ಬಿಒಬಿ ಲಾಭ ರು.1,052 ಕೋಟಿ

ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ ರು.1,052.15 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ್ದ ರು.1,361.88 ಕೋಟಿಗೆ ಹೋಲಿಸಿದರೆ ಶೇ.22.74ರಷ್ಟು ಇಳಿಮುಖ ಕಂಡಿದೆ...
ಬ್ಯಾಂಕ್ ಆಫ್ ಬರೋಡ
ಬ್ಯಾಂಕ್ ಆಫ್ ಬರೋಡ

ನವದೆಹಲಿ: ಪ್ರಸಕ್ತ ಹಣಕಾಸು ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ ರು.1,052.15 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ  ಗಳಿಸಿದ್ದ ರು.1,361.88 ಕೋಟಿಗೆ ಹೋಲಿಸಿದರೆ ಶೇ.22.74ರಷ್ಟು ಇಳಿಮುಖ ಕಂಡಿದೆ.

ಅನುತ್ಪಾದಕ ಆಸ್ತಿಯನ್ನು ಕೈಬಿಡಲು ಕೈಗೊಂಡ ಕ್ರಮಗಳು ಮತ್ತು ಸಿಬ್ಬಂದಿ ವೇತನ ಹೆಚ್ಚಳದಿಂದಾಗಿ ಲಾಭ ಕಡಿಮೆಯಾಗಿದೆ. ಬ್ಯಾಂಕ್‍ನ ಒಟ್ಟಾರೆ ಆದಾಯದಲ್ಲಿ ಶೇ.4.8ರಷ್ಟು ಏರಿಕೆ ಕಂಡು ರು.12,243.72 ಕೋಟಿಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಆದಾಯ ರು.11,682.50 ಕೋಟಿಯಷ್ಟಿತ್ತು ಎಂದು ಮುಂಬೈ ಷೇರು ಮಾರುಕಟ್ಟೆಗೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com