ವಾಣಿಜ್ಯ

ನೋಕಿಯಾ ಎಕ್ಸ್ ಬಳಕೆಗೆ ಏರ್‌ಟೆಲ್ ಕೊಡುಗೆ

ನೋಕಿಯಾ ಎಕ್ಸ್ ಬಳಕೆಗೆ ಏರ್‌ಟೆಲ್ ಕೊಡುಗೆ
Published On :

ನೋಕಿಯಾ ಎಕ್ಸ್ ಗ್ರಾಹಕರು ಏರ್‌ಟೆಲ್‌ನ 3ಜಿ ಡೇಟಾ ಪ್ಲಾನ್ ಮೂಲಕ ಅತ್ಯುತ್ತಮ ಸೇವೆಗಳ ಅನುಭವ ಪಡೆದುಕೊಳ್ಳಬಹುದಾಗಿದೆ. ನೋಕಿಯಾ ಎಕ್ಸ್ ಖರೀದಿಸುವ ಏರ್‌ಟೆಲ್ ಗ್ರಾಹಕರಿಗೆ ಮೂರು ತಿಂಗಳುವರೆಗಿನ 500 ಎಂಬಿ ಉಚಿತ ಡೇಟಾ ಲಭ್ಯವಾಗಲಿದೆ. 3 ಜಿ ಸೇವೆ ಬಯಸದ ಗ್ರಾಹಕರು 2ಜಿ ಸೇವೆಗಳಲ್ಲಿಯೂ ಉಚಿತ ಡೇಟಾ ಪಡೆದುಕೊಳ್ಳಬಹುದು. ನೋಕಿಯಾ ಎಕ್ಸ್‌ನಲ್ಲಿ 500 ಎಂಬಿ ಡೇಟಾ ಬಳಕೆಯ ನಂತರ ಪ್ರತಿ 10 ಕೆಬಿ ಡೇಟಾಗೆ 3 ಪೈಸೆಯಂತೆ ಚಾರ್ಜ್ ಮಾಡಲಾಗುತ್ತದೆ. ನೋಕಿಯಾ ಎಕ್ಸ್ ಸ್ಮಾರ್ಟ್‌ಫೋನ್‌ಗೆ ಹಾಕಲಾದ ಮೊದಲ ಸಿಮ್‌ಕಾರ್ಡ್‌ಗೆ ಮಾತ್ರವೇ ಆಫರ್ ಅನ್ವಯವಾಗುತ್ತದೆ. ಜೂನ್ 30ರ ಒಳಗಾಗಿ ಖರೀದಿಸುವಂತಹ ನೋಕಿಯಾ ಎಕ್ಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಆಫರ್ ಪಡೆಯಬಹುದಾಗಿದೆ ಎಂದು ಏರ್‌ಟೆಲ್ ಸಂಸ್ಥೆಯ ಡೇಟಾ ಸರ್ವೀಸ್ ವಿಭಾಗದ ಸಿಇಒ ಕಾರ್ತಿಕ್ ಸೇಠ್ ತಿಳಿಸಿದ್ದಾರೆ.

ಮೊಟ್ಟೆ ಪ್ರಿಯರಿಗೆ ಎಗ್ಗೋಸ್ಟಿಕ್ ಪಿಜ್ಜಾ
ಪಿಜ್ಜಾ ಕಾರ್ನರ್ ಸ್ವಾಧಿಷ್ಟಕರ ಎಗ್ಗೋಸ್ಟಿಕ್ ಪಿಜ್ಜಾ ಜನತೆಗೆ ಪರಿಚಯಿಸಿದೆ. ರುಚಿಕರ ಚೀಸ್ ಹಾಳೆಗಳ ನಡುವೆ ಬೇಯಿಸಿದ ಮೊಟ್ಟೆಯ ಸ್ಲೈಸ್‌ಗಳನ್ನು ಹೊಂದಿದೆ. ಬೇಸಿಗೆಯಲ್ಲಿ ಎಗ್ಗೋಸ್ಟಿಕ್ ಪಿಜ್ಜಾ ಒಂದು ಪರಿಪೂರ್ಣ ಖಾದ್ಯವಾಗಲಿದೆ. ಬೇಸಿಗೆಯ ಬಿಸಿಲಿನ ಝಳ ಹಾಗೂ ಬೆವರಿನ ನಡುವೆ  ಶರೀರಕ್ಕೆ ಆಯಾಸ ಉಂಟಾಗುತ್ತದೆ. ಇಂತಹ ಮಾಸದಲ್ಲಿ ಹೆಚ್ಚು ಮೊಟ್ಟೆಗಳನ್ನು ಸೇವಿಸುವ ಮೂಲಕ ಆರೋಗ್ಯ ಉತ್ತಮಪಡಿಸಿಕೊಳ್ಳಬಹುದು. ಪಿಜ್ಜಾ ಕಾರ್ನರ್ ಎಗ್ಗೋಸ್ಟಿಕ್ ಪಿಜ್ಜಾ ರುಚಿಯ ಜತೆಗೆ ತಾಜಾತನ ಹಾಗೂ ಆರೋಗ್ಯವನ್ನು ಒದಗಿಸಲಿದೆ ಪಿಜ್ಜಾ ದರ 335 ರಿಂದ 385 ರಲ್ಲಿ ಲಭ್ಯವಿದ್ದು ಹೊಸ ಎಗ್ಗೋಸ್ಟಿಕ್ ಪಿಜ್ಜಾ ಜೊತೆಗೆ ಆಲೂಗಡ್ಡೆ ಪಾಪ್ಸ್,  ಚಿಕನ್ ಚೆಟ್ಟಿನಾಡ್‌ಗಳನ್ನು ನೀಡುತ್ತಿದ್ದು ಮೊಟ್ಟೆಪ್ರಿಯರಿಗೆ ಹಾಗೂ ಚಿಕನ್ ಪ್ರಿಯರಿಗೆ ಹೇಳಿಮಾಡಿಸಿದಂತಿದೆ. ಮಾಹಿತಿಗಾಗಿ - 8604251861.

ಯಿಪ್ಪೀ ಟ್ರೈ ಕಲರ್ ಪಾಸ್ತಾ ಬಿಡುಗಡೆ
ಐಟಿಸಿಯು ಭಾರತದ ಮೊಟ್ಟಮೊದಲ ಅತ್ಯಾಕರ್ಷಕ ಕೇಸರಿ, ಕ್ರೀಮ್ ಹಾಗೂ ಹಸಿರು ಬಣ್ಮಗಳಿಂದ ಕೂಡಿದ ಯಿಪ್ಪೀ ಟ್ರೈ ಕಲರ್ ಪಾಸ್ತಾ ಹೊರತಂದಿದೆ. ಗೋಧಿ ಹಾಗೂ ತರಕಾರಿಗಳಿಂದ ಮಾಡಲಾಗಿರುವ ಪಾಸ್ತಾದಲ್ಲಿ ಶೇ.100 ರಷ್ಟು ನೈಸರ್ಗಿಕ ಬಣ್ಣಗಳ ಬಳಕೆ ಮಾಡಲಾಗಿದೆ ಈ ಮೂಲಕ ಸ್ನ್ಯಾಕ್ಸ್ ಪ್ರಿಯರ ಮತ್ತಷ್ಟು ಸಂಭ್ರಮಕ್ಕೆ ಕಾರಣವಾಗಿದೆ. ಟ್ರೈ ಕಲರ್ ಪಾಸ್ತಾದ 70 ಗ್ರಾಂ ಪ್ಯಾಕ್‌ಗೆ 20ರ ದರದಲ್ಲಿ ಮಾರುಕಟ್ಟೆಯಲ್ಲಿ ಎಲ್ಲಾ ರೀಟೇಲ್ ಮಳಿಗೆಗಳಲ್ಲಿ ಲಭ್ಯವಾಗಲಿದೆ. ಜೊತೆಗೆ 'ಸನ್‌ಫೀಸ್ಟ್ ಯಿಪ್ಪೀ ಕ್ರೀಮ್ ಕಾರ್ನ್ ಟ್ರೈಕಲರ್ ಪಾಸ್ತಾ' ಹಾಗ 'ಸನ್‌ಫೀಸ್ಟ್ ಇಪ್ಪೀ ಮಸಾಲಾ ಟ್ರೈಕಲರ್ ಪಾಸ್ತಾ' ಎರಡು ಸ್ವಾದಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಫೋರಂ ಮಾಲ್‌ನಲ್ಲಿ ಎಡ್ ಹಾರ್ಡಿಯ ಮೊದಲ ಮಳಿಗೆ
ಎಡ್ ಹಾರ್ಡಿಯ ಮೊದಲ ಮಳಿಗೆ ಕೋರಮಂಗಲದ ಫೋರಂ ಮಾಲ್‌ನಲ್ಲಿ ಏ.10ರಂದು ಪ್ರಾರಂಭವಾಗಿದೆ. ಅರ್ವಿಂದ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಲಿ. ಸಂಸ್ಥೆ ಮಾಲ್‌ನ್ನು ಆರಂಭಿಸಿದ್ದು ವಿಸ್ತಾರವಾದ ಸಮಕಾಲೀನ ವಿನ್ಯಾಸವುಳ್ಳ  ಟಿ. ಷರ್ಟ್‌ಗಳು, ಜೀನ್ಸ್, ಟ್ರೌಸರ್ಸ್ ಗಳು ಪುರುಷರ ಸಿದ್ಧಉಡುಪುಗಳು ಹಾಗೂ ಮಹಿಳೆಯರಿಗಾಗಿ ರೋಚಕ ಉಡುಗೆಗಳ ಶ್ರೇಣಿಯನ್ನು ಎಡ್ ಹಾರ್ಡಿ ಮಾರಾಟ ಮಾಡುತ್ತಿದೆ. ಖರೀದಿ ಹಾಗೂ ಮನೋರಂಜನೆ ಹಾಗೂ ಕುಂಟುಂಬ ಮನೋರಂಜನಾ ಕೇಂದ್ರಗಳನ್ನು ಫೋರಂ ಮಾಲ್ ಹೊಂದಿದ್ದು ಸಿದ್ಧ ಉಡುಪುಗಳು ಅತ್ಯಂತ ಸ್ಟೈಲಿಶ್ ಆಗಿದ್ದು ಎಡ್ ಹಾರ್ಡಿ ಇತ್ತೀಚಿನ ಆಧುನಿಕ ಶೈಲಿಯ ಉಡುಗೆಗಳು ಲಭ್ಯವಿದೆ, ಉಡುಗೆಗಳು ಆಕರ್ಷಕ ವಿನ್ಯಾಸ ಪ್ರಕಾಶಮಾನ ವರ್ಣಗಳಲ್ಲಿ ಲಭ್ಯವಿದೆ.

ವರ್ಷದ ಪ್ರಾಡಕ್ಟ್ ನಾಕ್ ಔಟ್
ಎಸ್‌ಎಬಿ ಮಿಲ್ಲರ್ ಇಂಡಿಯಾ ಲಿ. ಲೀಡಿಂಗ್ ಬಿಯರ್ ಬ್ರಾಂಡ್ ನಾಕ್ ಔಟ್ ವರ್ಷದ ಪ್ರಾಡಕ್ಟ್ ಆಗಿ ಹೊರ ಹೊಮ್ಮಿದೆ. ಪೆಟ್ ಬಾಟಲ್ ಜೊತೆಗೆ ಸ್ಟ್ರಾಂಗ್ ಬಿಯರ್ ಹೊಂದಿರುವ ನಾಕ್ ಔಟ್ ಉತ್ತಮ ಮದ್ಯ ಮತ್ತು ಬಿಯರ್ ವರ್ಗದಲ್ಲಿ ಪ್ರಶಸ್ತಿ ಪಡೆದಿದೆ.  ಬ್ರಾಂಡ್ ಇನ್ನೂ ಅನನ್ಯ ಉತ್ಪನ್ನಗಳನ್ನು ಹೊರತರುತ್ತಿದ್ದು ಇದುವರೆಗೆ ಯಾವ ಬಿಯರ್ ಬಾಟಲ್‌ಗಳು ಪೆಟ್ ಬಾಟಲ್‌ಗಳನ್ನು ಹೊಂದಿಲ್ಲ. ನಾಕ್ ಔಟ್ ಮಾತ್ರ ಈ ಬಗೆಯ ಬಾಟಲ್‌ಗಳನ್ನು ಹೊರತರುತ್ತಿದೆ ಎಂದು ಎಸ್‌ಎಬಿ ಮಿಲ್ಲರ್ ಇಂಡಿಯಾ, ಕೋರ್ ಬ್ರಾಂಡ್ಸ್, ಮಾರ್ಕೆಟಿಂಗ್ ಉಪಾಧ್ಯಕ್ಷ ದೀಪಕ್ ನಾಥ್ ತಿಳಿಸಿದ್ದಾರೆ. ಸಾಮಾನ್ಯವಾಗಿ ಬಿಯರ್ ಬಾಟಲ್‌ಗಳೆಂದರೆ ಗಾಜಿನ ಬಾಟಲಿ, ಕ್ಯಾನ್‌ಗಳಲ್ಲಿ ಬರುತ್ತದೆ ಆದರೆ ಇದು ಪೆಟ್ ಬಾಟಲ್ ಹೊಂದಿರುವುದರಿಂದ ಅನುಕೂಲವಿದೆ. ಸುಲಭವಾಗಿ ಸಾಗಿಸಬಹುದು, ಕೆಳಗೆ ಬಿದ್ದರೆ ಒಡೆಯುವುದಿಲ್ಲ, ಶಬ್ದ ಮಾಡುವುದಿಲ್ಲ, ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂದು ತಿಳಿಸಿದರು.

ಜಿಇಎ ಫ್ಲೋ ಕಾಂಪೊನೆಂಟ್ಸ್ ಉತ್ಪಾದನಾ ಘಟಕ ಆರಂಭ
ಜಿಇಎ ಫ್ಲೋ ಕಾಂಪೊನೆಂಟ್ಸ್ ಉತ್ಪಾದನಾ ಘಟಕ, ನಗರದಲ್ಲಿ ಏ.3ರಂದು ಪ್ರಾರಂಭಿಸಿದೆ. ಡ್ಯೂಸೆಲ್‌ಡಾರ್ಫ್‌ನಲ್ಲಿ ಮುಖ್ಯ ಕಚೇರಿ ಹೊಂದಿರುವ ಜಿಇಎ ಗ್ರೂಪ್‌ನ ಮೆಕಾನಿಕಲ್ ಎಕ್ವಿಪ್‌ಮೆಂಟ್ ವಲಯದ ಭಾಗವಾಗಿದ್ದು ಜಾಗತಿಕವಾಗಿ ಹೈಜೆನಿಕ್ ವಾಲ್ವ್ಸ್ ಅಂಡ್ ಪಂಪ್ಸ್ ಎಂದು ಸ್ವಚ್ಛತೆಯ ತಂತ್ರಜ್ಞಾನ ಮತ್ತು ಅಸೆಪ್ಟಿಕ್ ವಾಲ್ವ್ಸ್‌ಗೆ ಹೆಸರು ಪಡೆದಿದೆ. ಜಿಎಇ ಕಾಂಪೊನೆಂಟ್ಸ್ ಇಂಡಿಯಾ ಸ್ಥಳೀಯವಾಗಿ ಉತ್ಪಾದಿಸಿದ ಟಿ. ಸ್ಮಾರ್ಟ್ ಬಟರ್‌ಫ್ಲೈ ವಾಲ್ವ್‌ಗಳ ಬೇಡಿಕೆ ಪೂರೈಸಲಿದೆ. ಬೆಂಗಳೂರು ಘಟಕ 25 ಸಾವಿರ ಅಡಿ ವಿಸ್ತೀರ್ಣ ಅತ್ಯಾಧುನಿಕ ಉತ್ಪಾದನಾ ಘಟಕವಾಗಿದ್ದು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿದೆ. ಡೈರಿ, ಬೆವರೇಜ್, ಮತ್ತು ವೈಯಕ್ತಿಕ ಆರೈಕೆಯ ಉದ್ಯಮಗಳ ಅಗತ್ಯ ಪೂರೈಸಲಿದೆ. ಎಂದು ಜಿಇಎ ಫ್ಲೋ ಕಾಂಪೊನೆಂಟ್ಸ್ ಬ್ಯುಸಿನೆಸ್ ಯುನಿಟ್ ಸಿಇಒ ಫ್ರಾಂಜ್ ಬ್ಯೂರ್‌ಮನ್ ತಿಳಿಸಿದ್ದಾರೆ.

ಸ್ವಾನ್ ಟ್ರೆಂಡಿಯಿಂದ ಆಕರ್ಷಕ ಉಡುಗೆಗಳ ಪರಿಚಯ
ವಿಶ್ವ ಮಟ್ಟದ ಪ್ರೀಮಿಯಂ ಲೈಫ್‌ಸ್ಟೈಲ್ ಬ್ರ್ಯಾಂಡ್ ಅಮೆರಿಕನ್ ಸ್ವಾನ್ ಟ್ರೆಂಡಿ ಹಾಗೂ ಆಕರ್ಷಕ ಉಡುಗೆಗಳನ್ನು ಪರಿಚಯಿಸುತ್ತಿದೆ. ಸ್ಪ್ರಿಂಗ್ 14 ಕಲೆಕ್ಷನ್ಸ್ ಎಂಬ ಶೀರ್ಷಿಕೆಯಡಿ ಪರಿಚಯಿಸುತ್ತಿರುವ ನೂತನ ಶ್ರೇಣಿಯ ಸಿದ್ಧ ಉಡುಪುಗಳು ಹೊಸ ಚಿಕ್ ಮಾದರಿಯ ಹಾಗೂ ಆಕರ್ಷಕ ವಿನ್ಯಾಸ ಆರಾಮದಾಯಕ ಹಾಗೂ ವೈವಿಧ್ಯಮಯ ಬಣ್ಣಗಳಲ್ಲಿ ಲಭ್ಯವಿದೆ. ಅಮೆರಿಕನ್ ಸ್ವಾನ್ ಫ್ಯಾಷನ್ ಬ್ರ್ಯಾಂಡ್, ಗ್ರಾಹಕರಿಗೆ  ಸಮಕಾಲೀನ ವಿನ್ಯಾಸದ, ಅತ್ಯುತ್ತಮ ಗುಣಮಟ್ಟದ ಸಿದ್ಧಉಡುಪುಗಳು, ಪರಿಕರಗಳು ಹಾಗೂ ಪಾದರಕ್ಷೆಗಳನ್ನು ಸಾದರಪಡಿಸುತ್ತಿದೆ. ಹಾರ್ಬರ್ ಸಿಟಿ, ಐವಿ ಲೀಗ್, ಹಾಗೂ ವರೆಸಾಟ್‌ಂ ಕಲೆಕ್ಷನ್ ಎಂಬ ಮೂರು ಶ್ರೇಣಿಯ ಉಡುಪುಗಳನ್ನು ಪರಿಚಯಿಸುತ್ತಿದೆ. ಅರ್ತ್ ರೆಸಾರ್ಟ್ ಬಣ್ಣಗಳು, ಟ್ರೆಂಡ್ ಜಂಗಲ್, ಹಾಗೂ ಫ್ಲೋರಲ್ ಪ್ರಿಂಟ್‌ಗಳಿಂದ ಕೂಡಿದ ಅಮೆರಿಕನ್ ಸ್ವಾನ್ ರೆಸಾರ್ಟ್ ಸಂಗ್ರಹ ಆಧುನಿಕ ಸಾಮಾನ್ಯ ಸಿದ್ಧ ಉಡುಗೆಗಳ ಸಂಗ್ರಹದ ಜೊತೆಗೆ ಲೆನಿನ್ ಶ್ರೇಣಿಯಲ್ಲಿ ಕಾಟನ್, ಸಿಗ್ನೇಚರ್ ಟೋನಲ್ ವಾಷ್‌ನೊಂದಿಗೆ ಜರ್ಸಿಗಳು ಸೇರಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.