ಸ್ಮಾರ್ಟ್ ದುನಿಯಾ

ಮೊಬೈಲ್ ಫೋನ್ ಮತ್ತು ಸ್ಮಾರ್ಟ್‌ಫೋನ್ ಎಂಬುದು ಈಗ ದೇಶದ ನಗರ ಹಾಗೂ ಗ್ರಾಮೀಣ ಭಾಗದಲ್ಲೆಲ್ಲ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ..
ಸ್ಮಾರ್ಟ್ ದುನಿಯಾ
Updated on: 

ಮೊಬೈಲ್ ಫೋನ್ ಮತ್ತು ಸ್ಮಾರ್ಟ್‌ಫೋನ್ ಎಂಬುದು ಈಗ ದೇಶದ ನಗರ ಹಾಗೂ ಗ್ರಾಮೀಣ ಭಾಗದಲ್ಲೆಲ್ಲ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಮಾತ್ರವಲ್ಲ, ಅಪಾರ ಬೇಡಿಕೆಯನ್ನೂ ಗಿಟ್ಟಿಸಿಕೊಂಡಿದೆ. ಮೊಬೈಲ್ ಫೋನ್ ಮತ್ತು ಸ್ಮಾರ್ಟ್‌ಫೋನ್ ವಿಭಾಗದಲ್ಲಿನ ಈ ಬೇಡಿಕೆ ಮತ್ತು ಬೆಳವಣಿಗೆಯ ಸಂದರ್ಭವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಿರುವ ದೂರಸಂಪರ್ಕ ಸೇವಾ ಕಂಪನಿಗಳು, ತಮ್ಮ ಗ್ರಾಹಕರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇವೆ. ಈ ನಿಟ್ಟಿನಲ್ಲಿ ಈಗ ದೂರಸಂಪರ್ಕ  ಸೇವಾ ಸಂಸ್ಥೆಗಳು ಮೊಬೈಲ್ ಹೆಲ್ತ್, ಮೊಬೈಲ್ ಎಜುಕೇಶನ್ ಮತ್ತು ಮೊಬೈಲ್ ಕಾಮರ್ಸ್ ಅಪ್ಲಿಕೇಶನ್‌ಗಳತ್ತ ಕಣ್ಣು ನೆಟ್ಟಿವೆ. ಇವುಗಳ ಮೂಲಕ ಮೂಲಕ ತಮ್ಮ ಗ್ರಾಹಕರಿಗೆ ಆರೋಗ್ಯ, ಶಿಕ್ಷಣ ಮತ್ತು ವಾಣಿಜ್ಯ ಚಟುವಟಿಕೆಗೆ ಸಂಬಂಧಿಸಿದ ಹೆಚ್ಚುವರಿ ಸೇವೆಗಳನ್ನು ಒದಗಿಸಬಹುದು ಎಂಬುದೇ ದೂರಸಂಪರ್ಕ ಕ್ಷೇತ್ರದ ಎಲ್ಲ ಕಂಪೆನಿಗಳ ಆಲೋಚನೆಯಾಗಿದೆ.
ಎಂ-ಹೆಲ್ತ್ ಅಪ್ಲಿಕೇಷನ್
ಇದು ಮೊಬೈಲ್ ಫೋನ್ ಬಳಸುವ ವ್ಯಕ್ತಿಯ ದೇಹಾರೋಗ್ಯದ ಕುರಿತ ಮಾಹಿತಿಯನ್ನು ಕ್ಷಿಪ್ರಗತಿಯಲ್ಲಿ ಒದಗಿಸುವುದು ಸೇರಿದಂತೆ ಹತ್ತಾರು ಬಗೆಯಲ್ಲಿ ಆರೋಗ್ಯ ರಕ್ಷಣೆಯ ಗುಟ್ಟುಗಳನ್ನು, ಕ್ರಮಗಳನ್ನೂ ತಿಳಿಸಿಕೊಡುತ್ತದೆ. ಅಲ್ಲದೆ, ಮೊಬೈಲ್ ತಂತ್ರಜ್ಞಾನವನ್ನು ಬಳಸಿಕೊಂಡು, ಮಾರಣಾಂತಿಕವಾದ ದಿಢೀರ್ ಅನಾರೋಗ್ಯ ಕುರಿತು ಸಂಬಂಧಿಸಿದವರಿಗೆ ಮಾಹಿತಿ ರವಾನಿಸುವಂತಹ ಸೌಲಭ್ಯವನ್ನೂ ಒಳಗೊಂಡಿದೆ. ಅದರಲ್ಲೂ ಹೃದಯಾಘಾತ ಮೊದಲಾದ ದಿಢೀರ್ ಅನಾರೋಗ್ಯದ ಸಂದರ್ಭಗಳಲ್ಲಿ ಸಾವಿನ ಅಪಾಯ ತಪ್ಪಿಸಲೂ ಈ ಅಪ್ಲಿಕೇಷನ್ ಸಹಾಯಕವಾಗಿದೆ.
ಎಂ-ಎಜುಕೇಷನ್
ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳಿಗೆ ಶಿಕ್ಷಕರ ಕೊರತೆ ಎಂಬುದು ಸದಾಕಾಲದ ಸಮಸ್ಯೆಯೇ ಆಗಿದೆ. ಇತ್ತೀಚೆಗಂತೂ ಗ್ರಾಮೀಣ ಶಾಲೆಗಳಲ್ಲಿ ಬೋಧಕರು ಕೊರತೆ ತೀವ್ರವಾಗಿದೆ. ಇಂತಹ ಸಂದರ್ಭಗಳಲ್ಲಿ 'ಎಂ-ಎಜುಕೇಷನ್‌' ಬಹಳ ಪ್ರಯೋಜನಕಾರಿಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ನೆರವಾಗಲು ಹತ್ತಾರು ಬಗೆಯ ಪ್ರಯತ್ನಗಳು, ಯೋಜನೆಗಳು ಇರಬಹುದು. ಆದರೆ, ಅವು ಯಾವವೂ ದೇಶದ ಎಲ್ಲೆಡೆಗೂ ತಲುಪುವಲ್ಲಿ ವಿಫಲವಾಗಿವೆ. ಆದರೆ, ಎಂ-ಎಜುಕೇಶನ್ ಶಿಕ್ಷಣ ವಿಭಾಗದ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರವಾಗಿದೆ.
ಎಂ-ಕಾಮರ್ಸ್
ಎಂ-ಕಾಮರ್ಸ್ ವಾಣಿಜ್ಯ ಕ್ಷೇತ್ರದಲ್ಲಿನ ತಂತ್ರಜ್ಞಾನ ಬಳಕೆ ವಿಚಾರದಲ್ಲಿ ಬಹಳ ಯಶಸ್ವಿಯಾಗಿದೆ. ಇದು ಕೀನ್ಯಾದ ಎಂ-ಪೆಸಾದ ಮಾದರಿಯೇ ಆಗಿದೆ. ದೇಶಾದ್ಯಂತ ಬಹಳಷ್ಟು ದೂರಸಂಪರ್ಕ ಕ್ಷೇತ್ರದ ಸೇವಾ ಸಂಸ್ಥೆಗಳು ಇದೇ ಮಾದರಿಯನ್ನು ಅನುಕರಿಸುತ್ತಿವೆ. ದೇಶದ ಬಹಳಷ್ಟು ಜನವಸತಿ ಪ್ರದೇಶಗಳ ಬ್ಯಾಂಕಿಂಗ್  ಕ್ಷೇತ್ರದ  ಸೇವೆಗಳಿಂದ ಬಹುತೇಕ ವಂಚಿತವಾಗಿವೆ. ಅದರಲ್ಲೂ ನಗರಗಳಿಗೆ ವಲಸೆ ಬರುವ ಗ್ರಾಮೀಣ ಭಾಗದ ಜನರು ಹುಟ್ಟೂರಿನಲ್ಲಿನ ಕುಟುಂಬ ವರ್ಗದವರಿಗೆ ಹಣ ಕಳುಹಿಸಿಕೊಡಬೇಕು ಎಂದರೆ ಪರದಾಡುವಂತಾಗುತ್ತದೆ. ಅಂತಹವರಿಗೆ ಬಹಳವಾಗಿ ನೆರವಾಗುತ್ತಿದೆ ಎಂ-ಕಾಮರ್ಸ್. ವಲಸೆ ಬಂದವರು ಮೊಬೈಲ್ ಫೋನ್‌ನ ಈ ಅಪ್ಲಿಕೇಶನ್ ಮೂಲಕವೇ ತಮ್ಮ ಮನೆಯವರಿಗೆ ಹಣ ಕಳುಹಿಸಿಕೊಡಲು ಸುಲಭವಾಗಿದೆ.

- ಆಶಿಶ್ ಪಚೌರಿ
(ಲೇಖಕರು ಟಾಟಾ ಟೆಲಿಸರ್ವಿಸ್ ಮುಖ್ಯ ಮಾಹಿತಿ ಅಧಿಕಾರಿ)


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com