ಕಾವಲಿಯಂತೆ ಕಾದಿರುವ ಷೇರು ಬಜಾರು

ಕಾವಲಿಯಂತೆ ಕಾದಿರುವ ಷೇರು ಬಜಾರು
Updated on: 

ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತಮಂತ್ರಿ ಅರುಣ ಜೈಟ್ಲಿ ಅವರು ಆಗಿಂದ್ದಾಗ್ಗೆ ಕೊಟ್ಟ ಸೂಚನೆ - ಇಂಗಿತಗಳ ಆಧಾರದ ಮೇಲೆ ಷೇರು ಬಜಾರಿನಲ್ಲಿ ಕೆಂಪಗೆ ಕಾವಲಿಯಂತೆ ಕಾದಿರುವ ಬಿಸಿ ಬಿಸಿ ವ್ಯಾಪಾರದ ವಾತಾವರಣ ಬಜೆಟ್ ಮುನ್ನ ದಿನಗಳಲ್ಲಿ ಮೂಡಿತ್ತು.
ಅನಗತ್ಯವಾದ, ಅರ್ಥಹೀನ ಅಗ್ಗದ ಜನ ಪ್ರಯತೆಯ ಕೊಡುಗೆ, ಉಡುಗೊರೆ, ಭಕ್ಷೀಸ್, ದಾನ, ಧರ್ಮಗಳ ಕಾರ್ಯಕ್ಷಮದ ಪ್ರಭಾವವನ್ನು ಕುಗ್ಗಿಸುವ ಹೇಳಿಕೆ, ವಾಣಿಜ್ಯೋದ್ಯಮಗಳನ್ನು ಚುರುಕಾಗುವಂತೆ ಮಾಡಿತ್ತು. ಇಂತಹ ಹೇಳಿಕೆಗಳಿಂದ ವಿಪರೀತ ಸಂಸ್ಥೆಗಳು ಹಾಗೂ ಮ್ಯಾನುಯಲ್ ಫಂಡ್‌ಗಳು, ಕಳೆದ ವಾರದ ಮಧ್ಯದ ವರೆಗೆ, ಲಭ್ಯವಿರುವ ಮಾಹಿತಿಯಂತೆ, ಸಾವಿರ ಕೋಟಿ ಡಾಲರ್‌ಗಳ ಹೂಡಿಕೆಯಾಗಲಿದೆ. ಇಂತಹ ದಾಖಲೆ ರೂಪಗೊಂಡಿರುವುದು ಮೂರುವ ವರ್ಷಗಳ ಸಾಧನೆ, ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಛೇಂಜಸ್ ಬೋರ್ಡ್‌ನ ಅಧಿಕೃತ ಹೇಳೆಕೆಯಂತೆ, ಇದುವರೆಗಿನ ವಿದೇಶೀ ಸಂಸ್ಥೆಗಳ ಹೂಡಿಕೆಯ ಮೊತ್ತ 62000 ಕೋಟಿ ರೂಪಾಯಿಗಳಿಗೂ ಹೆಚ್ಚು.
ನಿಜ, ಇಂತಹ ಬೃಹತ್ ಅಂಕಿ-ಅಂಶಗಳಿಂದ ಜನ ಸಾಮಾನ್ಯ ವರ್ಗಗಳಿಗೆ ಯಾವ ಲಾಭವೂ ಇಲ್ಲ. ಇದು ವ್ಯವಹಾರದ ವಿಚಾರ. ಆದರೆ ವಾಣಿಜ್ಯೋದ್ಯಮಿಗಳು ಹಣದ ಮೇಲೆ ತಮ್ಮ ಬಿಗಿ ಹಿಡಿತವನ್ನು ಸಡಿಲಗೊಳಿಸಿದರೆ, ಪೇಟೆಯಲ್ಲಿ ಬಂಡವಾಳದ ಹರಿವು ಹೆಚ್ಚಾಗಿ ಉತ್ಸಾಹದ ವಾತಾವರಣ ಮೂಡುವುದು ಖಚಿತ. ವಾತಾವರಣದಲ್ಲಿ ಉತ್ಸಾಹ ಮೂಡಿದರೆ, ಬಂಡವಾಳದ ಕೊರತೆ ತುಂಬಿ ಬಂದರೆ ದೇಶದ ಎಲ್ಲ ವಲಯಗಳಲ್ಲೂ ಪ್ರಗತಿಯನ್ನು ನಿರೀಕ್ಷಿಸಬಹುದು. ಆದರೆ ಇದು ನೀರಿನ ಮೇಲಿನ ಗುಳ್ಳೆಯಂತೆ ಆಗಬಾರದು. ಈಗಾಗಲೇ ಹಲವಾರು ಬಾರಿ ಹೇಳಿರುವಂತೆ, ಪೇಟೆಯ ಸೂಚ್ಯಾಂಕಗಳ ಜಿಗಿತ ಅಥವಾ ಇಳಿತಕ್ಕೆ ವಾಸ್ತವ ಸ್ಥಿತಿಯಲ್ಲಿನ ಬದಲಾವಣೆಗಳಿಗಿಂತ ಭಾವನೆಗಳ ಚೆಲ್ಲಾಟವೇ ಪ್ರಧಾನ. ಆದ್ದರಿಂದ ಈಗ ತಾನೇ ಪೇಟೆಗೆ ಹಿಂತಿರುಗುತ್ತಿರುವ ವೈಯುಕ್ತಿಕ ವ್ಯವಹಾರಸ್ಥರು, ಇಂತಹ ಉತ್ಸಾಹದ ಪ್ರವಾಹದಲ್ಲಿ ಕೊಚ್ಚಿ ಹೋಗಬಾರದು.
ಪೇಟೆಯಲ್ಲಿ ಇಂದು ಷೇರುಕೊಂಡು, ನಾಳೆ ಮಾರಿ ಲಾಭಗಳಿಸುವ ಪ್ರವೃತ್ತಿ ಒಳ್ಳೆಯದಲ್ಲ. ಲಾಭ ರಾತ್ರಿ ಕಳೆದು ಬೆಳಗಾವುದರ ಒಳಗಾಗಿ ಸಿಗುವುದಾದರೆ, ಅದೇ ಮಾತು ನಷ್ಟಕ್ಕೂ ಅನ್ವಯವಾಗುತ್ತದೆ. ಸಾಮಾನ್ಯ ಗ್ರಾಹಕರು ಷೇರುಗಳ ಮೇಲೆ ಹಣ ಹೂಡಿದರೂ, ಅವರು ಹೂಡುವ ಹಣದ ಅಂತಿಮ ಬಳಕೆಯ ಉದ್ದೇಶ ಉದ್ಯಮದ ಪ್ರಗತಿ. ಆದ್ದರಿಂದ ಪೇಟೆಯ ಉತ್ಸಾಹ ಹೇಗಾದರೂ ಇರಲಿ ಉದ್ಯಮದ ಸ್ಥಿತಿಗತಿಯನ್ನು ಗಮನಿಸುವುದು ಸೂಕ್ತ. ಈಗ ಪ್ರಾಥಮಿಕ ಪೇಟೆಯಲ್ಲಿ (ಅಂದರೆ ಹೊಸ ಷೇರುಗಳ ಮಾರಾಟದ ಪೇಟೆ) ಉತ್ಸಾಹ ಮೂಡಿಸಲು ಸೆಬಿ ಮುಂದಗಿದೆ. ಸೆಬಿಯ ಹೊಸ ನಿಯಮದಿಂದಾಗಿ, ಸರ್ಕಾರಿ ಸಂಸ್ಥೆಗಳ ಷೇರುಗಳೂ ಸಾಲು - ಸಾಲಾಗಿ ಪೇಟೆಗೆ ಬರಲಿವೆ. ಅದರಲ್ಲಿ ಒಳ್ಳೆಯ ಷೇರುಗಳನ್ನು ಆರಿಸುವುದು ಕಷ್ಟವಲ್ಲ.
ಕೊನೆ ಮಾತು: ಮಾಜಿ ಕೇಂದ್ರ ಸಚಿವ, ಪ್ರಸಿದ್ಧ ವಕೀಲ ಕಪಿಲ ಸಿಬಲ್ ಅವರು ತಮ್ಮ ಸರಕಾರಿ ಬಂಗಲೆಯಿಂದ ಖಾಸಗಿ ಬಾಡಿಗೆ ಮನೆಗೆ ಹೋಗಿದ್ದಾರೆ. ತಿಂಗಳ ಬಾಡಿಗೆ ಹದಿನಾರು ಲಕ್ಷ ರೂಪಾಯಿ. ಮೇರಾ ಭಾರತ್ ಮಹಾನ್.

ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com