ವಿಮೆ ಏಕೆ?

ವಿಮೆ ಏಕೆ?
Updated on: 

'ನಾನು ಗಟ್ಟಿಯಾಗಿದೀನಿ ಬಿಡು, ದುಡಿದು ನನ್ನ ಕುಟುಂಬಾನ ಸಾಕ್ತೀನಿ' ಎಂದೇ ಪ್ರತಿಯೊಬ್ಬ ಗಂಡಸೂ ನಂಬಿರುತ್ತಾನೆ. ಹಾಗೇ ವಾದಿಸುತ್ತಾನೆ. ನಿರೀಕ್ಷಿಸದ ಅಪಘಾತವಾದಾಗ, ದುಡಿಯುವ ಶಕ್ತಿ ಸೋರಿಹೋದಾಗ, ಕಾಯಿಲೆ ಅಮರಿಕೊಂಡಾಗ, ನಿನ್ನೆ ಇದ್ದ ಕೆಲಸ ಇಂದು ಇಲ್ಲವಾದಾಗ ಎಂಥವನೂ ಧೃತಿಗೆಡುತ್ತಾನೆ. ಜೀವ ವಿಮೆಯ ಅಗತ್ಯ ಅರಿವಾಗುವುದು ಅಂಥ ಸಂದರ್ಭದಲ್ಲಿಯೇ.
ಆಧುನಿಕ ಜಗತ್ತಿನಲ್ಲಿ ವಿಮೆ ಪ್ರತಿಯೊಬ್ಬನಿಗೂ ಅಗತ್ಯ. ಸಾಂಪ್ರದಾಯಿಕ ಕಾರಣಗಳಾದ ಸಾವು, ಆರೋಗ್ಯ, ಕುಟುಂಬ ಇವೆಲ್ಲ ಇದ್ದದ್ದೇ. ಅವಲ್ಲದೆಯೂ ಕೆಲ ಕಾರಣಗಳಿವೆ. ಅವುಗಳೇನೆಂದು ನೋಡೋಣ.
    ನೀವಿಲ್ಲದಾದಾಗ ನಿಮ್ಮ ಫ್ಯಾಮಿಲಿಯ ಅಗತ್ಯಗಳನ್ನು ಪೂರೈಸಲು, ಹೊಸ ದಾರಿ ತೆರೆದುಕೊಳ್ಳುವವರೆಗೆ ಅವರನ್ನು ಬದುಕಿಸಲು ವಿಮೆ ಅಗತ್ಯ.  
    ನೀವು ಸಾಲ ಮಾಡಿರಬಹುದು. ಅದನ್ನು ತೀರಿಸಲು ಏಕಗಂಟಿನಲ್ಲಿ ಸಿಗುವ ಮೊತ್ತವೆಂದರೆ ವಿಮೆ ಮಾತ್ರವೇ. ನಿಮ್ಮ ಸಂಗಾತಿಗೆ ನೆರವಾಗುವಂಥದು ಅದು.
    ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಸಾಲ ತೆಗೆಯಬಹುದು, ಅಗತ್ಯ ಬಿದ್ದಾಗ.
    ಈಗ ಹತ್ತಾರು ಕಂಪೆನಿಗಳ, ನೂರಾರು ಬಗೆಯ ಪಾಲಿಸಿ ವೈವಿಧ್ಯಗಳಿವೆ. ವಿಮೆಯನ್ನು ನೀವು ಸೇವಿಂಗ್ಸ್ ಎಂದೂ ನೋಡಬಹುದು. ಇಂದು ಉಳಿಸಿಟ್ಟ ಹಣ ಇಂದೇ ತೆಗೆಯಲಾಗದಂತಿರುವುದರಿಂದ ನಿಮ್ಮ ಕೈಯಿಂದಲೂ ಸೇಫು.  
    ನೀವು ಕಾಯಿಲೆ ಬಿದ್ದಾಗ ಅಥವಾ ಅಪಘಾತಕ್ಕೊಳಗಾದಾಗ ನಿಮ್ಮ ಮೇಲೆ ಬೀಳುವ ಆರ್ಥಿಕ ಹೊರೆಯನ್ನು ನಿವಾರಿಸಿಕೊಳ್ಳಲು ಇದು ಅಗತ್ಯ.
    ಪಾಲಿಸಿಗಳ ಮೇಲೆ ನಿಮ್ಮ ದುಡಿಮೆಯ ಹಣದಲ್ಲಿ ಕೊಂಚ ಭಾಗವನ್ನು ತೆರಿಗೆಯಿಂದ ಉಳಿಸಿಕೊಳ್ಳಬಹುದು. <

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com