

ಮುಂದಿನ ತಿಂಗಳೇ ಕೇಂದ್ರ ಬಜೆಟ್ ಮಂಡನೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಸರ್ಕಾರದ ಚೊಚ್ಚಲ ಯೋಜನೆಗಳನ್ನು ತೆರೆದಿಡಲಿದ್ದಾರೆ. ನಮ್ಮ ದೇಶದ ಮುಂಗಡ ಪತ್ರದ ಬಗ್ಗೆ ಕೆಲವು ವಿಚಾರಗಳು ಇಲ್ಲಿವೆ. ದೇಶದ ಬಜೆಟ್ ಅನ್ನು ಯೋಜನೆ ಮತ್ತು ಯೋಜನೇತರ ಎಂದು ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು.
ಯೋಜನಾ ವೆಚ್ಚ
ಇದರಲ್ಲಿ ಮೌಲ್ಯಯುತವಾದ ಆಸ್ತಿ ಸೃಷ್ಟಿಸಲಾಗುತ್ತದೆ. ಕೇಂದ್ರ ಸರ್ಕಾರದ ಯೋಜನೆಗಳಾಗಿರುವ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಮೂಲಕ ಕೆಲಸದ ಮೂಲಕ ಗ್ರಾಮೀಣ ಭಾಗದ ಮತ್ತು ಅಗತ್ಯವಿರುವ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಲಾಗುತ್ತದೆ.
ಶೇ.31.4ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರ ಯೋಜನಾ ವೆಚ್ಚಗಳಿಗೆ ವೆಚ್ಚ ಮಾಡುತ್ತದೆ.
5,55,322 ಕೋಟಿ. ಇದು ಕಳೆದ ವರ್ಷ ಮಂಡಿಸಲಾಗಿದ್ದ ದೇಶದ ಮಧ್ಯಂತರ ಬಜೆಟ್ ಮೊತ್ತ.
ಯೋಜನೇತರ ವೆಚ್ಚ
ಇದರಲ್ಲಿ ರಕ್ಷಣೆ, ಸಬ್ಸಿಡಿ, ಬಡ್ಡಿ ಪಾವತಿ ವಿಚಾರಗಳು ಒಳಗೊಂಡಿವೆ.
ಶೇ.68.5 ಮೊತ್ತವನ್ನು ಸರ್ಕಾರ ಯೋಜನೇತರ ವೆಚ್ಚಕ್ಕೆ ವಿನಿಯೋಗ ಮಾಡುತ್ತದೆ.
12,07,892 ಕೋಟಿ 2014-15ರಲ್ಲಿ ಕೇಂದ್ರ ಸರ್ಕಾರ ಯೋಜನೇತರ ವೆಚ್ಚಕ್ಕೆ ನಿಗದಿ ಮಾಡಿದ ಮೊತ್ತ.
ಕೇಂದ್ರ ಸರ್ಕಾರದ ಮುಂಗಡ ಪತ್ರವೆಂದರೆ ಪ್ರತಿ ವರ್ಷಕ್ಕೆ ಸಂಬಂಧಿಸಿದ ಯೋಜನೆ. ಕೇಂದ್ರದ ಯೋಜನೆಗಳಿಗೆ ಸಂಬಂಧಿಸಿದಂತೆ ಅದಕ್ಕೆ ಅದರದ್ದೇ ಆದ ಖಾತೆಗಳಿಂದ ಹಣ ವಿನಿಯೋಗ ಮಾಡುತ್ತದೆ.
ಅದಕ್ಕಾಗಿ ಅದರದ್ದೇ ಆದ ಸಂಪನ್ಮೂಲಗಳನ್ನು ಹೊಂದಿದೆ.
ಕೇಂದ್ರೀಯ ಯೋಜನೆಗಳಿಗೆ ಅದು ಹೊಂದಿರುವ ಯೋಜನೆಯನ್ನು ಗ್ರಾಸ್ ಬಜೆಟರಿ ಸಪೋರ್ಟ್ ಎನ್ನುತ್ತಾರೆ. ಯೋಜನಾ ಆಯೋಗ ಮತ್ತು ಹಣಕಾಸು ಸಚಿವಾಲಯ ಅದನ್ನು ನಿರ್ಧರಿಸುತ್ತದೆ.
4,64, 934 ಕೋಟಿ 2014-15ನೇ ವಿತ್ತೀಯ ವರ್ಷಕ್ಕಾಗಿ ಕೇಂದ್ರ ಸರ್ಕಾರ ತೆಗೆದಿರಿಸಿದ ಮೊತ್ತ (ಕಳೆದ ಬಾರಿಯ ಮಧ್ಯಂತರ ಬಜೆಟ್ ಪ್ರಕಾರ).
ರೆವೆನ್ಯೂ ಎಕ್ಸ್ಪೆಂಡಿಚರ್
ಸರ್ಕಾರದ ದೈನಂದಿನ ಖರ್ಚು ವೆಚ್ಚಗಳು, ವಿವಿಧ ವಿಭಾಗಗಳಿಗೆ ಅಗತ್ಯವಾಗಿರುವ ವೆಚ್ಚಗಳನ್ನು ನಿಭಾಯಿಸುವ ವಿಚಾರವಿದು. ಇದರ ಜತೆಗೆ ಬಡ್ಡಿ ಪಾವತಿ, ಸಬ್ಸಿಡಿಗಳ ಮೇಲೂ ಸರ್ಕಾರ ವೆಚ್ಚ ಮಾಡುತ್ತದೆ.
15,50,054 ಕೋಟಿ ಇದು 2014-15ನೇ ಸಾಲಿಗೆ ನಿಗದಿಪಡಿಸಲಾಗಿರುವ ರೆವೆನ್ಯೂ ಎಕ್ಸ್ಪೆಂಡಿಚರ್ (ಕಳೆದ ಬಾರಿಯ ಮಧ್ಯಂತರ ಬಜೆಟ್ ಪ್ರಕಾರ).
ಕ್ಯಾಪಿಟಲ್ ಎಕ್ಸ್ಪೆಂಡಿಚರ್
ಕೇಂದ್ರ ಸರ್ಕಾರ ತನ್ನದೇ ಆದ ಉದ್ದೇಶಕ್ಕಾಗಿ ಭೂಮಿ, ಕಟ್ಟಡ, ಹಲವು ಯಂತ್ರೋಪಕರಣಗಳು ಮತ್ತು ಇತರ ಅಗತ್ಯಗಳಿಗಾಗಿ ವೆಚ್ಚ ಮಾಡುತ್ತದೆ. ಇದಲ್ಲದೆ ಷೇರುಗಳು, ಸಾಲ ಮತ್ತು ಮುಂಗಡ ನೀಡಿಕೆಗಾಗಿ ಹಣ ವೆಚ್ಚ ಮಾಡುತ್ತದೆ. <
ವಿತ್ತೀಯ ವರ್ಷ ಮೊತ್ತ
2004-05 5,05,791
2005-06 5,08,705
2006-07 5,81,637
2007-08 7,09,373
2008-09 9,00,953
2009-10 10,21,547
2010-11 12,16,576
2011-12 13,18,720
2012-13 14,10,367
2013-14 15,90,434
2014-15 17,63,214
ಮಧ್ಯಂತರ ಮುಂಗಡ ಪತ್ರ ( ಕೋಟಿಗಳಲ್ಲಿ)
- ಸದಾಶಿವ ಕೆ.
khandige29@gmail.com