ಗ್ರಾಹಕರಿಗೆ ಚಿನ್ನಘಾತ: ಒಂದೇ ದಿನ ರು.840 ಏರಿಕೆ

ಕಳೆದ ಕೆಲ ದಿನಗಳಿಂದ ಸತತವಾಗಿ...
ಗ್ರಾಹಕರಿಗೆ ಚಿನ್ನಘಾತ: ಒಂದೇ ದಿನ ರು.840 ಏರಿಕೆ
Updated on: 

ನವದೆಹಲಿ: ಇದು ಚಿನ್ನಾಘಾತ!

ಕಳೆದ ಕೆಲ ದಿನಗಳಿಂದ ಸತತವಾಗಿ ಇಳಿಕೆ ಕಂಡು ಗ್ರಾಹಕರಲ್ಲಿ ನಗು ತಂದಿದ್ದ ಚಿನ್ನ ಮಂಗಳವಾರ ಭಾರಿ ಆಘಾತ ನೀಡಿದೆ. ದಿನೇ ದಿನೆ ಹಳದಿ ಲೋಹದ ದರ ಇಳಿಕೆಯಾಗುತ್ತಿದೆ. ಹಾಗಾಗಿ ಚಿನ್ನ ಖರೀದಿಸಲು ಇನ್ನೂ ಕೆಲವು ದಿನ ಕಾಯೋಣ ಎಂದು ಯೋಚಿಸಿದ್ದ ಗ್ರಾಹಕರಿಗೆ ಚಿನ್ನದ ಬಿಸಿ ತಟ್ಟಿದೆ.

ಏಕೆಂದರೆ, ಚಿನಿವಾರ ಪೇಟೆಯಲ್ಲಿ ಹಳದಿ ಲೋಹದ ದರ ಒಂದೇ ದಿನದಲ್ಲಿ ಬರೋಬ್ಬರಿ ರು.840 ಏರಿಕೆಯಾಗಿದೆ.

ಅಚ್ಚರಿಯಾದರೂ ಇದು ಸತ್ಯ. ದೆಹಲಿ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನದ ದರ 10 ಗ್ರಾಂಗೆ ರು.840 ಏರಿಕೆಯಾಗಿ, ರು.27,040 ತಲುಪಿದೆ.

ಬೆಳ್ಳಿ ಕೂಡ ತಾನೇನೂ ಕಮ್ಮಿಯಿಲ್ಲ ಎಂಬಂತೆ ಒಂದೇ ದಿನ ರು.2, 700 ಏರಿಕೆ ಕಂಡು, ಕೆಜಿಗೆ ರು.37 ಸಾವಿರ ಆಗಿದೆ. ಇದೇ ವೇಳೆ, ಮುಂಬೈನಲ್ಲಿ ಬೆಳ್ಳಿ ದರ ಕೆಜಿಗೆ ರು.36,965 ಆಗಿದ್ದರೆ, ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂಗೆ ರು.26,335 ಹಾಗೂ ಶುದ್ಧ ಚಿನ್ನದ ದರ ರು.26, 485 ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com