

ಜನಸಾಮಾನ್ಯ ವರ್ಗಗಳ ಬ್ಯಾಂಕ್ ಸಂಬಂಧ ಎಂದರೆ, ಸೇವಿಂಗ್ಸ್ ಬ್ಯಾಂಕ್ ಖಾತೆಯದ್ದೇ. ಅದು ಬ್ಯಾಂಕಿಂಗ್ ವ್ಯವಹಾರದ ಪ್ರಾಥಮಿಕ ಹಂತ. ಹಿಂದಿನ ಸಾಲ ಮೇಳಗಳಲ್ಲಿ ಸಾಲ ಪಡೆದವರೇ ಆಗಿರಲಿ, ಈಗಿನ ಹೋಲ್ಡಾರಿನಂತೆ ಸರ್ವರನ್ನು ಒಳಗೊಳ್ಳುವ ಬ್ಯಾಂಕಿಂಗ್ ವ್ಯವಸ್ಥೆಯೇ ಆಗಲಿ, ಮೂಲತಃ ನಡೆಯುವುದು ಸೇವಿಂಗ್ ಬ್ಯಾಂಕ್ ಖಾಯೆಯಿಂದಲೇ.
ಈ 'ಸಾಮಾನ್ಯ ಖಾತೆ' ಬ್ಯಾಂಕ್‌ಗಳ ಪಾಲಿಗೆ ಅಗ್ಗದ ಬಡ್ಡಿದರದ ಠೇವಣಿಯ ಮೂಲಕ ಬಂಡವಾಳವನ್ನು ಒದಗಿಸುವ ಅಕ್ಷಯ ಪಾತ್ರೆ. ಈಗಿನ ದಿನಗಳಲ್ಲಿ ಈ ಖಾತೆಗೆ ಸಾಕಷ್ಟು ಮರ್ಯಾದೆ ಲಭ್ಯ. ಸೇವಿಂಗ್ಸ್ ಬ್ಯಾಂಕ್ ಖಾತೆಗೆ ಈಗ ವಾರ್ಷಿಕ ಬಡ್ಡಿಯ ಶೇ.4ರಷ್ಟು ಮಾತ್ರ ಅಂದರೆ ಹಲವಾರು ಬ್ಯಾಂಕ್‌ಗಳು ಹೊಸದಾಗಿ ಜಾರಿಗೊಳಿಸಿರುವ ಆವಿಷ್ಕಾರಗಳಂತೆ ಶೇ.7ರಷ್ಟು ಬಡ್ಡಿ ಪಡೆಯುವುದೂ ಕೆಲವು ಷರತ್ತುಗಳೊಡನೆ ಸಾಧ್ಯ.
ಇತ್ತೀಚೆಗೆ ಪ್ರಕಟವಾಗಿರುವ, ಆದರೆ ಇನ್ನೂ ಜಾರಿಗೆ ಬಾರದೇ ಇರುವ 'ಇನ್‌ಫ್ಲೇಶನ್' ಮಧ್ಯಮ ವರ್ಗಕ್ಕೆ ಒಂದು ದೊಡ್ಡ ವರವಾಗಲಿದೆ. ಈ ಯೋಜನೆಯಲ್ಲಿ ಬಡ್ಡಿದರ ಇನ್‌ಫ್ಲೇಶನ್ ಸೂಚ್ಯಂಕ ತಾನೇ ತಾನಾಗಿ ಹೊಂದಿಕೊಳ್ಳುತ್ತದೆ. ಹಾಗೆಂದರೆ ಗ್ರಾಹಕರಿಗೆ ನಿಜವಾದ ಮೌಲ್ಯದ ಬಡ್ಡಿದರ ಲಭ್ಯ.
ಈ ಸಂಘಟನೆಗಳು ಡಿಸೆಂಬರ್ ವೇಳೆಗೆ ಲಭ್ಯವಾಗಬಹುದು. ನೆನಪಿನಲ್ಲಿರಲಿ, ಇನ್‌ಫ್ಲೇಶನ್ ದರ ಹೆಚ್ಚಾದಂತೆಯೇ, ಕಡಿಮೆಯಾಗುವುದೂ ಸಾಧ್ಯ. ಆದರೆ, ಸದ್ಯದಲ್ಲಿ ಅಂಥ ಪರಿಸ್ಥಿತಿ ಬರಲಿಕ್ಕಿಲ್ಲ. ಠೇವಣಿಯ ಮೌಲ್ಯದ ಸವಕಳಿಯನ್ನು ಕಡಿಮೆ ಮಾಡುವ ಕ್ರಮ ಇದು.
ಅರ್ಥವ್ಯವಸ್ಥೆಯ ಸ್ಥಿತಿ
ಈಗ ಭಾರತ ಮೂರು ಅಂತಾರಾಷ್ಟ್ರೀಯ ಮೌಲ್ಯ ಮಾಪನ ಸಂಸ್ಥೆಗಳ ಲೆಕ್ಕಾಚಾರದಂತೆ, ಸಾಲ ಪಡೆಯುವ - ಪಡೆದ ಸಾಲವನ್ನು ಬಡ್ಡಿ ಸಮೇತ ಹಿಂದಕ್ಕೆ ಕೊಡುವ- ಶಕ್ತಿಯ ಅಳತೆಗೋಲಿನಂತೆ ತೃಪ್ತಿಕರವಾದ ಸ್ಥಿತಿಯಲ್ಲೇನೂ ಇಲ್ಲ. ಈ ಮೌಲ್ಯಮಾಪನ ಸಂಸ್ಥೆಗಳೇನೂ ಆಕಾಶದಿಂದ ಇಳಿದುಬಂದಿಲ್ಲ. ಆದರೂ ಆ ಸಂಸ್ಥೆಗಳ ಲೆಕ್ಕಾಚಾರಕ್ಕೆ ಮನ್ನಣೆ ಇದೆ. ಭಾರತದ ಪರಿಸ್ಥಿತಿ ಸದ್ಯದಲ್ಲೇ ಸುಧಾರಿಸಲಿದೆ (ಕೆಟ್ಟ ಕಾಲ ಕೊನೆಗೊಂಡಿದೆ) ಎನ್ನುವ ಭರವಸೆಯನ್ನು ವಿತ್ತಮಂತ್ರಿ ಚಿದಂಬರಮ್ ಅವರೇ ನೀಡಿದ್ದಾರೆ.
ರಾಷ್ಟ್ರೀಯ ಪ್ರಗತಿಯ ವೇಗ, (ಒಟ್ಟು ಉತ್ಪಾದನೆ- ಸೇವಾ ಸೌಲಭ್ಯಗಳ ಮೌಲ್ಯದ- ಜಿಡಿಪಿ- ಏರಿಕೆ) ಶೇ. 4.8ರಿಂದ 5.2ಕ್ಕೆ ಹೆಚ್ಚುವ ವಿಶ್ವಾಸ ಪಂಡಿತರಲ್ಲಿ ಮೂಡಿದೆ. ಈಗಾಗಲೇ ಒಟ್ಟು ವರ್ಷದ ಬಜೆಟ್ ಕೊರತೆಯ ಶೇ.75ರಷ್ಟು ಹಣವನ್ನು ಪಡೆದಿದ್ದಾಗಿದೆ. ಚಾಲ್ತಿ ಲೆಕ್ಕದ ಕೊರತೆಯ ಪರಿಸ್ಥಿತಿಯೂ ಸುಧಾರಿಸಬಹುದು. ಆದರೆ, ಚಿನ್ನದ ಅಮಲಿನ ಲೆಕ್ಕದಲ್ಲಿ ಏರು ಷೇರನ್ನು ನಿರೀಕ್ಷಿಸುವುದು ಅನಿವಾರ್ಯ.
ಚಾಲ್ತಿ ಲೆಕ್ಕದ ಕೊರತೆ, ಆರ್ಥಿಕ ಬೆಳವಣಿಗೆಯ ವೇಗ, ವಿತ್ತೀಯ ಕೊರತೆಯ ಪ್ರಮುಖ ಮಾನದಂಡಗಳ ಅಳತೆಯಲ್ಲಿ ಭಾರತದ ಸಾಧನೆ ಮುಂದಿನ ದಿನಗಳಲ್ಲಿ ತೃಪ್ತಿಕರ ಎನ್ನುವ ಸ್ಥಿತಿಯನ್ನು ಮುಟ್ಟಬಹುದಂತೆ, ಅದು ಒಳ್ಳೆಯ ಸುದ್ದಿ.
ಕೊನೇ ಮಾತು
ಈಗ ಬ್ಯಾಂಕ್‌ಗಳ ಠೇವಣಿ ಹಾಗೂ ಸಾಲ ನೀಡಿಕೆಯ ನಡುವಣ ಸಂಬಂಧದಲ್ಲಿ ಸ್ವಲ್ಪ ಏರುಪೇರಾಗಿರುವುದು ನಿಜ. ಅದರಿಂದ ಬಡ್ಡಿದರಗಳ ಏರಿಕೆ ಅನಿವಾರ್ಯವಾದರೂ ಆಗಬಹುದು.
- ಸತ್ಯ