ಸ್ಟಾರ್ ಬಜಾರ್ ಉಳಿತಾಯದ ಖುಷಿ

ಟಾಟಾ ಸಮೂಹದ ಸ್ಟಾರ್ ಬಜಾರ್ ದೀಪಾವಳಿಗಾಗಿ ತನ್ನ ಗ್ರಾಹಕರಿಗೆ ಉಳಿತಾಯದ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ...
Updated on: 

ಟಾಟಾ ಸಮೂಹದ ಸ್ಟಾರ್ ಬಜಾರ್ ದೀಪಾವಳಿಗಾಗಿ ತನ್ನ ಗ್ರಾಹಕರಿಗೆ ಉಳಿತಾಯದ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಇವು ನವೆಂಬರ್ 6ರವರೆಗೆ ಚಾಲ್ತಿಯಲ್ಲಿರುತ್ತವೆ. ಸ್ಟಾರ್ ಡಿಲೈಟ್ ಗುಲಾಬ್ ಜಾಮೂನ್ ಮತ್ತು ಸ್ಟಾರ್ ಡಿಲೈಟ್ ರಸಗುಲ್ಲಗಳನ್ನೂ ಸ್ಟಾರ್ ಬಜಾರ್ ದೀಪಾವಳಿಗೆಂದೇ ಬಿಡುಗಡೆ ಮಾಡಿದೆ. ಮಾಹಿತಿಗೆ: 9819592389.

ಒಎಲ್‌ಎಕ್ಸ್ ಅಭಿಯಾನ

ಒಎಲ್‌ಎಕ್ಸ್ ಡಾಟ್ ಅನ್ ದೀಪಾವಳಿಗಾಗಿ 'ದಿವಾಲಿ ಕೀ ಸಫಾಯಿ' ಅಭಿಯಾನ ಹಮ್ಮಿಕೊಂಡಿದೆ. ಗ್ರಾಹಕರ ಮನೆಯನ್ನು ಸ್ವಚ್ಛಗೊಳಿಸುವುದರ ಜತೆಗೆ, ಅವರ ಮನೆಯಲ್ಲಿನ ಅನುಪಯುಕ್ತ ವಸ್ತುಗಳ ಮಾರಾಟಕ್ಕೂ ವೇದಿಕೆ ಕಲ್ಪಿಸುವುದು ಅಭಿಯಾನದ ಉದ್ದೇಶ. ಬೆಂಗಳೂರಿನಲ್ಲಿ ಇಂದು (ಅ.31) ಅಭಿಯಾನ ಕೊನೆಗೊಳ್ಳಲಿದೆ. ಮಾಹಿತಿಗೆ: 011-66031700 ಕರೆ ಮಾಡಬಹುದು ಅಥವಾ 58888ಗೆ ಎಸ್‌ಎಂಎಸ್ ಮಾಡಬಹುದು.

ಜಂಗ್ಲಿ ಡಾಟ್‌ಕಾಮ್ ರಿಯಾಯಿತಿ
ಖರೀದಿದಾರರ ಹುಡುಕುವ ಮತ್ತು ಹೋಲಿಕ ಮಾಡುವ ಸರ್ಚ್ ಎಂಜಿನ್ ಆಗಿರುವ ಜಂಗ್ಲಿಡಾಟ್‌ಕಾಮ್ ದೀಪಾವಳಿ ಸಂದರ್ಭದಲ್ಲಿ ಪ್ರತ್ಯೇಕ ವಿಭಾಗವನ್ನೇ ಆರಂಭಿಸಿದೆ. ರಿಯಾಯಿತಿ, ಕಡಿತ, ಖಚಿತ ಉಡುಗೊರೆ ಇತ್ಯಾದಿಗಳ ಬಗ್ಗೆ ಇಲ್ಲಿ ಮಾಹಿತಿ ಪಡೆಬಯಹುದು. ಫ್ಯಾಷನ್, ಆಭರಣ, ಕೈಗಡಿಯಾರ, ಮೊಬೈಲ್, ಸೌಂಬದರ್ಯವರ್ಧಕ, ವೈಯಕ್ತಿಕ ಆರೈಕೆ, ಪೀಠೋಪಕರಣ, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ 1300ಕ್ಕೂ ಅಧಿಕ ಉತ್ಪನ್ನಗಳು, ಮಾರಾಟಗಾರರ ಕುರಿತು ಇಲ್ಲಿ ಮಾಹಿತಿ ಲಭ್ಯವಿದೆ. ಸಂಪರ್ಕಿಸಿ: www.junglee.com

ಬಾಷ್ ಪವರ್ ಟೂಲ್
ಪ್ರೀತಿಪಾತ್ರರಿಗೆ ದೀಪಾವಳಿ ಉಡುಗೊರೆ ಏನು ಕೊಡುವುದು ಎಂದು ಯೋಚಿಸುತ್ತಿದ್ದೀರಾ? ನಿಮಗಾಗಿ ಬಾಷ್ ಕಂಪನಿ 'ಬಾಷ್ ಪವರ್ ಟೂಲ್ಸ್ ಡ್ರೆಮೆಲ್ ಎಂಗ್ರೇವರ್‌' ಎನ್ನುವ ಉಪಕರಣ ಬಿಡುಗಡೆ ಮಾಡಿದೆ. ಇದರ ನೆರವಿನಿಂದ ನೀವೇ ಮನೆಯಲ್ಲಿ ಪೀಠೋಪಕರಣ ಸಿದ್ಧಪಡಿಸಿಕೊಳ್ಳಬಹುದು. ಸಣ್ಣಪುಟ್ಟ ಆಭರಣಗಳನ್ನು ವಿನ್ಯಾಸಗೊಳಿಸಬಹುದು. ಮಣ್ಣು, ಹೂಕುಂಡ, ಮೇಣದ ದೀಪ, ಗಾಜಿನ ಹೂದಾನಿಗಳ ಮೇಲೆ ಕೆತ್ತನೆ ಮಾಡಬಹುದು. 600ಕ್ಕೂ ಅಧಿಕ ಬಗೆಯ ವಿನ್ಯಾಸಗಳನ್ನು ರೂಪಿಸಬಹುದು. ಆನ್‌ಲೈನ್ ಮೂಲಕವೂ ಖರೀದಿ ಮಾಡಬಹುದಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ರು.1976ಕ್ಕೆ ಲಭ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com