ಒರಿಫ್ಲೇಮ್ನ ಬೋಲ್ಡ್ ಐಲೈನರ್ ಮಾರುಕಟ್ಟೆಗೆ
ಒರಿಫ್ಲೇಮ್ ಸಂಸ್ಥೆಯು ನೂತನ ಬೋಲ್ಡ್ ಐಲೈನರ್ನ್ನು ಮಾರುಕಟ್ಟೆಗೆ ಬಿಟ್ಟಿದೆ. ವಾಲ್ಯೂಮ್ ಬಿಲ್ಡ್ ಮಸ್ಕಾರಾ ಹಾಗೂ ಬ್ಯೂಟಿ ಸ್ಟೂಡಿಯೋ ಆರ್ಟಿಸ್ಟ್ ಜೆಲ್ ಐಲೈನರ್ನ್ನು ಹೊಸ ವರ್ಷದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಮಸ್ಕಾರಾದಲ್ಲಿರುವ ವೋಲ್ಯೂಫ್ಲೆಕ್ಸ್ದಿಂದಾಗಿ ಹೆಚ್ಚು ಲೇಯರ್ಗಳಲ್ಲಿ ಅಳವಡಿಸಬಹುದು ಹಾಗೂ ಪ್ರತಿಬಾರಿ ಹಚ್ಚಿದಾಗಲೂ ಹೊಸದರಂತೆ ಕಾಣುತ್ತದೆ. ಜೆಲ್ ಐಲೈನರ್ನ ಬಣ್ಣ ಸುಮಾರು 24 ಗಂಟೆಗಳ ಅವಧಿವರೆಗೂ ಉಳಿದುಕೊಳ್ಳುತ್ತದೆ. ಕಲಾವಿದರಿಗೆ ಈ ಉತ್ಪನ್ನ ಹೆಚ್ಚು ನೆರವಾಗುತ್ತದೆ. ಐಲೈನರ್ ಜತೆಗೆ ಬ್ರಷ್ಗಳನ್ನು ನೀಡುತ್ತಿರುವುದರಿಂದ ಲೇಪನ ಮಾಡಿಕೊಳ್ಳುವುದು ಸುಲಭ ಹಾಗೂ ಮೃದು ಅನುಭವವಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.
ಎಸಿಸಿ ತೊಂಡೇಬಾವಿ ಸಿಮೆಂಟ್ ವರ್ಕ್ಸ್ ಸಂಸ್ಥೆಯಿಂದ ಹೊಲಿಗೆ ತರಬೇತಿ
ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಉಡುಪು ಹೊಲಿಯುವುದರ ಕುರಿತು ಎಸಿಸಿ ತೊಂಡೇಬಾವಿ ಸಿಮೆಂಟ್ ವರ್ಕ್ಸ್ ಸಂಸ್ಥೆ ಗ್ರಾಮೀಣ ಮಹಿಳೆಯರಿಗೆ ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ತೊಂಡೇಬಾವಿಯ 180 ಮಹಿಳೆಯರನ್ನು ಈ ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ಗ್ರಾಮೀಣ ಮಹಿಳೆಯರು ಕೂಡ ಆಧುನಿಕ ತಂತ್ರಜ್ಞಾನ ಅರಿತು ಉದ್ಯಮ ಸ್ನೇಹಿಯಾಗಿರಬೇಕು ಎಂಬ ಉದ್ದೇಶದಿಂದ ತೊಂಡೇಬಾವಿಯಲ್ಲಿ 15 ಆಧುನಿಕ ಯಂತ್ರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಮೊದಲ ಹಂತದ ತರಬೇತಿ ಅಂತ್ಯವಾಗಿದ್ದು, 30 ಮಹಿಳೆಯರು ಇದರ ಪ್ರಯೋಜನ ಪಡೆದಿದ್ದಾರೆ. ಎರಡು ಹಾಗೂ ಮೂರನೇ ಹಂತದಲ್ಲಿ ತಲಾ 75 ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದೆ. ಭವಿಷ್ಯದಲ್ಲಿ ಸುತ್ತಲಿನ ಗ್ರಾಮಗಳಿಗೂ ಇದನ್ನು ವಿಸ್ತರಿಸಿ ತರಬೇತಿ ನೀಡುವುದರ ಜತೆಗೆ ಉದ್ಯೋಗ ಕೊಡಿಸಲು ಎಸಿಸಿ ತೊಂಡೇಬಾವಿ ಸಿಮೆಂಟ್ ವರ್ಕ್ಸ್ ಸಂಸ್ಥೆ ನಿರ್ಧರಿಸಿದೆ.
ಅವೇಕ್ಷಾ ಟೆಕ್ನಾಲಜಿ ಸಂಸ್ಥೆಯಿಂದ ತಾಂತ್ರಿಕ ಸಹಾಯದ ಕೊಡುಗೆ
ಅವೇಕ್ಷಾ ಟೆಕ್ನಾಲಜಿ ಸಂಸ್ಥೆಯ 3ನೇ ಸಂಸ್ಥಾಪನಾ ವರ್ಷಾಚರಣೆ ಸಂಭ್ರಮದಲ್ಲಿ 'ಬಿಸಿನೆಸ್ ಐಟಿ ಪ್ರೆಡಿಕ್ಟೆಬಿಲಿಟಿ ಆ್ಯಂಡ್ ಅಶ್ಯೂರನ್ಸ್ ಪ್ಲಾಟ್ಫಾರಂ' ಅನ್ನು ಅನಾವರಣಗೊಳಿಸಿದೆ. ಆಕ್ಸಿಸ್, ಇಂಡಸ್ಇಂಡ್ ಬ್ಯಾಂಕ್ನ ಕೋರ್ ಬ್ಯಾಂಕಿಂಗ್ ಹಾಗೂ ಇತರ ಕ್ಷೇತ್ರಗಳ ಅಭಿವೃದ್ಧಿಗೆ ಸಂಸ್ಥೆಯು ತಾಂತ್ರಿಕ ಸಹಾಯ ನೀಡಿದೆ. ಈ ನೂತನ ವೇದಿಕೆ ಬಳಸಿಕೊಂಡು ಬೃಹತ್ ಸಂಸ್ಥೆಗಳ ಸಂಕೀರ್ಣ ಹಾಗೂ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಸ್ಥೆ ಕೆಲಸ ಮಾಡುತ್ತಿದೆ. ಅಮೆರಿಕ, ಬ್ರಿಟನ್ ಹಾಗೂ ಆಸ್ಟ್ರೇಲಿಯಾದಲ್ಲೂ ಸಂಸ್ಥೆ ತನ್ನ ವ್ಯವಹಾರ ಆರಂಭಿಸಿದೆ. ಮಾಹಿತಿ ತಂತ್ರಜ್ಞಾನದ ಅನ್ವೇಷಣೆ ಮತ್ತು ಉತ್ಕೃಷ್ಟತೆಯ ಹಿನ್ನೆಲೆಯಲ್ಲಿ ಸಂಸ್ಥೆಗೆ 'ಎಕ್ಸ್ಪ್ರೆಸ್ ಐಟಿ ಅವಾರ್ಡ್' ನೀಡಿ ಗೌರವಿಸಲಾಗಿದೆ. ಇದಲ್ಲದೇ ನ್ಯಾಸ್ಕಾಮ್ನಿಂದಲ 'ನ್ಯಾಸ್ಕಾಮ್ ಎಮರ್ಜ್-50' ಮಾನ್ಯತೆ ಕೂಡ ದೊರೆತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಿಷನ್ ಎಕ್ಸ್ಪ್ರೆಸ್ನಿಂದ ಶೇ.50ರಷ್ಟು ರಿಯಾಯಿತಿ
ಭಾರತದಲ್ಲಿ ತನ್ನ 5ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ವಿಷನ್ ಎಕ್ಸ್ಪ್ರೆಸ್ ಸಂಸ್ಥೆಯು 2999ಕ್ಕೂ ಅಧಿಕ ಬೆಲೆಯ ಫ್ರೇಮ್ಗಳಿಗೆ ಶೇ.50ರಷ್ಟು ರಿಯಾಯಿತಿ ನೀಡುತ್ತಿದೆ. ರಿಲಯನ್ಸ್ ರಿಟೇಲ್ ಹಾಗೂ ಗ್ರಾಂಡ್ ವಿಷನ್ನ ಜಂಟಿ ಸಹಭಾಗಿತ್ವದಲ್ಲಿ ವಿಷನ್ ಎಕ್ಸ್ಪ್ರೆಸ್ ಸಂಸ್ಥೆ 5 ವರ್ಷದ ಹಿಂದೆ ರೂಪಗೊಂಡಿತ್ತು. ಭಾರತದ 30 ನಗರಗಳಲ್ಲಿ 170 ಮಳಿಗೆಗಳ ಜಾಲದ ಮೂಲಕ 2.5 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ವಿಷನ್ ಎಕ್ಸ್ಪ್ರೆಸ್ ಹೊಂದಿದೆ. ಎಲ್ಲ ಮಳಿಗೆಗಳಲ್ಲಿಯೂ ಕಣ್ಣು ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ. ಇವೆಲ್ಲ ಕೇಂದ್ರಗಳಲ್ಲಿಯೂ ನುರಿತ ನೇತ್ರ ತಜ್ಞರಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸನ್ ಡೈರೆಕ್ಟ್ ಡಿಟಿಎಚ್ ರಿಚಾರ್ಜ್ ಮೇಲೆ ಹೆಚ್ಚುವರಿ ಸೌಲಭ್ಯ
ಹೊಸ ವರ್ಷದ ಅಂಗವಾಗಿ ಸನ್ ಡೈರೆಕ್ಟ್ ಡಿಟಿಎಚ್ ಹೆಚ್ಚುವರಿ ಸೌಲಭ್ಯಗಳನ್ನೊಳಗೊಂಡಿರುವ ರೀಚಾರ್ಜ್ ಪ್ಯಾಕೇಜ್ಗಳನ್ನು ಬಿಡುಗಡೆ ಮಾಡಿದೆ. ನೂತನ ಸಂಪರ್ಕ ಪಡೆಯುವಾಗ 1890 ಪಾವತಿಸಿದರೆ 2 ತಿಂಗಳುಗಳ ಕಾಲ 299 ಮೌಲ್ಯದ ಕ್ರೀಡೆ ಮತ್ತು ಸಿನೆಮಾ ಪ್ಯಾಕ್, 2290 ಪಾವತಿಸಿದಲ್ಲಿ 5 ತಿಂಗಳುಗಳ ಕಾಲ ಕ್ರೀಡೆ ಮತ್ತು ಸಿನೆಮಾ ಪ್ಯಾಕ್ ಹಾಗೂ 3390 ಪಾವತಿಸಿದಲ್ಲಿ 12 ತಿಂಗಳುಗಳ ಕಾಲ 698 ಮೌಲ್ಯದ ಕ್ರೀಡೆ ಮತ್ತು ಸಿನೆಮಾ ಪ್ಯಾಕ್ ದೊರೆಯಲಿದೆ. ಇನ್ನು 2 ಸಾವಿರ ರೀಚಾರ್ಜ್ ಮಾಡಿದಲ್ಲಿ 200 ಮರಳಿ ಪಡೆಯಬಹುದಾಗಿದೆ. ಇದಲ್ಲದೇ 12 ತಿಂಗಳುಗಳ ಕಾಲ 500 ಮೌಲ್ಯದ ಕ್ರೀಡೆ ಮತ್ತು ಸಿನೆಮಾ ಪ್ಯಾಕ್ ಹಾಗೂ 1 ಸಾವಿರ ರೀಚಾರ್ಜ್ ಮಾಡಿಸಿದಲ್ಲಿ 75 ಮರಳಿ ಪಡೆದು 12 ತಿಂಗಳುಗಳ ಕಾಲ 175 ಮೌಲ್ಯದ ಕ್ರೀಡೆ ಮತ್ತು ಸಿನೆಮಾ ಪ್ಯಾಕ್ ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಆಕ್ಸಿಸ್ ಡೆಂಟಲ್ ಸಂಸ್ಥೆ ನಾರಾಯಣ ಹೆಲ್ತ್ ಕೇರ್ ಜತೆ ಒಪ್ಪಂದ
ದಂತವೈದ್ಯ ಕ್ಷೇತ್ರದ ಅತಿ ದೊಡ್ಡ ನೆಟ್ವರ್ಕ್ ಎಂಬ ಖ್ಯಾತಿ ಹೊಂದಿರುವ ಆಕ್ಸಿಸ್ ಡೆಂಟಲ್ ಸಂಸ್ಥೆ ನಾರಾಯಣ ಹೆಲ್ತ್ ಕೇರ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ ನಾರಾಯಣ ಹೃದಯಾಲಯದ ಡೆಂಟಲ್ ಕ್ಲಿನಿಕ್ನ ಕಾರ್ಯಾಚರಣೆಯ ಜವಾಬ್ದಾರಿಯನ್ನು ಆಕ್ಸಿಸ್ ಡೆಂಟಲ್ವಹಿಸಿಕೊಳ್ಳುತ್ತಿದೆ. ಈ ಮೂಲಕ ಭಾರತದಲ್ಲಿ 60 ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ಹೊಂದಿದ ಏಕೈಕ ದಂತ ವೈದ್ಯಾಲಯ ಎಂಬ ಖ್ಯಾತಿಗೆ ಪಾತ್ರವಾಗಿದೆ. 'ದಂತ ವೈದ್ಯಕೀಯ ಜಾಗೃತಿ ನಡೆಸುವಲ್ಲಿ ಆಕ್ಸಿಸ್ ಸಂಸ್ಥೆಯು ನಾರಾಯಣ ಹೃದಯಾಲಯದಂತೆ ಮೌಲ್ಯ ಹಾಗೂ ಆದರ್ಶಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದರ ಜತೆಗೆ ಜಾಗತಿಕ ಮಟ್ಟದ ಚಿಕಿತ್ಸೆಯನ್ನುನ ಭಾರತಕ್ಕೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ' ಎಂದು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. 'ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆಯನ್ನು ಬೆಂಗಳೂರಿಗರಿಗೆ ಇದೇ ಮೊದಲ ಬಾರಿಗೆ ಒದಗಿಸಲಾಗುತ್ತಿದೆ. ದಿನವಿಡೀ ಕಾರ್ಯನಿರ್ವಹಿಸುವ ಕಾಲ್ಸೆಂಟರ್ಗಳ ಮೂಲಕ ದಂತವೈದ್ಯಕ್ಕೆ ಸಂಬಂಧಿಸಿ ಉತ್ತಮ ಸೇವೆ ನೀಡಿವುದು ಸಂಸ್ಥೆಯ ಗುರಿಯಾಗಿದೆ' ಎಂದು ಆಕ್ಸಿಸ್ ಡೆಂಟಲ್ನ ನಿರ್ದೇಶಕ ಡಾ. ಸಂದೀಪ್ ಶರ್ಮಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

