ಮುಂಬೈ: ದೇಶದ ಸ್ಟಾರ್ಟ್‍ಅಪ್‍ಗಳಿಗೆ 2015 ಸ್ಮರಣೀಯ ವರ್ಷವಾಗಿದೆ. ಈ ವರ್ಷದಲ್ಲಿ ದೇಶದ ಸ್ಟಾರ್ಟ್‍ಅಪ್‍ಗಳಲ್ಲಿ ವಿದೇಶಿ ಹೂಡಿಕೆದಾರರು, ದೇಶದ ಉದ್ಯಮಿಗಳು ರು.54,641 ಟಿವರೆಗೂ ಬಂಡವಾಳ ಹೂಡಿಕೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಹೂಡಿಕೆ ಮತ್ತು ಕಾರ್ಯಾಚರಣೆ ಒಪ್ಪಂದಗಳು ಏರ್ಪಟ್ಟಿವೆ.
ಉದ್ಯಮಿಗಳಾದ ರತನ್ ಟಾಟಾ, ಎನ್. ಆರ್.ನಾರಾಯಣ ಮೂರ್ತಿ, ಆಲಿಬಾಬ ಮತ್ತು ಸಾಫ್ಟ್ ಬ್ಯಾಂಕ್ ಸೇರಿದಂತೆ ಹಲವಾರು ಜಾಗತಿಕ ಹೂಡಿಕೆ ಸಂಸ್ಥೆಗಳು ಬಂಡವಾಳ ತೊಡಗಿಸಿವೆ ಎಂದು ತಾಂತ್ರಿಕ ಮತ್ತು ಸ್ಟಾರ್ಟ್‍ಅಪ್ ಬ್ಲಾಗ್ ಸಂಸ್ಥೆ ಟ್ರಾಕ್ ಡಾಟ್ ಇನ್ ವರದಿ ಹೇಳಿದೆ.
2014ರಲ್ಲಿ 304 ಡೀಲ್‍ಗಳು ಏರ್ಪಟ್ಟು ರು.33,000 ಕೋಟಿ ಹೂಡಿಕೆಯಾಗಿತ್ತು. ಆದರೆ 2015ರಲ್ಲಿ 936 ಒಪ್ಪಂದಗಳು ಏರ್ಪಟ್ಟಿವೆ.