.
ಬ್ಯಾಂಕ್ 2012-13ನೇ ಸಾಲಿನಲ್ಲಿ ಒಟ್ಟಾರೆ ರು. 4,02,272 ಕೋಟಿ ವಹಿವಾಟು ನಡೆಸಿದ್ದು, ಇದು ಅದಕ್ಕೂ ಹಿಂದಿನ ಸಾಲಿಗಿಂತ ( 3,46,898) ಶೇ. 15.96 ಅಧಿಕವಾಗಿದೆ. ಜತೆಗೆ ಬ್ಯಾಂಕ್‌ನ ಒಟ್ಟಾರೆ ಠೇವಣಿ 2011-12ನೇ ಸಾಲಿನದ್ದಕ್ಕಿಂತ ಶೇ. 15.22ರಷ್ಟು ಹೆಚ್ಚಳವಾಗುವ ಮೂಲಕ ರು. 2,26,038 ಕೋಟಿ ಆಗಿದೆ. ಬ್ಯಾಂಕ್‌ನ ಮುಂಗಡದಲ್ಲೂ ಶೇ. 16.92ರಷ್ಟು ಬೆಳವಣಿಗೆ ಆಗಿದ್ದು, ಅದರ ಮೊತ್ತ ರು. 1,76,234 ಆಗಿದೆ.  ವಿದ್ಯುನ್ಮಾನ ವಹಿವಾಟು ಪ್ರಮಾಣ ಶೇ. 13.37 ರಿಂದ ಶೇ. 30ಕ್ಕೇರಿದೆ. ಅಲ್ಲದೆ ಇಂಟರ್ನೆಟ್ ಬ್ಯಾಂಕಿಂಗ್‌ನಲ್ಲೂ ಶೇ. 233ರಷ್ಟು ಪ್ರಗತಿಯಾಗಿದೆ ಎಂದು ಅವರು ತಿಳಿಸಿದರು.
ಉಪನ್ಯಾಸಕ ನೇಣಿಗೆ
ಹನೂರು: ತಾಲೂಕಿನ ಪುಣ್ಯಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಉಪನ್ಯಾಸಕರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜರುಗಿದೆ.  ಚಾಮರಾಜನಗರ ಜಿಲ್ಲೆಯ ಹೆಬ್ಬಸೂರು ಗ್ರಾಮದ ವಾಸಿ ದೀಪಕ್(32) ಎಂಬವರೆ ಸಾವಿಗೀಡಾದ ದುರ್ದೈವಿಯಾಗಿದ್ದಾರೆ.   ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಸಾವಿಗೀಡಾದ ದೀಪಕ್ ಬೆಂಗಳೂರಿನ ರಾಜಾಜಿನಗರ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದರು.  ಕಳೆದ ಮೇ 8ರಂದು ಮಹದೇಶ್ವರಬೆಟ್ಟಕ್ಕೆ ಆಗಮಿಸಿ ಲೋಕೋಪಯೋಗಿ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು. ಎರಡು ದಿನವಾದರೂ ಬಾಗಿಲು ತೆಗೆಯದ ಬಗ್ಗೆ ಸಿಬ್ಬಂದಿ ನಾಗರಾಜು ಪೊಲೀಸರಿಗೆ ದೂರು ನೀಡಿ ಬಾಗಿಲು ತೆಗೆಸಿದಾಗ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ಸಂಬಂಧ ಪಿಎಸ್‌ಐ ಬಾಲಕೃಷ್ಣರಾಜು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com