ಬೆಂಗಳೂರಿನಂಥ ನಗರಗಳಲ್ಲಿ ಮನೆ ಹುಡುಕುವುದು ಸುಲಭದ ಮಾತಲ್ಲ. ಅದಕ್ಕಾಗಿ ಬ್ರೋಕರ್ಗಳು ಇರುತ್ತಾರೆ. ಈಗೀಗ ಈ ವ್ಯವಹಾರ ಆನ್ಲೈನ್ನಲ್ಲೂ ನಡೆಯುತ್ತದೆ. ಅಂಥ ಪ್ರಯತ್ನ ನಡೆಸುತ್ತಿದೆ www.homeshikari.com. ಮೊತ್ತಮೊದಲ ಕಲ್ಪನೆಯಾದ 'ಪರೀಕ್ಷಿತ ಭೂ ಆಸ್ತಿಗಳು' ಎಂಬ ಸಿದ್ಧಾಂತದೊಂದಿಗೆ ಭಾವಿ ಗ್ರಾಹಕರಿಗೆ ಪ್ರತಿ ಆಸ್ತಿಯ ಬಗ್ಗೆ ನಿಖರವಾದ ಮಾಹಿತಿ ಪಡೆದುಕೊಂಡು ನಂತರ ಯಾವ ಆಸ್ತಿಗೆ ಭೇಟಿ ನೀಡಬೇಕೆಂದು ನಿರ್ಧರಿಸಬಹುದು. ವೆಬ್ಸೈಟ್ನ ಸಿಬ್ಬಂದಿ ಆಸ್ತಿಯ ಛಾಯಾಚಿತ್ರ ಮತ್ತು ವಿಡಿಯೋಗಳನ್ನು ಪಡೆದುಕೊಂಡು ಆಸ್ತಿಯ ಅಳತೆಯನ್ನು ತೆಗೆದುಕೊಂಡು ಅಪ್ಲೋಡ್ ಮಾಡುತ್ತಾರೆ.