ತೆರಿಗೆ ಭೂತ!

ತೆರಿಗೆ ಭೂತ!
Updated on: 

ಸಂಬಳದಾರರಿಗೆ ತೆರಿಗೆಯದ್ದೇ ಚಿಂತೆ. ಪ್ರತಿ ವರ್ಷ ಜನವರಿ ತಿಂಗಳು ಬರುತ್ತಿದ್ದಂತೆ ನಾವು ಈ ವರ್ಷ ಎಷ್ಟು ತೆರಿಗೆ ಕಟ್ಟಬೇಕು, ಇದುವರೆಗೆ ಎಷ್ಟು ಪಾವತಿ ಮಾಡಿದ್ದೇವೆ ಎನ್ನುವುದರ ಬಗ್ಗೆ ಲೆಕ್ಕಾಚಾರ ಹಾಕುತ್ತಾರೆ. ತೆರಿಗೆ ಉಳಿಸಲು ಯಾವ ರೀತಿಯ ಮಾರ್ಗಗಳಿವೆ ಎಂಬುದರ ಬಗ್ಗೆ ಯೋಚನೆ ಮಾಡಲಾರಂಭಿಸುತ್ತಾರೆ. ಈಗೀಗ
ಆದಾಯ ತೆರಿಗೆ ಇಲಾಖೆ ಕೂಡ ತೆರಿಗೆ ವಂಚಿಸುವವರನ್ನು ಪತ್ತೆ ಮಾಡಲು ಆಧುನಿಕ ವಿಧಾನಗಳನ್ನು ಅನುಸರಿಸುತ್ತಿದೆ. ಈಗ ವ್ಯಕ್ತಿಯೊಬ್ಬ ಹೊಂದಿರುವ ಪ್ಯಾನ್ ನಂಬರ್ ಇದ್ದರೆ ಸಾಕು. ಆತನ ಎಲ್ಲ ಹಣಕಾಸು ವ್ಯವಹಾರಗಳು ಗೊತ್ತಾಗುತ್ತದೆ.
ಸರ್ಕಾರ ತೆರಿಗೆ ಪಾವತಿದಾರರ ಮೇಲಿನ ಭಾರ ಕಡಿಮೆ ಮಾಡಲು ಮತ್ತು ಅವರಲ್ಲಿ ಉಳಿತಾಯದ ಮನೋಭಾವ ಹೆಚ್ಚಿಸಲು ಹಲವು ಉಳಿತಾಯದ ಅವಕಾಶಗಳನ್ನೂ ಕಲ್ಪಿಸಿದೆ. ಮಾತ್ರವಲ್ಲದೆ ತೆರಿಗೆದಾರ ಖರ್ಚು ಮಾಡುವ ಕೆಲವು ಕ್ಷೇತ್ರಗಳಿಗೆ ವಿನಾಯಿತಿಯನ್ನೂ ನೀಡಿದೆ. ಅವುಗಳಲ್ಲಿ ಕೆಲವು ಮಾನವೀಯತೆಯ ಆಧಾರದ ಬಾಬ್ತುಗಳೂ ಸೇರಿವೆ. ಅಂದರೆ ಅಂಗವಿಕಲರಿಗೆ ಮತ್ತು ವೃದ್ಧರಿಗೆ ನೀಡುವ ಚಿಕಿತ್ಸೆ ಸೇರಿದೆ.
ತೆರಿಗೆ ಉಳಿಸಬಹುದಾದ ಉಳಿತಾಯಗಳು
    ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿರುವ ವಿಮಾ ಪಾಲಿಸಿಗಳಿಗೆ ನೀಡಿದ ಕಂತಿನ ಮೊತ್ತ.
    ಅಧಿಕೃತ ಉದ್ಯೋಗಿಗಳ ಕ್ಷೇಮನಿಧಿ ಮತ್ತು ಸಾರ್ವಜನಿಕ ಕ್ಷೇಮ ನಿಧಿ (ಪಿಪಿಎಫ್ನಲ್ಲಿ  ತೊಡಗಿಸಿದ ಹಣ (ಸಾರ್ವಜನಿಕ ಕ್ಷೇಮ ನಿಧಿ ಗರಿಷ್ಠ ಮೊತ್ತ 70 ಸಾವಿರ).
    ವಿದ್ಯಾಭ್ಯಾಸ ಶುಲ್ಕ (ಇಬ್ಬರು ಮಕ್ಕಳಿಗೆ ಮಾತ್ರ). ವಿದೇಶದಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರೆ ಅದಕ್ಕೆ ನೀಡಿದ ಶುಲ್ಕಕ್ಕೆ ವಿನಾಯಿತಿ ಇಲ್ಲ.
    ಐದು ವರ್ಷಗಳ ನಿಗದಿತ ಅವಧಿಯ ಠೇವಣಿ (ತೆರಿಗೆ ವಿನಾಯಿತಿಗಾಗಿ ಯಾವುದೇ ಶೆಡ್ಯೂಲ್ಡ್ ಬ್ಯಾಂಕ್ನಲ್ಲಿ
    ಹೂಡಿಕೆ ಮಾಡಿದ ಮೊತ್ತ)
    ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ನಲ್ಲಿ ಹೂಡಿಕೆ.
    ಗೃಹ ಸಾಲ ಕಂತುಗಳು.
    ಇಎಲ್ ಎಸ್, ಪಿಂಚಣಿ ಫಂಡ್ ಮತ್ತು ಯುಲಿಪ್ ಫಂಡ್ಗಳು
    ರಾಜೀವ್ ಗಾಂಧಿ ಇಎಲ್ಎಸ್ ಯೋಜನೆಯಡಿ 1,20,000 ವರೆಗಿನ ಆದಾಯ ಹೊಂದಿರುವವರು 50 ಸಾವಿರ ಹೂಡಿಕೆ ಮಾಡಿದರೆ ಅದರ ಶೇ.50ರಷ್ಟು ತೆರಿಗೆ ವಿನಾಯಿತಿ ದೊರೆಯುತ್ತದೆ.
    ಮೂಲಭೂತ ಸೌಕರ್ಯದ ಬಾಂಡ್ 20 ಸಾವಿರ (ಇದು ಮಾಮೂಲು ಉಳಿತಾಯದ ಹೊರತಾಗಿ).
    ಹುಡ್ಕೋ, ನ್ಯಾಷನಲ್ ಹೌಸಿಂಗ್ ಬೋರ್ಡ್ ಅಥವಾ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರಗಳ ತೆರಿಗೆ ವಿನಾಯಿತಿ ಬಾಂಡುಗಳಲ್ಲಿ ಹೂಡಿಕೆ.
    ಆರೋಗ್ಯ ವಿಮೆಯಡಿ ತೆರಿಗೆದಾರ, ಆತನ ಪತ್ನಿ, ಮಕ್ಕಳಿಗೆ ಗರಿಷ್ಠ 1,50,00 ಮತ್ತು ಹೆತ್ತವರಿಗಾಗಿ 15 ಸಾವಿರ ಕ್ಲೇಮು ಮಾಡಲು ಅವಕಾಶ ಉಂಟು.
    ಹಿರಿಯ ನಾಗರಿಕರಿಗೆ 20 ಸಾವಿರ (ಪ್ರಿವೆಂಟಿವ್ ಚೆಕ್ಅಪ್ ಸೇರಿ)
    ತೆರಿಗೆದಾರ ಈ ಸೌಲಭ್ಯಗಳನ್ನುಪಯೋಗಿಸಿಕೊಂಡು 1 ಲಕ್ಷದವರೆಗೆ ಉಳಿತಾಯ ಮಾಡಲು ಅವಕಾಶವಿದೆ.
ಖರ್ಚು ಮಾಡುವುದಕ್ಕೂ ವಿನಾಯಿತಿ!
ಹೌದಾ ಖರ್ಚು ಮಾಡುವುದಕ್ಕೂ ವಿನಾಯಿತಿ ಇದೆಯಾ ಎಂದು ತಿಳಿದುಕೊಂಡು ದೈನಂದಿನ ವೆಚ್ಚಗಳನ್ನು ತೆರಿಗೆ ವ್ಯಾಪ್ತಿಗೆ ಸೇರಿಸಿಕೊಳ್ಳಬೇಡಿ. ಖರ್ಚುಗಳಿಗೆ ಇರುವ ವಿನಾಯಿತಿ ಈ ಕೆಳಗಿನಂತಿದೆ.
= ಗೃಹ ಸಾಲದ ಬಡ್ಡಿ ಮೊತ್ತ 1,50,000 ವರೆಗೆ ತೆರಿಗೆ ವಿನಾಯತಿ ಇದೆ.
= ಉನ್ನತ ಶಿಕ್ಷಣ ಸಾಲದ ಬಡ್ಡಿಗೆ ಗರಿಷ್ಠ 40 ಸಾವಿರ (ಇಬ್ಬರು ಮಕ್ಕಳಿಗೆ ಮಾತ್ರ)
    ಅಂಗವಿಕಲರ ಸೇವೆಗೆ ಗರಿಷ್ಠ ರು. 40 ಸಾವಿರ.
    ಸ್ವಂತಕ್ಕೆ ಮತ್ತು ಆಶ್ರಯದಾತರಿಗೆ ವೈದ್ಯಕೀಯ ಚಿಕಿತ್ಸೆ 40 ಸಾವಿರ (64 ವರ್ಷ ಕೆಳಗಿನವರಿಗೆ) ಮತ್ತು 65 ವರ್ಷ ಮೇಲ್ಪಟ್ಟವರಿಗೆ 60 ಸಾವಿರ.
    ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ (ಕೇಸ್ ಟು ಕೇಸ್ ಆಧಾರದ ಮೇಲೆ. ಇದಕ್ಕೆ ತೆರಿಗೆ ಇಲಾಖೆ ಕೊಟ್ಟ
    ಅನುಮತಿ ಪತ್ರ ಬೇಕು.)
    ಬಾಡಿಗೆದಾರರಾಗಿದ್ದರೆ ಮತ್ತು ಬಾಡಿಗೆ ಭತ್ಯೆ ಪಡೆಯದಿದ್ದರೆ ಒಟ್ಟು ಆದಾಯದ ಶೇ.10ರಷ್ಟು ಕೊಟ್ಟ ಬಾಡಿಗೆ ಅಥವಾ ಶೇ.25 ಅಥವಾ 2 ಸಾವಿರ
ವಿನಾಯಿತಿಗೆ ಮುಖ್ಯ ಅವಕಾಶಗಳು
    ವೈಜ್ಞಾನಿಕ ಸಂಶೋಧನೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಕೊಟ್ಟ ದೇಣಿಗೆ.
    ವಿದೇಶದಿಂದ ಬಂದ ಲಾಭದಲ್ಲಿ ಶೇ.50.
    ದೇಶದಲ್ಲಿ ಕಟ್ಟಡ ಕಾಮಗಾರಿಯಿಂದ ಬಂದ ಲಾಭ.
    ವಿದೇಶಿ ವಿನಿಮಯ ಗಳಿಕೆ.
    ಕೆಲ ನಿರ್ದಿಷ್ಟ ಸೆಕ್ಯುರಿಟಿಗಳ ಮೇಲೆ ಗರಿಷ್ಠ 9 ಸಾವಿರ ವಿನಾಯಿತಿ.
    ವಿದೇಶಿ ವಿವಿಗಳಿಂದ ಬಂದ ಗೌರವಧನದ ಶೇ.75ರಷ್ಟು ಆದಾಯ.
    ದೇಶದಿಂದ ಹೊರಕ್ಕೆ ಕೊಟ್ಟ ಸೇವೆಗೆ ಶೇ.75
    ಅಂಗವಿಕಲರ ಆದಾಯಕ್ಕೆ ಪೂರ್ಣ ವಿನಾಯಿತಿ (ಗರಿಷ್ಠ ಮಿತಿ ರು. 40 ಸಾವಿರ)
    ನ್ಯಾಯಯುತವಾಗಿ ತೆರಿಗೆಯಿಂದ ಉಳಿಸಲು ಹಲವು ಮಾರ್ಗಗಳು ಇವೆ. ಆದರೆ ಇದಕ್ಕೆಲ್ಲ ತೆರಿಗೆ ಸಲಹೆಗಾರರ ಸಲಹೆ ಪಡೆದುಕೊಂಡು ಮುಂದುವರಿಯುವುದು ಉತ್ತಮ.

ಸಂಬಳದ ಹೊಂದಾಣಿಕೆ

ಇದು ಸುಲಭವಲ್ಲ. ಆದರೆ ಸಾಧ್ಯ. ಹೇಗೆಂದರೆ ಆಯಾ ಉದ್ಯೋಗಸ್ಥನ ಮೇಲಧಿಕಾರಿ ಮೇಲೆ ಅವಲಂಬಿಸಿರುತ್ತದೆ. ಅದು ಹೇಗೆಂದರೆ ಊಟದ ಭತ್ಯೆಯ ಬದಲಿಗೆ ಫುಡ್ ಕೂಪನ್ನಲ್ಲಿ ಪ್ರತಿ ವರ್ಷ 60 ಸಾವಿರವರೆಗೆ ವಿನಾಯಿತಿ ಇದೆ. ಸಂಬಳವನ್ನು ವೈದ್ಯಕೀಯ, ಸಾರಿಗೆ, ಶಿಕ್ಷಣ, ಸಮವಸ್ತ್ರ, ಟೆಲಿಫೋನ್ ಎಂದು ವಿಭಜಿಸಬೇಕು ಮತ್ತು ಅದಕ್ಕೆ ಸರಿಯಾದ ಬಿಲ್ಗಳನ್ನು ಕೊಡಬೇಕು.
ಎಷ್ಟು ಆದಾಯಕ್ಕೆ ತೆರಿಗೆ?

ಆದಾಯ (.ಗಳಲ್ಲಿ)    ತೆರಿಗೆ (ಪ್ರಮಾಣ ಶೇ.)    
2,00,000    -
2,10,000    1,000
2,20,000    2,000
2,30,000    3,000
2,40,000    4,000
2,50,000    5,000
2,60,000    6,000
2,70,000    7,000
2,80,000    8,000
2,90,000    9,000
3,00,000    10,000
5,00,000    30,000
6,00,000    50,000
7,00,000    70,000
8,00,000    90,000
9,00,000    1,20,000
10,00,000    1,30,000
ಆದಾಯ (ಗಳಲ್ಲಿ)    ತೆರಿಗೆ (ಪ್ರಮಾಣ ಶೇ.)
2,00,000 ವರೆಗೆ    ತೆರಿಗೆ ಇಲ್ಲ
2,00,000-5,00,000    10
5,00,000-10,00,000    20
10 ಲಕ್ಷ ಮೇಲ್ಪಟ್ಟು    30
(ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರು) ತೆರಿಗೆ ವಿನಾಯಿತಿ ಮಿತಿ ರು. 2,50,000)
ಹಿರಿಯ ನಾಗರಿಕರು (80 ವರ್ಷ ಮೇಲ್ಪಟ್ಟು)
ಆದಾಯ  (ಗಳಲ್ಲಿ)    ತೆರಿಗೆ (ಪ್ರಮಾಣ ಶೇ.)
5,00,000 ವರೆಗೆ    -
5,00,000-10,00,000    10   
10 ಲಕ್ಷಕ್ಕಿಂತ ಮೇಲ್ಪಟ್ಟು    20
ಈ ತೆರಿಗೆಯ ಮೇಲೆ ಪ್ರತಿಯೊಬ್ಬರಿಗೂ ಶಿಕ್ಷಣಕ್ಕಾಗಿ ಶೇ.2 ಸೆಸ್ ಮತ್ತು ಶೇ.5 ಸರ್ಜಾರ್ಜ್ ವಿಧಿಸಲಾಗುತ್ತಿದೆ. ಒಂದು ಕೋಟಿ ರುಪಾಯಿಗಿಂತ ಹೆಚ್ಚು ಆದಾಯ ಹೊಂದಿರುವವರಿಗೆ ಹೆಚ್ಚುವರಿಯಾಗಿ ಶೇ 10ರಷ್ಟು ಸರ್ಚಾರ್ಜ್ ವಿಧಿಸಲಾಗುತ್ತದೆ.
ಸಂಪತ್ತು ತೆರಿಗೆ
ಆದಾಯ (ಗಳಲ್ಲಿ)    ತೆರಿಗೆ (ಪ್ರಮಾಣ ಶೇ.)
30 ಲಕ್ಷ ವರೆಗೆ    -
30 ಲಕ್ಷ ಮೇಲ್ಪಟ್ಟು    1


= ಡಾ.ಅನಿಕೇತ್ ಶರ್ಮಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com