

ಮುಂಬೈ: ರೆಪೋ ದರವನ್ನು ಆರ್‌ಬಿಐ ಬದಲಾಯಿಸುವು ಸಾಧ್ಯತೆ ಇದೆ ಎಂಬ ಎಲ್ಲಾ ಉಹಾಪೋಹಗಳಿಗೆ ತೆರೆ ಎಳೆದಿರುವ ಆರ್‌ಬಿಐ ಗವರ್ನರ್ ರಘುರಾಂ ರಾಜನ್ ಸದ್ಯದ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಕಾಯ್ದುಕೊಂಡಿದ್ದಾರೆ.
ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಘೋಷಿಸಿದ್ದು, ಆರ್‌ಬಿಐ ಹಣದುಬ್ಬರವನ್ನು ನಿಯಂತ್ರಿಸಲು ಕಳೆದ ಜನವರಿಯಿಂದ ರೆಪೊ ದರವನ್ನು ಶೇ. 8ರ ದರದಲ್ಲಿಟ್ಟಿದೆ.
ಮಂಗಳವಾರ ನಡೆದ ಹಣಕಾಸು ನೀತಿ ಪರಾಮರ್ಶೆಯಲ್ಲಿ ಗರ್ವನರ್ ರಘುರಾಮ್ ರಾಜನ್ ರೆಪೋ ದರದಲ್ಲಿ ಯಾವುದೇ ಹೆಚ್ಚಳವಿಲ್ಲ. ರೆಪೋ ದರ ಯಾಥಾಸ್ಥಿತಿಯಲ್ಲಿ ಉಳಿಯಲಿದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ರೆಪೋ ದರು ಶೇ.8ರಷ್ಟಿದೆ. ಆರ್‌ಬಿಐ ತನ್ನ ದರಗಳನ್ನು ಕಡಿತಗೊಳಿಸಿದರೆ ಅರ್ಥ ವ್ಯವಸ್ಥೆಗೆ ಉತ್ತಮ ಪರಿಣಾಮ ಬೀರಲಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದರು.
ಮುಂಬರುವ ವರ್ಷದಲ್ಲಿ ರೆಪೋ ದರದಲ್ಲಿ ಬದಲಾವಣೆ ಮಾಡಿಲ್ಲಿದ್ದು, ಬಡ್ಡಿ ದರ ಕಡಿತಗೊಳಿಸುವುದರ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ರಾಜನ್ ತಿಳಿಸಿದ್ದಾರೆ.