ಸಮತೋಲನ ಆರ್ಥಿಕ ನೀತಿ ಅಗತ್ಯ

ಚೀನಾ ಆರ್ಥಿಕತೆ ಹಿನ್ನಡೆಯತ್ತ ಸಾಗಿರುವುದರಿಂದ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಿರುವುದ ರಿಂದ ಆಗುವ ಪರಿಣಾಮಗಳನ್ನು ತಡೆಯಲು ದೇಶೀಯ ಹಣಕಾಸು ನೀತಿಗಳನ್ನು ಎಚ್ಚರಿಕೆ...
ಆರ್ ಬಿಐ ಗವರ್ನರ್ ರಘುರಾಮ್ ರಾಜನ್ (ಸಂಗ್ರಹ ಚಿತ್ರ)
ಆರ್ ಬಿಐ ಗವರ್ನರ್ ರಘುರಾಮ್ ರಾಜನ್ (ಸಂಗ್ರಹ ಚಿತ್ರ)
Updated on: 

ಮುಂಬೈ: ಚೀನಾ ಆರ್ಥಿಕತೆ ಹಿನ್ನಡೆಯತ್ತ ಸಾಗಿರುವುದರಿಂದ ಮತ್ತು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಿರುವುದ ರಿಂದ ಆಗುವ ಪರಿಣಾಮಗಳನ್ನು ತಡೆಯಲು ದೇಶೀಯ ಹಣಕಾಸು ನೀತಿಗಳನ್ನು ಎಚ್ಚರಿಕೆ ಮತ್ತು ಸಮತೋಲನದಿಂದ ಕೂಡಿರುವಂತೆ ರೂಪಿಸಬೇಕೆಂದು ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಂ ರಾಜನ್ ಹೇಳಿದ್ದಾರೆ.

ಮುಂದೆ ಬರಬಹುದಾದ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಆದರೂ ದೇಶೀಯ ಆರ್ಥಿಕ ನೀತಿಗಳನ್ನು ಎಚ್ಚರಿಕೆಯಿಂದ ರೂಪಿಸುವ ಅಗತ್ಯವಿದೆ ಎಂದು ಹೊಸದಾಗಿ ಬಿಡುಗಡೆ ಮಾಡಿರುವ ಹಣಕಾಸು ಸುಸ್ಥಿರತೆ ವರದಿ (ಎಫ್ ಎಸ್‍ಆರ್) ಯಲ್ಲಿ ಹೇಳಿದ್ದಾರೆ. ಹಣಕಾಸು ಸುಸ್ಥಿರತೆ ಮತ್ತು ಅಭಿವೃದ್ಧಿ ಪರಿಷತ್ತಿನ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಎಫ್ ಎಸ್‍ಆರ್ ಬಿಡುಗಡೆ ಗೊಳಿಸಿತು. ಪ್ರಮುಖ ಮುಂದುವರೆದ ಮತ್ತು ವೇಗವಾಗಿ ಆರ್ಥಿಕ ಅಭಿವೃದ್ಧಿ ಕಾಣುತ್ತಿರುವ ದೇಶಗಳಿಂದ ಸವಾಲುಗಳು ಎದುರಾಗಲಿವೆ. ಇದರ ಜೊತೆಗೆ ಬಂಡವಾಳ ಹೂಡಿಕೆ ಬಿಗಿಗೊಂಡಿರುವುದು ಮತ್ತು ಉತ್ಪನ್ನಗಳ ದರ ಕುಸಿರುವುದು ಮತ್ತಷ್ಟು ಸವಾಲುಗಳನ್ನು ಒಡ್ಡಲಿದೆ.

 ಫೆಡರಲ್ ಬ್ಯಾಂಕ್ ಬಡ್ಡಿದರ ಗಳನ್ನು ಹೆಚ್ಚಿಸಿರುವುದು ಹಣದುಬ್ಬರ ಏರಿಕೆಗೂ ಕಾರಣವಾಗಲಿದೆ ಎಂದು ರಾಜನ್ ಹೇಳಿದ್ದಾರೆ. ಎಂಟು ವರ್ಷಗಳ  ನಂತರ ಫೆಡರಲ್ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ನಿರ್ವಹಿಸಲು ಅಗತ್ಯವಾದ ಸಿದ್ಧತೆಯನ್ನು ಅಮೆರಿಕ ಮಾಡಿಕೊಂಡಿದೆ ಎಂದಿದ್ದಾರೆ. ಹಣದುಬ್ಬರವನ್ನು ನಿಯಂತ್ರಿಸುವುದು ಆರ್‍ಬಿಐ ಮುಂದಿರುವ ಪ್ರಮುಖ ಗುರಿಯಾಗಿದೆ ಎಂದಿರುವ ಅವರು, ಅನಿಯಮಿತ ಮಳೆ ಈ ಆತಂಕಗಳನ್ನು ಮತ್ತಷ್ಟು ಹಚ್ಚಿಸಿದೆ. ಹಣ ದುಬ್ಬರ  ಸದ್ಯ ನಿಯಂತ್ರ ಣದಲ್ಲಿದ್ದರೂ ಹವಾಗುಣದಲ್ಲಾಗುವ ಏರುಪೇರನ್ನುಅಂದಾಜಿಸಲು ಸಾಧ್ಯ ವಿಲ್ಲ. ಇದು ಹಣದುಬ್ಬರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com