

ಟೈಟಾನ್ ಐಪ್ಲಸ್ 'ಗ್ಲೇರಸ್ ಬೈ ಟೈಟಾನ್' ಎಂಬ ಹೊಸ ವಿನ್ಯಾಸವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಸನ್‌ಗ್ಲಾಸ್‌ಗಳು ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಹಗುರವಾಗಿವೆ. ಮಹಿಳೆ ಮತ್ತು ಪುರುಷರಿಬ್ಬರಿಗೂ ವಿವಿಧ ಹೊಸ ಮಾದರಿಗಳು ಲಭ್ಯವಿದ್ದು, ದರ 1550- 2995 ಆಗಿರಲಿದೆ. ಎಲ್ಲ ಟೈಟಾನ್ ಐಪ್ಲಸ್ ಮಳಿಗೆಗಳಲ್ಲಿ ಲಭ್ಯ.
ಬಾರ್ಡರಲ್ಲಿ ಕೋಟಿ ವಹಿವಾಟು
ಗಡಿ ನಿಯಂತ್ರಣ ರೇಖೆ ಗುಂಟ ರು. 1 ಕೋಟಿ ವಹಿವಾಟು ನಡೆದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಜಮ್ಮು-ಕಾಶ್ಮೀರದ ಚಕನ್- ದ- ಭಾಗ್ ಮೂಲಕ ಈ ವಹಿವಾಟು ನಡೆದಿದೆ. ಬಾಳೆಹಣ್ಣು ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಒಳಗೊಂಡ 25 ಟ್ರಕ್‌ಗಳು ಗಡಿ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಇತ್ತೀಚೆಗೆ ತೆರಳಿದ್ದವು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕಡೆಯಿಂದ ಒಣ ಖರ್ಜೂರ, ಗಿಡಮೂಲಿಕೆಗಳನ್ನು ಒಳಗೊಂಡ ಸುಮಾರು ರು. 67,51,036 ಮೌಲ್ಯದ ವಸ್ತುಗಳು ಕಾಶ್ಮೀರಕ್ಕೆ ಆಗಮಿಸಿವೆ.
ಕೇರಳ ವಲಯಕ್ಕೆ ರು. 400 ಕೋಟಿ ಲಾಭ?
ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ನ ಕೇರಳ ವಲಯ 2013-14ನೇ ಸಾಲಿನಲ್ಲಿ ರು. 400 ಕೋಟಿಯಷ್ಟು ಲಾಭವಾಗುವ ಸಾಧ್ಯತೆ ಇದೆ. 2012-13ನೇ ಸಾಲಿನಲ್ಲಿ ಈ ವಲಯ ರು. 280 ಕೋಟಿ ಲಾಭ ಗಳಿಸಿತ್ತು. ಕಳೆದ ಹಣಕಾಸು ವರ್ಷದ ಲಾಭ ಅದನ್ನು ಮೀರಿಸುವ ಸಾಧ್ಯತೆ ಇದೆ. ಕೇರಳದ ದೂರಸಂಪರ್ಕ ಮಾರುಕಟ್ಟೆಯಲ್ಲಿ ಬಿಎಸ್‌ಎನ್‌ಎಲ್ ಶೇ.32.32 ಮೊಬೈಲ್ ಕ್ಷೇತ್ರದಲ್ಲಿ ಮತ್ತು ಸ್ಥಿರ ದೂರವಾಣಿ ಕ್ಷೇತ್ರದಲ್ಲಿ ಶೇ.96.11ರಷ್ಟು ಮಾರುಕಟ್ಟೆಯನ್ನು ಹೊಂದಿದೆ.
ಡಿಸೆಂಬರ್‌ನಲ್ಲಿ ವಿಡಿಯೋಕಾನ್ 4ಜಿ
ಈ ವರ್ಷದ ಅಂತ್ಯಕ್ಕೆ ವಿಡಿಯೋಕಾನ್ ಟೆಲಿಕಮ್ಯುನಿಕೇಷನ್ಸ್ 4ಜಿ ತಂತ್ರಜ್ಞಾನ ಸೇವೆಯನ್ನು ಗ್ರಾಹಕರಿಗೆ ಒದಗಿಸುವ ಗುರಿ ಹಾಕಿಕೊಂಡಿದೆ. ಅದಕ್ಕಾಗಿ ಕಂಪನಿ ಎಫ್‌ಡಿಡಿ- ಎಲ್‌ಟಿಇ ತಂತ್ರಜ್ಞಾನವನ್ನು ಬಳಸಿಕೊಳ್ಳಲಿದೆ. ಆರಂಭದಲ್ಲಿ ಗುಜರಾತ್, ಹರ್ಯಾಣ ಮತ್ತು ಮಧ್ಯಪ್ರದೇಶಗಳಲ್ಲಿ ವಿಡಿಯೋಕಾನ್‌ನ ಹೊಸ ಸೇವೆ ಲಭ್ಯವಾಗಲಿದೆ. ಸುಸಜ್ಜಿತ 4ಜಿ ಸೇವೆಗಳ ಜತೆ ಐಪಿಟಿವಿ ಸೇವೆ ನೀಡಲೂ ಕಂಪನಿ ಮುಂದಾಗಿದೆ. ಇದರ ಜತೆಗೆ ಸ್ಪೆಕ್ಟ್ರಂ ಟ್ರೇಡಿಂಗ್ ಮತ್ತು ಸೇವೆಗಳನ್ನು ಹೊಂದಲೂ ಅದು ಮುಂದಾಗಿದೆ.
ಚೆನ್ನೈನಲ್ಲಿ ಇರಲಿದೆ ನೋಕಿಯಾ ಸ್ಥಾವರ
ನೋಕಿಯಾ ಮೊಬೈಲ್ ಕಂಪನಿಯನ್ನು ಮೈಕ್ರೋಸಾಫ್ಟ್ ಕೊಂಡುಕೊಂಡು ಅದರ ಹೆಸರೂ ಮೈಕ್ರೋಸಾಫ್ಟ್ ಮೊಬೈಲ್ ಆಗುತ್ತದೆ ಎನ್ನುವುದು ಈಗ ಹಳೇ ವಿಚಾರ. ಹೊಸ ವಿಚಾರ ಏನೆಂದರೆ ಚೆನ್ನೈನಲ್ಲಿರುವ ಹಾಲಿ ನೋಕಿಯಾ ಮೊಬೈಲ್ ಘಟಕ ಮಾತ್ರ ಈ ಒಪ್ಪಂದದಿಂದ ಹೊರತಾಗಲಿದೆ. ಅದಕ್ಕೂ ಒಂದು ಕಾರಣವಿದೆ. ತೆರಿಗೆ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯಗಳು ಬಗೆಹರಿಯಲು ಬಾಕಿ ಉಳಿದಿವೆ. ಹೀಗಾಗಿ ಚೆನ್ನೈ ಘಟಕವನ್ನು ಒಪ್ಪಂದದಿಂದ ಹೊರಗಿಡಲಾಗಿದೆ.
ಇಂಟರ್‌ನೆಟ್ ವೇಗ ಕಮ್ಮಿ
ಏಷ್ಯಾ ಫೆಸಿಫಿಕ್ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿನ ಇಂಟರ್‌ನೆಟ್ ವೇಗ ಕಡಿಮೆ. ಹೀಗೆಂದು ಅಮೆರಿಕದ ಸಂಸ್ಥೆ 'ಅಕಾಮಿ' ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆಯಂತೆ. ದಕ್ಷಿಣ ಕೊಗರಿಯಾ ಮಾತ್ರ ಸಾಮಾನ್ಯ ವೇಗ (20ಎಂಬಿಪಿಎಸ್) ನೀಡುವ ರಾಷ್ಟ್ರವಾಗಿದೆ. ನಮ್ಮ ದೇಶದಲ್ಲಿ ಇಂಟರ್‌ನೆಟ್‌ನ ಸಾಮಾನ್ಯ ವೇಗ ಕನಿಷ್ಠ ಎಂದರೆ 1.5 ಎಂಬಿಪಿಎಸ್ ಆಗಿದೆಯಂತೆ.
ಸೊಳ್ಳೆ ತಡೆಯುವ ಎಲ್‌ಜಿ ಇನ್ವರ್ಟರ್ ವಿ ಎಸಿ
ಈ ಬಾರಿಯ ವಿಶ್ವ ಮಲೇರಿಯಾ ದಿನ(ಏ.25)ಕ್ಕೆ ಎಲ್‌ಜಿ ಕಂಪನಿಯು ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದೆ. ಎಲ್‌ಜಿ ಇನ್ವರ್ಟರ್ ವಿ ಎಸಿ(ಏರ್ ಕಂಡೀಷನರ್)ಯನ್ನು ವಿಶೇಷ ವಿನ್ಯಾಸದೊಂದಿಗೆ ಬಿಡುಗಡೆ ಮಾಡಿದ್ದು, ಇದು ಸೊಳ್ಳೆಗಳು ನಿಮ್ಮ ಕೋಣೆಯೊಳಗೆ ಬಾರದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಆಲ್ಟ್ರಾಸೋನಿಕ್ ಅಲೆಗಳನ್ನು ಹಾಯಿಸುವುದರಿಂದ ಇವು ಮನುಷ್ಯನಿಗೆ ತೊಂದರೆಯಾಗುವಂಥ ಯಾವುದೇ ರಾಸಾಯನಿಕ ಅಥವಾ ಇನ್ನಿತರೆ ಅಪಾಯಕಾರಿ ಅನಿಲಗಳನ್ನು ಬಿಡುಗಡೆ ಮಾಡುವುದಿಲ್ಲ. ಅಷ್ಟೇ ಅಲ್ಲ, ನೀವು ಏರ್ ಕೂಲರ್‌ನ್ನು 'ಆಫ್' ಮೋಡ್‌ನಲ್ಲಿಟ್ಟಾಗಲೂ ಸೊಳ್ಳೆಗಳನ್ನು ತಡೆಯುವಂತೆ ಇದನ್ನು ಬಳಸಬಹುದು. ಇನ್ವರ್ಟರ್ ವಿ ಎಸಿಯು ನಿಮ್ಮ ಕೋಣೆಯ ಧೂಳಿನ ಕಣಗಳನ್ನು ಹೀರಿಕೊಂಡು ಗಾಳಿಯನ್ನು ಶುದ್ಧೀಕರಿಸಿ ಬಿಡುವುದರಿಂದ ಅಲೆರ್ಜಿಕ್ ತೊಂದರೆಗಳಿಂದಲೂ ದೂರ ಉಳಿಯಬಹುದು. ಮಳೆಗಾಲ ಮತ್ತು ಚಳಿಗಾಲದಲ್ಲಿ ಕೋಣೆಯನ್ನು ಬೆಚ್ಚಗಿರಿಸಲೂ ಇನ್ವರ್ಟರ್ ವಿ ಎಸಿ ಸಹಾಯಕವಾಗಿದೆ. ಹೀಗಾಗಿ ಈ ಎಸಿಯು ವರ್ಷಪೂರ್ತಿ ನಿಮಗೆ ಉಪಯೋಗಕ್ಕೆ ಬರಲಿದೆ.
ಲಿಬರ್ಟಿಯ ಹೊಸ ಕ್ರೀಡಾ ಶ್ರೇಣಿ ಫೋರ್ಸ್ 10
ಭಾರತದ ಎರಡನೇ ಅತಿ ದೊಡ್ಡ ಶೂ ತಯಾರಕರಾದ ಲಿಬರ್ಟಿ ಕಂಪನಿಯು ಮಹಿಳೆ ಮತ್ತು ಪುರುಷರಿಬ್ಬರಿಗೂ ಸೇರಿ 'ಫೋರ್ಸ್ 10' ಸ್ಪೋರ್ಟ್ಸ್ ಶೂಗಳನ್ನು ಬಿಡುಗಡೆ ಮಾಡಿದೆ. ಈ ಶ್ರೇಣಿಯು 1299ರಿಂದ ಆರಂಭವಾಗುತ್ತದೆ. ಆಯ್ದ ಕಿಬರ್ಟಿ ರೆವಲ್ಯೂಶನ್ಸ್ ಮತ್ತಿ ಲಿಬರ್ಟಿ ಎಕ್ಸ್ಲೂಸಿವ್ ಮಳಿಗೆಗಳಲ್ಲಿ ಲಭ್ಯವಿದೆ. ಟ್ಝಛಿಜ್ಠಡಿಣಝ್ಟಜಡ್ಟಟ್ಟಿಟಿಟ್ಝಟಿಜ.್ಛ್ಟಟ ನಲ್ಲಿಯೂ ಕೊಳ್ಳಬಹುದು.
ಹಿಮಾಲಯದಿಂದ ಹೊಸ ಸಾಬೂನು
ಹಿಮಾಲಯದಿಂದ ವಿವಿಧ ನಮೂನೆಯ ಸಾಬೂನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆಲ್ಮಂಡ್ ಮತ್ತು ರೋಸ್, ಹನಿ ಮತ್ತು ಕ್ರೀಂ, ನೀಂ ಮತ್ತು ಹಳದಿ, ಸೌತೆಕಾಯಿ ಮತ್ತು ತೆಂಗಿನಕಾಯಿ ಲೇಪಿತ ಸಾಬೂನುಗಳು ಇವಾಗಿವೆ. 125 ಗ್ರಾಂನ ಪ್ಯಾಕ್‌ಗೆ 40 ಮತ್ತು 75 ಗ್ರಾಂನ ಪ್ಯಾಕ್‌ಗೆ 30 ದರವಿದ್ದು, ಎಲ್ಲ ಪ್ರಮುಖ ಮಳಿಗೆಗಳಲ್ಲಿ ಈ ಉತ್ಪನ್ನ ಲಭ್ಯವಿದೆ.
ಕೆಲವೇ ಕ್ಲಿಕ್ಕುಗಳಲ್ಲಿ ಜೀವ ವಿಮೆ ಮಾಡಿಸಬಹುದು!
ಅಂತರ್ಜಾಲದಲ್ಲೇ ವೇಗವಾಗಿ ಜೀವ ವಿಮೆ ಮಾಡಿಸಿಕೊಳ್ಳಬಹುದು. ಅಂತರ್ಜಾಲ ಬಳಕೆ ಎಲ್ಲಾ ಕ್ಷೇತ್ರಗಳಲ್ಲೂ ವಿಸ್ತರಿಸಿದಂತೆ ವಿಮಾ ಕ್ಷೇತ್ರಕ್ಕೂ ಕಾಲಿರಿಸಿದೆ. ಸ್ಮಾರ್ಟ್ ಫೋನ್, ಟಾಬ್ಲೆಟ್ ಜನಸಾನ್ಯರ ಕೈಗಳಲ್ಲಿ ಹರಿದಾಡುತ್ತಿರುವುದರಿಂದ ಅತ್ಯಂತ ಸುಲಭವಾಗಿ ವಿಮೆ ನೋಂದಾವಣೆ ಮಾಡಿಕೊಳ್ಳಬಹುದು. ದತ್ತಿ ಯೋಜನೆ, ಹೂಡಿಕೆ ಯೋಜನೆ, ನಿವೃತ್ತಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಅಂತರ್ಜಾಲದಲ್ಲೇ ಲಭ್ಯ. ತಿಂಗಳಲ್ಲೇ 13 ದಶಲಕ್ಷದಷ್ಟು ಜನರು ವಿಮೆ ಬಗ್ಗೆ ಅಂತರ್ಜಾಲದಲ್ಲಿ ತಡಕಾಡಿದ್ದಾರೆ ಎನ್ನುತ್ತದೆ ಐಆರ್‌ಡಿಎ. 2008ರಲ್ಲೇ ಬಜಾಜ್ ಅಲಿಯಾನ್ಸ್ ವಿಮಾ ಯೋಜನೆ ಅಂತರ್ಜಾಲಕ್ಕೆ ಸೇರ್ಪಡೆಗೊಂಡಿತ್ತು. ಆನ್‌ಲೈನ್ ಮುಖಾಂತರ ವಿಮೆ ಮಾಡಿಸಿ ಎಂದು ಘೋಷಿಸಿತ್ತು. ಐಜೈನ್ ಎಂದು ಗುರುತಿಸಲ್ಪಟ್ಟಿತ್ತು. ಬೇಡಿಕೆ ಹೆಚ್ಚಿದಂತೆ ಇತರ ಖಾಸಗಿ ವಿಮಾ ಕಂಪನಿಗಳು ಆನ್‌ಲೈನ್‌ನತ್ತ ಮುಖಮಾಡಿದವು. ಆನ್‌ಲೈನ್‌ನಲ್ಲೇ ವಿಮೆ ಮಾಡಿಸಿಕೊಳ್ಳುವುದರಿಂದ ಕಾಗದ ಬಳಕೆ ಕಡಿಮೆ ಆಗುತ್ತದೆ. ಕೆಲಸವೂ ಕಡಿಮೆ ಆಗುತ್ತದೆ. ವಿಮೆ ಕೊಳ್ಳುವಾಗ ಹೆಚ್ಚಿನ ಒತ್ತಡವಿರುವುದಿಲ್ಲ. ಪ್ರತಿ ಹಂತವನ್ನು ಸೂಕ್ಷ್ಮವಾಗಿ ದಾಟಿದಂತೆ ವಿಮಾದಾರರಾಗಬಹುದು. ಲೈಫ್ ಇಂನ್ಸೂರೆನ್ಸ್ ಕಾಲ್ ಸೆಂಟರ್‌ಗಳಿದ್ದು ಬೇಕಾದ ಮಾಹಿತಿ ನಿಖರವಾಗಿ ನೀಡುತ್ತಾರೆ.
ಉಷಾ ಇ-ಶ್ರೇಣಿ ಫ್ಯಾನ್ ಬಿಡುಗಡೆ
ಭಾರತದ ಪ್ರಖ್ಯಾತ ಗ್ರಾಹಕ ಉತ್ಪನ್ನ ಮಾರಾಟ ಕಂಪನಿಯಾದ ಉಷಾ ಇಂಟರ್‌ನ್ಯಾಷನಲ್ ಇದೀಗ ಗ್ರಾಹಕರಿಗಾಗಿ ವಿಶೇಷವಾದ, ಸ್ಟೈಲಿಶ್ ಆದ ಮತ್ತು ಅತ್ಯಂತ ನವೀನ ಮಾದರಿಯ ಆಟೋಮೋಟಿವ್ ಇನಸ್ಪೈರ್ಡ್ ಇ-ಶ್ರೇಣಿ ಫ್ಯಾನನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇಎಕ್ಸ್ 1 ಮತ್ತು ಇಎಕ್ಸ್ 3 ಶ್ರೇಣಿಯಲ್ಲಿ ಗ್ರಾಹಕರಿಗೆ ಅತ್ಯಂತ ಕಡಿಮೆ ತೂಕದ ಮತ್ತು ಅತಿ ಹೆಚ್ಚಿನ ಗುಣಲಕ್ಷಣ ಹೊಂದಿರುವ ಫ್ಯಾನ್ ಇದಾಗಿದೆ. ಹೆಚ್ಚಿನ ಏರ್ ಡೆಲಿವರಿ ಸಾಮರ್ಥ್ಯದ ಈ ಫ್ಯಾನ್ ಐದು ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ. ಇದರ ಬೆಲೆ 3,000ರಿಂದ 3,100ಗಳಾಗಿದೆ. ಹೆಚ್ಚಿನ ಮಾಹಿತಿಗೆ www.ushainternational.comಗೆ ಲಾಗ್ ಆನ್ ಆಗಿ.