ಕರ್ನಾಟಕದಲ್ಲಿ ಹೂಡಿಕೆಗೆ ಅಮೆರಿಕ ಕಂಪನಿಗಳಿಗೆ ಆಹ್ವಾನ

ಕರ್ನಾಟಕದಲ್ಲಿ ಹೂಡಿಕೆ ಮಾಡಲು ಅಮೆರಿಕದಲ್ಲಿನ ಉದ್ಯಮಿಗಳನ್ನು ಆಹ್ವಾನಿಸುವ ಪ್ರಕ್ರಿಯೆಯಲ್ಲಿ ರಾಜ್ಯದ ನಿಯೋಗ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ವಾಷಿಂಗ್ಟನ್: ಕರ್ನಾಟಕದಲ್ಲಿ ಹೂಡಿಕೆ ಮಾಡಲು ಅಮೆರಿಕದಲ್ಲಿನ ಉದ್ಯಮಿಗಳನ್ನು ಆಹ್ವಾನಿಸುವ ಪ್ರಕ್ರಿಯೆಯಲ್ಲಿ ರಾಜ್ಯದ ನಿಯೋಗ ನಿರತವಾಗಿದೆ. 
ನ್ಯೂಯಾರ್ಕ್ ಮತ್ತು ಸಿಲಿಕಾನ್ ವ್ಯಾಲಿಯಲ್ಲಿ ರೋಡ್‍ಶೋ ನಡೆಸಿದ ರಾಜ್ಯದ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದ ನಿಯೋಗ ಭಾರತದಲ್ಲಿ ಉದ್ಯಮ ಸ್ನೇಹಿ ಪರಿಸರವನ್ನು ರೂಪಿಸಲು ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ವಿವರಣೆ ನೀಡಿದ್ದಾರೆ. 
ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು, ರಾಜ್ಯದಲ್ಲಿ ಬಂಡವಾಳ ತೊಡಗಿಸುವಂತೆ ಇಲ್ಲಿನ ಉದ್ಯಮಿಗಳನ್ನು ಆಹ್ವಾನಿಸಿದ್ದಾರೆ. ಭೌತಿಕ, ಡಿಜಿಟಲ್ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ತೆರಿಗೆ ನೀತಿಗಳ ಸುಧಾರಣೆ ಕ್ರಮಗಳನ್ನೂ ಭಾರತ ಸರ್ಕಾರ ಕೈಗೊಳ್ಳುತ್ತಿದೆ ಎಂದು ಇಲ್ಲಿ ಉದ್ಯಮಿಗಳ ಸಭೆ ಆಯೋಜಿಸಿದ್ದ ಯುಎಸ್ ಇಂಡಿಯಾ ಬಿಸಿನೆಸ್ ಕೌನ್ಸಿಲ್ (ಯುಎಸ್ ಐಬಿಸಿ) ಸಭೆಯಲ್ಲಿ ದೇಶಪಾಂಡೆ ಹೇಳಿದ್ದಾರೆ. 
ವಿಶ್ವದರ್ಜೆಯ ಹಲವಾರು ಇನೋವೇಟಿವ್ ಉದ್ಯಮಗಳು ಬೆಂಗಳೂರಿಗೆ ಆಗಮಿಸಿವೆ. ರಾಜ್ಯದಲ್ಲಿ ಈಗಾಗಲೆ 2 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾ ದನೆ ಹೆಚ್ಚಿಸಲಾಗಿದೆ ಮತ್ತು 360 ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ನ್ನು ಹೊಂದಿವೆ ಎಂದು ವಿವರಿಸಿದ್ದಾರೆ. 
ಯುಎಸ್‍ಐಬಿಸಿ ಅಧ್ಯಕ್ಷ ಮುಖೇಶ್ ಕರ್ನಾಟಕದಲ್ಲಿನ ಉನ್ನತ ದರ್ಜೆಯ ಶಿಕ್ಷಣವನ್ನು ಪ್ರಶಂಸಿಸಿದರು, ಕೌನ್ಸಿಲ್‍ನ ಸದಸ್ಯರು ಮುಂದಿನ ಹೂಡಿಕೆ ಯೋಜನೆಗಳು ರಾಜ್ಯದಲ್ಲಿ ಕೈಗೊಳ್ಳಲು ಸಾಧ್ಯವಾಗುವಂತೆ ನೋಟ ಹರಿಸಲಾಗುವುದು ಎಂದು ಭರವಸೆ ನೀಡಿದರು. ಕೌನ್ಸಿಲ್‍ನ ಹಲವಾರು ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com