

ಬೆಂಗಳೂರು: ಪ್ರಮುಖ ಗೃಹೋಪಯೋಗಿ ಸಾಧನಗಳ ಮಾರಾಟ ಕಂಪನಿಗಳಾದ ಹೋಮ್ ಟೌನ್, ಹೋಮ್ ಸ್ಟಾಪ್ ಮತ್ತು ಅಟ್ ಹೋಮ್ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿ ಕೊಂಡಿರುವುದಾಗಿ ದೇಶದ ಪ್ರಮುಖ ಆನ್‍ಲೈನ್ ವಹಿವಾಟು ಕಂಪನಿ ಫ್ಲಿಪ್‍ಕಾರ್ಟ್ ಹೇಳಿದೆ.
ಈ ಕಂಪನಿಗಳ ಎಲ್ಲ ಉಪಕರಣಗಳು ಇನ್ನು ಮುಂದೆ ಫ್ಲಿಪ್‍ಕಾರ್ಟ್‍ನಲ್ಲಿ ಖರೀದಿಸಬಹುದಾಗಿದೆ. ಫ್ಲಿಪ್ ಕಾರ್ಟ್‍ನಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಬ್ರಾಂಡ್‍ಗಳ 7 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳು ಸಿಗಲಿವೆ. ಗೃಹೋಪಯೋಗಿ ಉತ್ಪನ್ನಗಳ ಪ್ರಮುಖ ಬ್ರಾಂಡ್‍ಗಳೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದರಿಂದ ಕಂಪನಿಯ ಗ್ರಾಹಕರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಫ್ಲಿಪ್ ಕಾರ್ಟ್ ನ ಮುಖ್ಯ ವಹಿವಾಟು ಅಧಿಕಾರಿ ಅಂಕಿತ್ ನಗೋರಿ ಹೇಳಿದ್ದಾರೆ.