ವಾಣಿಜ್ಯ

ಹೋಳಿಹಬ್ಬಕ್ಕೆ ಏರ್ಸೆಲ್ನ ವಿಶೇಷ ರಂಗು

Published On :

ಟೆಲಿಕಾಂ ಸಂಸ್ಥೆ 'ಏರ್ಸೆಲ್' ಹೋಳಿಹಬ್ಬಕ್ಕೆ ವಿಶೇಷ ರಾಷ್ಟ್ರೀಯ ರೋಮಿಂಗ್ ಪ್ಯಾಕ್ ಆರ್ಸಿ 83ಯನ್ನು ಬಿಡುಗಡೆ ಮಾಡಿದೆ. ರೋಮಿಂಗ್ನಲ್ಲಿರುವಾಗ ಏಕರೀತಿಯ ದರವನ್ನಲ್ಲದೆ ಹೆಚ್ಚುವರಿ ಟಾಕ್ಟೈಮ್ ಕೂಡ ನೀಡುತ್ತದೆ. ಎಲ್ಲಾ ವೃತ್ತದಲ್ಲಿ ದೊರೆಯುವ ಏರ್ಸೆಲ್ ರೋಮಿಂಗ್ ರೀಚಾರ್ಜ್ 83,  ರು. 90 ಟಾಕ್ಟೈಮ್ನ ಅವಕಾಶವಿರುತ್ತದೆ. ರೋಮಿಂಗ್ನಲ್ಲಿದ್ದಾಗ ಬರುವ ಮತ್ತು ನೀವು ಮಾಡುವ ಕರೆಗಳಿಗೆ ಸೆಕೆಂಡಿಗೆ 1 ಪೈಸೆಯಂತೆ ದರ ಕಡಿತವಾಗುತ್ತದೆ. 28 ದಿನಗಳ ಕಾಲ ವ್ಯಾಲಿಡಿಟಿ ಇರುತ್ತದೆ.  ಏರ್ಸೆಲ್ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅನುಪಮ್ ವಾಸುದೇವ್ ಪ್ರಕಾರ, ಗ್ರಾಹಕರಿಗೆ ಹಣಕ್ಕೆ ತಕ್ಕುದಾದ ಮೌಲ್ಯದ ಉತ್ಪನ್ನಗಳನ್ನು ಮತ್ತು ಸೇವೆ ಒದಗಿಸುವುದು ನಮ್ಮ ನಿರಂತರ ಪ್ರಯತ್ನ. ಹಬ್ಬದ ಸಂಭ್ರಮಕ್ಕೆ ಏರ್ಸೆಲ್ ಗ್ರಾಹಕರು ಹೆಚ್ಚು ಮೌಲ್ಯ ಮತ್ತು ಕಡಿಮೆ ದರದ ಈ ಕೊಡುಗೆಯನ್ನು ಆನಂದಿಸಬಹುದು.
ಅತಿಹೆಚ್ಚು ಮಾರಾಟ ಆಗುವ ಕಾರು 'ಆಲ್ಟೋ'
'ಆಲ್ಟೋ' ವಿಶ್ವದ ಅತಿಹೆಚ್ಚು ಮಾರಾಟವಾಗುವ ಕಾರು ಎಂದು ಮೂರನೇ ಬಾರಿಗೆ ಮಾನ್ಯತೆ ಪಡೆದಿದೆ. ಹಿಂದೆ 2012 ಮತ್ತು 2011ರಲ್ಲಿ ಈ ಮಾನ್ಯತೆ ಪಡೆದಿತ್ತು. ಬಹಳಷ್ಟು ಕಾರು ಉತ್ಪಾದಕರು ಸಣ್ಣ ಕಾರುಗಳೊಂದಿಗೆ ಭಾರತದ ಮಾರುಕಟ್ಟೆ ಪ್ರವೇಶಿಸಿದರೂ ಯಾರಿಗೂ ಈ ದಾಖಲೆ ನಿರ್ಮಿಸಲು ಸಾಧ್ಯವಾಗಿಲ್ಲ.
ಆಲ್ಟೋ ಸತತ 9 ವರ್ಷಗಳಿಂದ ಭಾರತದ ಅತಿಹೆಚ್ಚು ಮಾರಾಟವಾಗುವ ಕಾರು ಎಂದು ಗೌರವ ಪಡೆದಿದೆ. ಈ ಬಾರಿ ಜಪಾನ್ನಲ್ಲಿ ಟೊಯೋಟಾ ಅಕ್ವಾ, ಬ್ರೆಜಿಲ್ನಲ್ಲಿ ವೋಕ್ಸ್ವ್ಯಾಗನ್ ಸಣ್ಣ ಕಾರು ಗೋಲ್ ಮತ್ತು ಜರ್ಮನಿಯ ವೋಕ್ಸ್ವ್ಯಾಗನ್ ಗಾಲ್ಫ್ ಅನ್ನು ಹಿಂದಿಕ್ಕಿದೆ. ಆಲ್ಟೋ 2013ರಲ್ಲಿ 2,65,777 ಯೂನಿಟ್ಗಳ ಮಾರಾಟ ಕಂಡಿದೆ. ಟೊಯೊಟಾ ಅಕ್ವಾ 2,62,367 ಯೂನಿಟ್ಗಳು, ವೋಕ್ಸ್ವ್ಯಾಗನ್ ಗೋಲ್ 2,55,057 ಯೂನಿಟ್ ಮತ್ತು ವೋಕ್ಸ್ ವ್ಯಾಗನ್ ಗಾಲ್ಫ್ 2,44,249 ಯೂನಿಟ್ಗಳ ಮಾರಾಟ ಕಂಡಿದೆ ಎಂದು ಮಾರುತಿ ಸುಝುಕಿಯ ಮುಖ್ಯ ಕಾರ್ಯಾಚರಣೆ ಅಧಿಕಾರಿ ಮಾಯಾಂಕ್ ಪರೀಕ್ ತಿಳಿಸಿದ್ದಾರೆ.
ನಿಪ್ಪನ್ಪೇಂಟ್ಸ್ ಪ್ರೈ ಲಿಮಿಟೆಡ್ಗೆ ಪ್ರಶಸ್ತಿ
ಪೇಂಟ್ ಕಂಪನಿ ನಿಪ್ಪನ್ ಪೇಂಟ್ಸ್ ಪ್ರೈ ಲಿಮಿಟೆಡ್ಗೆ ಸಿಐಐ- ದಕ್ಷಿಣ ಪ್ರಾಂತೀಯ ಪರಿಸರ, ಆರೋಗ್ಯ ಮತ್ತು ಸುರಕ್ಷತಾ ಸಂಸ್ಥೆ 'ತ್ರಿ ಸ್ಟಾರ್' ಪ್ರಶಸ್ತಿಯನ್ನು ನೀಡಿದೆ. ಪರಿಸರ, ಆರೋಗ್ಯ ಮತ್ತು ಸುರಕ್ಷತಾ ನಿಯಮಾವಾಳಿ ಮತ್ತು ಅದರ ಅನುಷ್ಠಾನಕ್ಕೆ ಈ ಪ್ರಶಸ್ತಿ ಲಭಿಸಿದೆ. ಸಂಸ್ಥೆಯ ರಮಾಕಾಂತ್ ವಿ ಅಕುಲಾ ಮಾತನಾಡಿ, ನಮ್ಮ ಸಂಸ್ಥೆಯು ಗ್ರಾಹಕರಿಗೆ ಸದಾ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಾ ಬಂದಿದೆ. ಇದೀಗ ಭಾರತೀಯ ಕೈಗಾರಿಕಾ ಒಕ್ಕೂಟದಿಂದ ತ್ರಿ ಸ್ಟಾರ್ ಗರಿಯನ್ನು ಮುಡಿಗೇರಿಸಿಕೊಂಡಿದೆ. ಇದರಿಂದ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯ ನವೀನ ಮಾದರಿಯ ಉತ್ಪನ್ನಗಳನ್ನು ನೀಡಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ರಾಸಾಯನಿಕ ಮುಕ್ತ ಬಣ್ಣ ಬಳಕೆಗೆ 'ರಂಗ್ ದೆ'
ಹೋಳಿಯನ್ನು ರಾಸಾಯನಿಕ ಮುಕ್ತ ಬಣ್ಣಗಳನ್ನು ಬಳಸಿ ಆಚರಿಸಲು 'ರಂಗ್ ದೆ' ನೈಸರ್ಗಿಕ ಆಟದ ಬಣ್ಣಗಳನ್ನು ಪರಿಚಯಿಸಿದೆ. 'ಇಂದು ಸುರಕ್ಷಿತ ಬಣ್ಣಗಳೊಂದಿಗೆ ಆಚರಿಸಿ: ನಮ್ಮ ಮಕ್ಕಳಿಗಾಗಿ ಹಸಿರು ಭವಿಷ್ಯ ಖಾತ್ರಿಗೊಳಿಸಿ' ಎಂಬುದು ಇಲ್ಲಿನ ಮುಖ್ಯ ಆಲೋಚನೆಯಾಗಿದೆ. ರಂಗ್ ದೇ ಬಣ್ಣದಶ್ರೇಣಿಯು ಕೇವಲ ಪರಿಸರಸ್ನೇಹಿ ಮಾತ್ರವಲ್ಲ, ವಯಸ್ಕರು ಮತ್ತು ಮಕ್ಕಳಿಗೂ ಈ ಬಣ್ಣ ಸುರಕ್ಷಿತ. ನೈಸರ್ಗಿಕತೆಯನ್ನು ಮುಖ್ಯ ಧ್ಯೇಯವನ್ನಾಗಿರಿಸಿಕೊಂಡಿರುವ ರಂಗ್ ದೇ ಮಕ್ಕಳ ಕಲ್ಯಾಣದ ಸಾಮಾಜಿಕ ಹಿತವನ್ನು ಬೆಂಬಲಿಸುತ್ತದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಜಿತ್ ರಾಮಚಂದ್ರನ್ ತಿಳಿಸಿದ್ದಾರೆ.
ಅಮೇಜಾನ್ ಡಾಟ್ ಇನ್ ಹ್ಯಾಂಡ್ಬ್ಯಾಗ್ಗಳ ಮಳಿಗೆ
ಅಮೇಜಾನ್ ಡಾಟ್ ಇನ್ ಬ್ರಾಂಡೆಡ್ ಹ್ಯಾಂಡ್ಬ್ಯಾಗ್ಗಳು ಮತ್ತು ಕ್ಲಚಸ್ ಸ್ಟೋರ್ಗಳನ್ನು ಆರಂಭಿಸಿದೆ. 50ಕ್ಕೂ ಹೆಚ್ಚು ಭಾರತೀಯ ಮತ್ತು ಅಂತಾರಾಷ್ಟ್ರೀಯ ಬ್ರಾಂಡ್ಗಳಿಂದ 2500ಕ್ಕೂ ಹೆಚ್ಚಿನ ಶೈಲಿಯ ಹ್ಯಾಂಡ್ಬ್ಯಾಗ್ಗಳಿವೆ.
ಈ ಮಳಿಗೆ ವಿಸ್ತಾರವಾದ ಸಂಗ್ರಹವನ್ನು ಕಡಿಮೆ ದರದಲ್ಲಿ ಹೊಂದಿದೆ. ಮಹಿಳೆಯರ ಅಭಿರುಚಿಗೆ ತಕ್ಕ ಹಾಗೆ ಇದನ್ನು ಸಾದರಪಡಿಸಲಾಗುತ್ತದೆ. ಈ ಮಳಿಗೆಯಲ್ಲಿ ಗ್ರಾಹಕರು ವಿಶ್ವಾಸದಿಂದ ಖರೀದಿ ಮಾಡಬಹುದು. ಇಲ್ಲಿ ಶೇ.100ರಷ್ಟು ಖರೀದಿ ಸಂರಕ್ಷಣೆ ಹೊಂದಬಹುದು. ಪ್ರತಿ ತಿಂಗಳು ನೂತನ ಮತ್ತು ತಾಜಾ ಸಂಗ್ರಹವನ್ನು ಪರಿಚಯಿಸುತ್ತೇವೆ ಎಂದು ಅಮೇಜಾನ್ ಇಂಡಿಯಾದ ಸಾಫ್ಟ್ಲೈನ್ಸ್ ವಿಭಾಗ ಮುಖ್ಯಸ್ಥ ವಿಕಾಸ್ ಪುರೋಹಿತ್ ಹೇಳಿದ್ದಾರೆ.
ವೈಟ್ಫೀಲ್ಡ್ನಲ್ಲಿ ಸಂಡೆ ಸೌಲ್ ಸಂತೆ ಬಜಾರ್
'ಸಂಡೆ ಸೌಲ್ ಸಂತೆ'ಯಿಂದ ನಗರದ ವೈಟ್ಫೀಲ್ಡ್ ಬಳಿಯ ಅಸೆಂಡಾಸ್ ಪಾರ್ಕ್ ಸ್ಕ್ವೇರ್ ಮಾಲ್ ಬಳಿಯ ಕ್ರಿಕೆಟ್ ಆಟದ ಮೈದಾನದಲ್ಲಿ ಸಂಡೆ ಸೌಲ್ ಸಂತೆ ಬಜಾರ್ ಯುಗಾದಿ 2014 ಆಯೋಜನೆ ಮಾಡಲಾಗಿತ್ತು. ಫ್ಯಾಶನ್ ಮತ್ತು ಲೈಫ್ಸ್ಟೈಲ್ಗೆ ಸಂಬಂಧಪಟ್ಟ ಸುಮಾರು 200ಕ್ಕೂ ಅಧಿಕ ಮಳಿಗೆಗಳು ಅಲ್ಲಿದ್ದವು. ವಿವಿಧ ನಮೂನೆಯ ಕರಕುಶಲ ವಸ್ತುಗಳು, ಚಿತ್ರಕಲೆ, ಹಳೆಯ ಕಾಲದ ಮಾದರಿಯ ಚಿನ್ನಾಭರಣಗಳು, ಮಡಕೆ ಮತ್ತು ಇತರೆ ಕರಕುಶಲ ವಸ್ತುಗಳ ಮಾರಾಟ ಏರ್ಪಡಿಸಲಾಗಿತ್ತು. ಮಕ್ಕಳಿಗಾಗಿ ವಿಶೇಷವಾಗಿ ಮಾಡಲಾಗಿದ್ದ ಕಿಡ್ಸ್ ಕಾರ್ನರ್ನಲ್ಲಿ ಗಾಳಿಪಟ ಮಾಡುವುದು, ಚಿತ್ರ ಬಿಡಿಸುವುದು ಇತರೆ ಚಟುವಟಿಕೆಗಳಿಗೆ ಅವಕಾಶ ಮಾಡಲಾಗಿತ್ತು.
ಸಿಸ್ಟೆಮಾ ಶ್ಯಾಮ್ ಟೆಲಿ ಸರ್ವೀಸ್ ಲಿ.ನಿಂದ ದೂರ ಸಂಪರ್ಕ ಸೇವೆ
ಸಿಸ್ಟೆಮಾ ಶ್ಯಾಮ್ ಟೆಲಿ ಸರ್ವೀಸ್ ಲಿಮಿಟೆಡ್ ದೇಶದಲ್ಲಿ ಎಂಟಿಎಸ್ ಬ್ರಾಂಡ್ನಡಿ ದೂರಸಂಪರ್ಕ ಸೇವೆ ಒದಗಿಸಲಿದೆ. ಎಂ ಸೆಕ್ಯೂರ್ ಸೇವೆ ಆರಂಭಿಸುವುದರೊಂದಿಗೆ ದೂರ ಸಂವೇದಿ ಭದ್ರತಾ ಮತ್ತು ನಿಗಾ ಕ್ಷೇತ್ರದ ಪ್ರವೇಶವನ್ನು ಘೋಷಿಸಿದೆ. ಎಂ ಸೆಕ್ಯೂರ್ ಭದ್ರತಾ ಮತ್ತು ನಿಗಾ ಪರಿಕರವಾಗಿದೆ. ಇದನ್ನು ಅಳವಡಿಸುವುದರಿಂದ ವಿಡಿಯೋ ನಿಗಾಸೇವೆ ಪಡೆಯಬಹುದು.
   ಹಗಲು ರಾತ್ರಿ ವೇಳೆಯಲ್ಲಿ ದೃಶ್ಯದ ಗುಣಮಟ್ಟ ಉತ್ತಮವಾಗಿರುತ್ತದೆ. ಮೈಕ್ರೋಫೋನ್ ಮತ್ತು ಸ್ಪೀಕರ್ ಜೊತೆಯಾಗಿ ಬರಲಿದ್ದು ಧ್ವನಿಗ್ರಾಹಕ ಸೇವೆಯನ್ನು ಒಳಗೊಂಡಿದೆ. ಎಂ ಸೆಕ್ಯೊರ್ನಿಂದ 32 ಜಿಬಿ ಸಾಮರ್ಥ್ಯದವರೆಗೂ ವೀಡಿಯೋ ಸಂಗ್ರಹ ಮತ್ತು ಸ್ವಯಂ ಚಾಲಿತ ದಾಖಲೆ ಸೌಲಭ್ಯಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.