

ಮುಂಬೈನಲ್ಲಿ ಪ್ರತಿ ವರ್ಷ ನಡೆಯುವ ಲಾಕ್ಮೆ ಇಂಡಿಯಾ ಫ್ಯಾಷನ್ ವೀಕ್‌ನಲ್ಲಿ ಹಲವಾರು ಚಿತ್ರ ವಿಚಿತ್ರಗಳ ಉಡುಪುಗಳು ಬಾಹ್ಯ ಪ್ರಪಂಚಕ್ಕೆ ಗೊತ್ತಾಗುತ್ತವೆ. ಆದರೆ ಅವುಗಳಲ್ಲಿ ಕೆಲವು ಮನಸ್ಸಿಗೆ ಮುದ ನೀಡುತ್ತವೆ ಮತ್ತು ಗ್ರಾಹಕರಿಗೆ ಲಭ್ಯವಾಗುತ್ತದೆ. ಇಂಥ ಫ್ಯಾಷನ್ ಮೇಳಗಳಲ್ಲಿ ಭಾಗವಹಿಸುವವರೆಲ್ಲ ಅತ್ಯಂತ ಶ್ರೀಮಂತರು. ಅಲ್ಲಿ ಪ್ರಸ್ತುತಗೊಳ್ಳುವ ಎಲ್ಲ ಉಡುಪುಗಳನ್ನು ಅವರಿಗೆ ಮಾತ್ರ ಖರೀದಿಸಲು ಮಾತ್ರ ಸಾಧ್ಯ. ಏಕೆಂದರೆ ಅವುಗಳ ದರ ಸಾಮಾನ್ಯರ ಪಾಲಿಗೆ ಎಟುಕದ ರೀತಿಯಲ್ಲಿರುತ್ತದೆ.
ಆದರೆ ಈಗ ಕಾಲ ಕೊಂಚ ಬದಲಾಗಿದೆ. ಹೆಚ್ಚುತ್ತಿರುವ ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ವಸ್ತ್ರ ವಿನ್ಯಾಸಕಾರರು ಮುಂಬೈ, ಚೆನ್ನೈನಂಥ ಮೆಟ್ರೋಗಳಿಗೆ ಬದಲಾಗಿ ಎರಡು ಮತ್ತು ಮೂರನೇ ದರ್ಜೆಯ ನಗರಗಳನ್ನು ಕೇಂದ್ರೀಕರಿಸಿ ವಸ್ತ್ರ ವಿನ್ಯಾಸಗಳನ್ನು ಮಾಡಲು ಮುಂದಾಗಿದ್ದಾರೆ. ಹೀಗಾಗಿಯೇ ಒಂದು ಹಂತದಲ್ಲಿ ವಸ್ತ್ರ ವಿನ್ಯಾಸದಲ್ಲಿ ಜನಪ್ರಿಯತೆ ಗಳಿಸಿರುವ ವಿನ್ಯಾಸಕರ ಉಡುಪುಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭಿಸಲು ಆರಂಭವಾಗಿದೆ. ವಸ್ತ್ರೋದ್ಯಮದ ಲೆಕ್ಕಾಚಾರದಲ್ಲಿ ಮತ್ತು ಫ್ಯಾಷನ್ ಉಡುಗೆ ಪ್ರಿಯರ ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ ಇದು ನಿಜಕ್ಕೂ ಉತ್ತಮ ಬೆಳವಣಿಗೆಯೇ.
ಇದಕ್ಕೇನು ಕಾರಣ?
ಈಗ ಎಲ್ಲ ಸ್ಥಳಗಳಲ್ಲಿ ಇಂಟರ್‌ನೆಟ್ ಸಿಗುವ ಕಾಲವಿದು. ಹೀಗಾಗಿ, ಮುಂಬೈನ ಖ್ಯಾತ ವಸ್ತ್ರವಿನ್ಯಾಸಕನೊಬ್ಬ ನಮ್ಮ ಕರ್ನಾಟಕದ ಗ್ರಾಮವೊಂದರಲ್ಲಿರು ಫ್ಯಾಷನ್ ಪ್ರಿಯರಿಗೆ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ವಿವಿಧ ಉಡುಪುಗಳ ಬಗ್ಗೆ ವಿವರಣೆ ಮತ್ತು ಅವರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಲಭಿಸುತ್ತದೆ. ಹೀಗಾಗಿ ಆ ವಿನ್ಯಾಸಕಾರ ನಮ್ಮ ರಾಜ್ಯದ ಗ್ರಾಮೀಣ ಪ್ರದೇಶದ ವ್ಯಕ್ತಿಗಳ ಕೊಳ್ಳುವ ಸಾಮರ್ಥ್ಯವನ್ನೂ ಗಮನಿಸಿ ವಸ್ತ್ರ ವಿನ್ಯಾಸ ಮಾಡಬೇಕಾಗುತ್ತದೆ. ಹೀಗಾಗಿ, ಮೊದಲ, ಎರಡನೆಯ ಮತ್ತು ಮೂರನೆಯ ಹಂತದ ನಗರಗಳಿಗೂ ಫ್ಯಾಷನ್ ಉಡುಪುಗಳು ಅಡ್ಡಿಯಿಲ್ಲದೆ ಲಗ್ಗೆ ಹಾಕಿದೆ.
ಮತ್ತೊಂದು ಪ್ರಮುಖ ಕಾರಣವೆಂದರೆ ವಿದ್ಯಾಭ್ಯಾಸ. ಹಳ್ಳಿಗಳಲ್ಲಿರುವ ಪುರುಷರು ಮತ್ತು ಮಹಿಳೆಯರಿಗೂ ಪದವಿ ಕಾಲೇಜು ವರೆಗೆ ವಿದ್ಯಾಭ್ಯಾಸ ಪಡೆಯಲು ಅನುಕೂಲವಿದೆ. ಇದಾದ ಬಳಿಕ ಸಣ್ಣ ಪ್ರಮಾಣದ ಕೆಲಸವೂ ಹತ್ತಿರದ ತಾಲೂಕು ಕೇಂದ್ರವೋ, ಜಿಲ್ಲಾ ಕೇಂದ್ರವೂ ಅಥವಾ ಅವರ ಮನೆಗೆ ಹತ್ತಿರವಿರುವ ಪಟ್ಟಣದಲ್ಲಿ ಕೆಲಸ ಸಿಗುತ್ತದೆ. ಇದರಿಂದ ಕೈತುಂಬಾ ಸಂಬಳ ಬರುತ್ತದೆ. ಅದರ ಜತೆಗೆ ಪತ್ರಿಕೆಗಳಲ್ಲಿ ಬರುವ ಜಾಹೀರಾತಿನಿಂದ ಉಡುಪುಗಳ ಬಗ್ಗೆ ತಿಳಿವಳಿಕೆ ಮೂಡುತ್ತದೆ.
ಹಲವು ವೆಬ್‌ಸೈಟ್‌ಗಳು
ಜಬಂಗ್.ಕಾಂ (jabang.com),ಸ್ಟೈಲಿಸ್ಟಾ.ಕಾಂ (stylista.com), , ಫ್ಯಾಶನೋ ದ್ಯೋ.ಕಾಂ (fashionandyou.com), ಮೈನ್‌ಟ್ರಾ.ಕಾಂ (myntra.com)ಸೇರಿದಂತೆ ಹಲವು ವೆಬ್‌ಸೈಟ್‌ಗಳು ಫ್ಯಾಷನ್ ಪ್ರಿಯರ ಮನಸ್ಸು ತಣಿಸುವಂಥ ಉಡುಪುಗಳನ್ನು ಸಿದ್ಧಗೊಳಿಸಿ ಜನರಿಗೆ ನೀಡುತ್ತವೆ.
ಕೈಗೆಟಕುವ ದರಗಳು
ಇಂಥ ವೆಬ್‌ಸೈಟ್‌ಗಳಲ್ಲಿ ಕಡಿಮೆ ಮೊತ್ತವಾಗಿರುವ 2 ಸಾವಿರದಿಂದ ಹಿಡಿದು 22 ಸಾವಿರ ವರೆಗಿನ ಮೌಲ್ಯದ ಉಡುಪುಗಳು ದೊರೆಯುತ್ತವೆ.
ಎನ್ನಾರೈಗಳಿಗೆ ಬೇರೆ
ದೇಶಿಯವಾಗಿರುವ ವೆಬ್‌ಸೈಟ್‌ಗಳಲ್ಲಿ ದೇಶದ ಜನರಿಗೆ ಉಡುಪುಗಳನ್ನು ಖರೀದಿ ಮಾಡಬಹುದು. ಅನಿವಾಸಿ ಭಾರತೀಯರಿಗಾಗಿಯೇ ಮುಂಬೈ, ನವದೆಹಲಿಯಲ್ಲಿ ಇ-ಕಾಮರ್ಸ್ ವೆಬ್‌ಸೈಟ್‌ಗಳು ರೂಪಿತವಾಗಿವೆ. ಅವರು ಷ್ಯಾಷನ್ ಉಡುಪುಗಳು, ಫ್ಯಾಷನ್ ಜ್ಯುವೆಲ್ಲರಿ ಸೇರಿದಂತೆ ಅವರ ಹಣಕಾಸಿನ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಅವುಗಳನ್ನು ರೂಪಿಸುತ್ತವೆ. ಏನೇ ಹೇಳಲಿ ಫ್ಯಾಷನ್ ಉಡುಪುಗಳು ಕೇವಲ ಮೆಟ್ರೋ ನಗರಗಳಿಗೆ ಸೀಮಿತವಾಗಿಯಂತೂ ಇಲ್ಲ.
ವಸ್ತ್ರೋದ್ದಿಮೆ ಲೆಕ್ಕಾಚಾರ
2012ರಲ್ಲಿ 712 ಕೋಟಿ
2014ರಲ್ಲಿ 1,000 ಕೋಟಿ
2020ರಲ್ಲಿ 11,000 ಕೋಟಿ (ಸಂಭವನೀಯ ಬೆಳವಣಿಗೆ)
4,000-20,000 ಜನಪ್ರಿಯ ವಿನ್ಯಾಸಕರಿಂದ ಸಿದ್ಧಗೊಂಡ ಉಡುಪಿನ ಬೆಲೆ. ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ
1,800-7,000 ಹೊಸ ವಿನ್ಯಾಸಗಾರರು ರೂಪಿಸುವ ಉಡುಪಿನ ಮೌಲ್ಯ. ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ
ಶೇ.10-12 ಇ-ಕಾಮರ್ಸ್ ಮೂಲಕ ಮಾರಾಟವಾಗುವ ವಸ್ತ್ರ ವಿನ್ಯಾಸ.
ಶೇ.15-20 ಪ್ರತಿ ವರ್ಷ ಇಷ್ಟು ಪ್ರಮಾಣದ ವಸ್ತ್ರ ವಿನ್ಯಾಸಗಳನ್ನು ಹೊಸ ವಿನ್ಯಾಸಗಾರರು ರೂಪಿಸುತ್ತಾರೆ
ಶೇ.8-10 ಪ್ರತಿ ವರ್ಷ ಇಷ್ಟು ಪ್ರಮಾಣದ ವಸ್ತ್ರ ವಿನ್ಯಾಸ ಈಗಾಗಲೇ ಉದ್ದಿಮೆಯಲ್ಲಿ ತೊಡಗಿಸಿರುವವರು ರೂಪಿಸುತ್ತಾರೆ.
= ಜಯಗೌರಿ ಎಂ.